ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಬೆಳಗಾವಿಯಲ್ಲಿ ಸೇತುವೆಗಳು ಜಲಾವೃತ, ಶಾಲೆಗಳಿಗೆ ರಜೆ

ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಬೈಲಹೊಂಗಲ, ಕಿತ್ತೂರ, ಖಾನಾಪುರ, ರಾಮದುರ್ಗ, ಸವದತ್ತಿ, ಚಿಕ್ಕೋಡಿ, ಹುಕ್ಕೇರಿ ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.;

Update: 2025-08-20 04:40 GMT
ಸಾಂದರ್ಭಿಕ ಚಿತ್ರ

ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಆಗಸ್ಟ್​ 22ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 20ರಂದು ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌, ದಕ್ಷಿಣ ಕನ್ನಡಕ್ಕೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಆ. 21ರಂದು ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ. 

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.ಹಾಸನ, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಕ್ಯಾಸಲ್​ರಾಕ್, ಮಂಕಿ, ಕೊಟ್ಟಿಗೆಹಾರ, ಆಗುಂಬೆ, ಸಿದ್ದಾಪುರ, ಲೋಂಡಾ, ಕುಂದಾಪುರ, ಕೋಟಾ, ಕದ್ರಾ, ಜಯಪುರ, ನಿಪ್ಪಾಣಿ, ಕೊಪ್ಪ, ಉಡುಪಿ, ಶೃಂಗೇರಿ, ಕಿತ್ತೂರು, ಕಮ್ಮರಡಿ, ಜೋಯ್ಡಾ, ಹಳಿಯಾಳ, ಗೇರುಸೊಪ್ಪ, ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ.

ಯಲ್ಲಾಪುರ, ಶಿರಾಲಿ, ಮೂಡುಬಿದಿರೆ, ಖಾನಾಪುರ, ಕಾರವಾರ, ಕಳಸ, ಸಂಕೇಶ್ವರ, ಕುಮಟಾ, ಕಾರವಾರ, ಕಾರ್ಕಳ, ಹೊನ್ನಾವರ, ಧರ್ಮಸ್ಥಳ, ಚಿಕ್ಕೋಡಿ, ಪುತ್ತೂರು, ಕಲಘಟಗಿ, ಹುಕ್ಕೇರಿ, ಗೋಕರ್ಣ, ಚಿಟಗುಪ್ಪ, ಭಾಗಮಂಡಲ, ಬೆಳ್ತಂಗಡಿ, ಬಂಟವಾಳ, ಮಾಣಿ, ಕಿರವತ್ತಿ, ಹುಂಚದಕಟ್ಟೆಯಲ್ಲಿ ಕೂಡ ಮಳೆಯಾಗಿದೆ.

ಬೆಳಗಾವಿ, ಉಪ್ಪಿನಂಗಡಿ, ಎನ್​ಆರ್​ಪುರ, ಮುಲ್ಕಿ, ಮುದ್ದೇಬಿಹಾಳ, ಕುಂದಗೋಳ, ಮಹಾಲಿಂಗಪುರ, ತರೀಕೆರೆ, ಆನವಟ್ಟಿ, ಧಾರವಾಡ, ಸೇಡಂ, ರಾಯಚೂರು, ಶಾಹಪುರ, ಪೊನ್ನಂಪೇಟೆ, ನೆಲೋಗಿ, ಮುಂಡಗೋಡು, ಮಾನ್ವಿ, ನಲ್ವತವಾಡ, ಕೆಂಭಾವಿ, ಹುಣಸಗಿ, ಎಚ್​​ಡಿ ಕೋಟೆ, ಚಿತ್ತಾಪುರ, ಭದ್ರಾವತಿ, ಬಸವನ ಬಾಗೇವಾಡಿ, ಅಥಣಿ, ಅಣ್ಣಿಗೆರೆ, ಅರಕಲಗೋಡು, ಆಲಮಟ್ಟಿಯಲ್ಲಿ ಮಳೆಯಾಗಿದೆ.

ಮುಳುಗಿದ ಸೇತುವೆಗಳು

ಬೆಳಗಾವಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ವೇದಗಂಗಾ ನದಿಗೆ ಅಡ್ಡಲಾದ ಅಕ್ಕೋಳ–ಸಿದ್ದಾಳ, ಜತ್ರಾಟ–ಭೀವಶಿ, ಬಾರವಾಡ–ಕುನ್ನೂರ, ದೂದಗಂಗಾ ನದಿಯ ಕಾರದಗಾ–ಬೋಜ್, ಬೋಜವಾಡಿ–ಕುನ್ನೂರ, ಮಲ್ಲಿಕವಾಡ–ದತ್ತವಾಡ, ಕೃಷ್ಣಾ ನದಿಯ ಯಕ್ಸಂಬಾ–ದತ್ತವಾಡ, ಕಲ್ಲೋಳ–ಯಡೂರ, ಬಾವನಸೌದತ್ತಿ–ಮಾಂಜರಿ ಸೇತುವೆಗಳು ಪ್ರಚಲಿತ ವರ್ಷದಲ್ಲಿ ಎಂಟನೆ ಬಾರಿ ಮುಳುಗಡೆ ಯಾಗಿವೆ ಪರಿಣಾಮ ಗ್ರಾಮಸ್ಥರು ಪರ್ಯಾಯ ಮಾರ್ಗಗಳ ಮೂಲಕ ಸಂಚಾರ ನಡೆಸುವ ಪರಿಸ್ಥಿತಿ ಎದುರಾಗಿದೆ.

ಶಾಲೆಗಳಿಗೆ ರಜೆ ಘೋಷಣೆ 

5 ಕ್ಕೂ ಹೆಚ್ಚು ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಬುಧವಾರ (ಆಗಸ್ಟ್ 20) ಹಾವೇರಿ,ಬೆಳಗಾವಿ, ಧಾರವಾಡ , ಉತ್ತರ ಕನ್ನಡ , ಬಾಗಲಕೋಟೆ ಸೇರಿದಂತೆ ಒಟ್ಟು 5 ಜಿಲ್ಲೆಗಳ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ಬೆಳಗಾವಿ ಭಾಗದಲ್ಲೂ ಭಾರೀ ಮಳೆಯಾಗುತ್ತಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಬೈಲಹೊಂಗಲ, ಕಿತ್ತೂರ, ಖಾನಾಪುರ, ರಾಮದುರ್ಗ, ಸವದತ್ತಿ, ಚಿಕ್ಕೋಡಿ, ಹುಕ್ಕೇರಿ ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ, ಬೈಲಹೊಂಗಲ, ಕಿತ್ತೂರು, ಖಾನಾಪುರ, ರಾಮದುರ್ಗ ಮತ್ತು ಸವದತ್ತಿ ತಾಲೂಕಿನಲ್ಲಿ ಶಾಲೆಗಳ ಜತೆಗೆ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Tags:    

Similar News