ಎನ್‌ಎಚ್‌ಎಂ ನೌಕರರ ಸೇವಾವಧಿ 3 ತಿಂಗಳು ವಿಸ್ತರಣೆ ಮಾಡಿ ಸರ್ಕಾರ ಆದೇಶ

ಗುತ್ತಿಗೆ ನೌಕರರ ಸೇವೆಯನ್ನು ಕೇಂದ್ರ ಸರ್ಕಾರ 2019 ರಲ್ಲಿ ರೂಪಿಸಿದ ಕನಿಷ್ಠ ಕಾರ್ಯಕ್ಷಮತೆ ಮಾನದಂಡದ ಆಧಾರದ ಮೇಲೆ ಪ್ರತಿ ವರ್ಷ ನವೀಕರಿಸಲಾಗುತ್ತಿದ್ದು, ಇದು ಮೌಲ್ಯಮಾಪನದ ಒಂದು ನಿಯಮಿತ ಪ್ರಕ್ರಿಯೆಯಾಗಿದೆ.;

Update: 2025-07-28 15:03 GMT

ಎನ್‌ಎಚ್‌ಎಂ ನೌಕರರ ಸೇವಾ ವಿಸ್ತರಣೆ ಕುರಿತು ಸರ್ಕಾರ ಹೊರಡಿಸಿರುವ ಪತ್ರ

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ಕನಿಷ್ಠ ಕಾರ್ಯಕ್ಷಮತೆಯ ಆಧಾರದ ಮೇಲೆ ಸೇವಾ ಗುತ್ತಿಗೆ ವಿಸ್ತರಣೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ರಾಜ್ಯದಲ್ಲಿ ಸುಮಾರು 29,000 ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಈ ಗುತ್ತಿಗೆ ನೌಕರರ ಸೇವೆಯನ್ನು ಕೇಂದ್ರ ಸರ್ಕಾರ 2019 ರಲ್ಲಿ ರೂಪಿಸಿದ ಕನಿಷ್ಠ ಕಾರ್ಯಕ್ಷಮತೆ ಮಾನದಂಡದ ಆಧಾರದ ಮೇಲೆ ಪ್ರತಿ ವರ್ಷ ನವೀಕರಿಸಲಾಗುತ್ತಿದ್ದು, ಇದು ಮೌಲ್ಯಮಾಪನದ ಒಂದು ನಿಯಮಿತ ಪ್ರಕ್ರಿಯೆಯಾಗಿದೆ.

ರಾಜ್ಯವು ಕಾರ್ಯಕ್ರಮದ ಪ್ರಸ್ತುತ ಅಗತ್ಯತೆಗಳ ಆಧಾರದ ಮೇಲೆ ಕಾರ್ಯಕ್ಷಮತೆಯ ಮಾನದಂಡವನ್ನು ಪರಿಷ್ಕರಿಸಿದೆ. ಈ ವರ್ಷ, ಕಾರ್ಯಕ್ಷಮತೆ ಮೌಲ್ಯಮಾಪನ ಪ್ರಕ್ರಿಯೆಯು ಸಮಗ್ರ ಪರಿಶೀಲನೆಗೆ ಒಳಪಟ್ಟು ಪರಿಷ್ಕೃತ ಮಾನದಂಡಗಳನ್ನು ಬಳಸಲಾಗಿತ್ತು. ಇದರ ಪರಿಣಾಮವಾಗಿ, ನವೀಕರಿಸಿದ ಮೌಲ್ಯಮಾಪನ ಸಮಗ್ರ ಅನುಷ್ಠಾನದಿಂದಾಗಿ ಗುತ್ತಿಗೆ ನವೀಕರಣ ತಡವಾಯಿತು ಎಂದು ಹೇಳಿದೆ.

ಈ ಮೌಲ್ಯಮಾಪನಗಳ ಫಲಿತಾಂಶಗಳ ಆಧಾರದ ಮೇಲೆ, ತೃಪ್ತಿಕರ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ಎನ್‌ಎಚ್‌ಎಂ ನೌಕರರಿಗೆ ಮಾರ್ಚ್ 31, 2026 ರವರೆಗೆ, ಅತೃಪ್ತಿಕರ ಕಾರ್ಯಕ್ಷಮತೆಯನ್ನು ಹೊಂದಿರುವ ನೌಕರರಿಗೆ ಮೂರು ತಿಂಗಳ ಅವಧಿಗೆ (ಅ. 31) ಮಾತ್ರ ಸೇವಾ ಗುತ್ತಿಗೆಯನ್ನು ನವೀಕರಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Tags:    

Similar News