H D Devegowda | 35 ಸಾವಿರ ಅಡಿ ಎತ್ತರದಲ್ಲಿ ಜನ್ಮದಿನ ಆಚರಿಸಿಕೊಂಡ ಮಾಜಿ ಪ್ರಧಾನಿ ದೇವೇಗೌಡರು; ಏರ್ ಇಂಡಿಯಾ ಸಿಬ್ಬಂದಿಯಿಂದ ಜನ್ಮದಿನ ಆಚರಣೆ
ಮಾಜಿ ಪ್ರಧಾನಿ ದೇವೇಗೌಡ ಅವರು ಗುರುವಾರ ಸಂಜೆ ನವದೆಹಲಿಯಿಂದ ಬೆಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಏರ್ ಇಂಡಿಯಾ ಸಿಬ್ಬಂದಿ ಮುಂಗಡವಾಗಿ ಮಾಜಿ ಪ್ರಧಾನಿ ದೇವೇಗೌಡರ 92ನೇ ಜನ್ಮದಿನವನ್ನು ಆಗಸದಲ್ಲೇ ಆಚರಿಸಿದ್ದಾರೆ.;
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ 92ನೇ ವರ್ಷದ ಜನ್ಮದಿನವನ್ನು ಅವಿಸ್ಮರಣೀಯಗೊಳಿಸಲು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ 35 ಸಾವಿರ ಅಡಿ ಎತ್ತರದಲ್ಲಿ ಕೇಕ್ ಕತ್ತರಿಸಿ ಜನ್ಮದಿನದ ಶುಭಾಶಯ ತಿಳಿಸಿದೆ.
ಮಾಜಿ ಪ್ರಧಾನಿ ದೇವೇಗೌಡ ಅವರು ಗುರುವಾರ ಸಂಜೆ ನವದೆಹಲಿಯಿಂದ ಬೆಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಏರ್ ಇಂಡಿಯಾ ಸಿಬ್ಬಂದಿ ಮುಂಗಡವಾಗಿ ಮಾಜಿ ಪ್ರಧಾನಿ ದೇವೇಗೌಡರ 92ನೇ ಜನ್ಮದಿನವನ್ನು ಆಗಸದಲ್ಲೇ ಆಚರಿಸಿದ್ದಾರೆ.
ಸುಮಾರು 35 ಸಾವಿರ ಅಡಿ ಎತ್ತರದಲ್ಲಿ ಮಾಜಿ ಪ್ರಧಾನಿಯ ಜನ್ಮದಿನ ಆಚರಿಸಿದ್ದೇವೆ. ಇದು ಅತ್ಯಂತ ಸಂತಸದ ಕ್ಷಣ ಎಂದು ಬರೆದಿರುವ ಪತ್ರವನ್ನು ಏರ್ ಇಂಡಿಯಾ ಹಂಚಿಕೊಂಡಿದೆ.
ಇದಕ್ಕೆ ಪ್ರತಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಕೂಡ ಏರ್ ಇಂಡಿಯಾ ಸಿಬ್ಬಂದಿ ತೋರಿಸಿದ ಪ್ರೀತಿ, ಕಾಳಜಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶ್ಲಾಘಿಸಿ ಧನ್ಯವಾದ ಅರ್ಪಿಸಿದ್ದಾರೆ. ಮೇ18 ರಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌರು 92 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
1933ರ ಮೇ 18ರಂದು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಜನಿಸಿದ್ದ ದೇವೇಗೌಡರು 1996-97ರ ಅವಧಿಯಲ್ಲಿ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. 92ರ ಇಳಿ ವಯಸ್ಸಿನಲ್ಲೂ ರಾಜ್ಯಸಭಾ ಸದಸ್ಯರಾಗಿ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಅಲ್ಲದೇ ಕರ್ನಾಟಕದ ಹಲವು ಸಮಸ್ಯೆಗಳನ್ನು ಕಲಾಪದಲ್ಲಿ ಪ್ರಶ್ನಿಸಿ ಕೇಂದ್ರದ ಗಮನ ಸೆಳೆಯುತ್ತಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಎನ್ಡಿಎ ಮಿತ್ರಕೂಟ ಸೇರಿತ್ತು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಸ್ಥಾನ ನೀಡಲಾಗಿದೆ.