ಸರ್ಕಾರದಿಂದ ಸಾರಿಗೆ ನೌಕರರ ಸಂಬಳ ಕಟ್‌, ರೈತರಿಗೆ ಲಾಠಿ ಏಟು : ಆರ್.‌ ಅಶೋಕ್‌ ಆಕ್ರೋಶ

ನಮ್ಮದು ಕಾರ್ಮಿಕರ, ರೈತರ ಪರವಾದ ಸರ್ಕಾರ ಎಂದು ಸುಳ್ಳು ಹೇಳುವ ಕಾಂಗ್ರೆಸ್‌ ಸರ್ಕಾರ, ಕಾರ್ಮಿಕರು, ರೈತರನ್ನು ನಡೆಸಿಕೊಳ್ಳುವ ರೀತಿಯೇ ಇದು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ.;

Update: 2025-08-07 06:31 GMT

ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಹಾಗೂ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ಸಿನ 'ನ್ಯಾಯ ಯೋಧ' ರಾಹುಲ್‌ ಗಾಂಧಿ ಅವರು ಎಲ್ಲೆಡೆ  ಪ್ರದರ್ಶಿಸುವ ಸಂವಿಧಾನದ ಹೊತ್ತಿಗೆಯಲ್ಲಿ ಸಾರಿಗೆ ನೌಕರರು ಮುಷ್ಕರ ಮಾಡುವ ಹಾಗೂ ರೈತರು ರಸಗೊಬ್ಬರ ಕೇಳುವ ಹಕ್ಕಿಲ್ಲವೇ? ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಪ್ರತಿಕ್ರಿಯಿಸಿರುವ ಅವರು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ಮಾಡಿದ ಸಾರಿಗೆ ನೌಕರರಿಗೆ ಸಂಬಳ ಕಡಿತಗೊಳಿಸಲಾಗಿದೆ. ಸುರಪುರದಲ್ಲಿ ರಸಗೊಬ್ಬರ ಕೇಳಿದ ರೈತರಿಗೆ ಲಾಠಿ  ಏಟು ಕೊಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಟರಿ ಸಿಎಂ ಸಿದ್ದರಾಮಯ್ಯನವರೇ, ನಮ್ಮದು ಕಾರ್ಮಿಕರ, ರೈತರ ಪರವಾದ ಸರ್ಕಾರ ಎಂದು ಸುಳ್ಳು ಹೇಳುವ ನೀವು, ಕಾರ್ಮಿಕರನ್ನು, ರೈತರನ್ನು ಕಾಂಗ್ರೆಸ್‌ ಸರ್ಕಾರ ನಡೆಸಿಕೊಳ್ಳುವ ರೀತಿಯೇ ಇದು? ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಹಿಟ್ಲರ್ ಧೋರಣೆ ಬಿಡಿ. ನಿಮ್ಮ ಕೈಲಾದರೆ ಕಾರ್ಮಿಕರು, ರೈತರ ಹಿತಾಸಕ್ತಿ ಕಾಪಾಡುವ ಕೆಲಸ ಮಾಡಿ. ನಿಮ್ಮ ಕೈಯಲ್ಲಿ ಆಗುವುದಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಕಿಡಿಕಾರಿದ್ದಾರೆ. 

Tags:    

Similar News