Heavy Rain Alert | ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆ
ಮುಂಗಾರು ಮಳೆ ಮಾರುತ ಚುರುಕಾಗಿದ್ದು, ಒಳನಾಡಿನಲ್ಲಿ ಮುಂದಿನ 24 ಗಂಟೆ ಗುಡುಗು & ಸಿಡಿಲು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.;
ಮುಂಗಾರು ಮಳೆ ಮಾರುತಗಳು ಚುರುಕಾಗಿದ್ದು, ರಾಜ್ಯದ ಒಳನಾಡಿನಲ್ಲಿ ಮುಂದಿನ 24 ಗಂಟೆ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಮಳೆಯಾಗಲಿದೆ.
ಬೀದರ್, ಭಾಲ್ಕಿ, ಆಗುಂಬೆ, ಗಬ್ಬೂರು, ರಾಯಚೂರು, ಶೋರಾಪುರ, ಗೇರುಸೊಪ್ಪ, ಲೋಂಡಾ, ಮುನ್ನಳ್ಳಿ, ಸಿದ್ದಾಪುರ, ಧರ್ಮಸ್ಥಳ, ಕಲಘಟಗಿ, ಕವಡಿಮಟ್ಟಿ, ದೇವದುರ್ಗ, ದೇವರಹಿಪ್ಪರಗಿ, ಔರಾದ್, ಸಿಂಧನೂರು, ಶೃಂಗೇರಿ, ಮಂಕಿ, ಕದ್ರಾ, ಬೆಳ್ತಂಗಡಿ, ಹಳಿಯಾಳ, ಉಡುಪಿ, ಕಾರ್ಕಳ, ಶಹಾಪುರ, ಕಮ್ಮರಡಿ, ಕೊಪ್ಪ, ಎನ್ಆರ್ಪುರ, ಗೋಕರ್ಣ, ಹೊನ್ನಾವರ, ಧಾರವಾಡ, ಕುಂದಗೋಳ, ಕುರ್ಡಿ, ಕೂಡಲಸಂಗಮ, ಹುಬ್ಬಳ್ಳಿ, ಮಾನ್ವಿ, ಕೂಡಲಸಂಗಮ, ಜಯಪುರ, ಕೊಟ್ಟಿಗೆಹಾರ, ಕಳಸದಲ್ಲಿ ಮಳೆಯಾಗಿದೆ.
ಸಂಜೆ ನಂತರ ಬೆಂಗಳೂರಿನಲ್ಲಿ ಮಳೆ!
ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ ಸಂಜೆಯ ನಂತರ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.