ರಾಮನಗರ ಜಿಲ್ಲೆಯ ಹೆಸರು ಬದಲಾವಣೆ; "ಬೆಂಗಳೂರು ದಕ್ಷಿಣ ಜಿಲ್ಲೆʼಗೆ ಸರ್ಕಾರ ಅಸ್ತು
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ರಾಮನಗರ ಹೆಸರು ಬದಲಾವಣೆಗೆ ಶತ ಪ್ರಯತ್ನ ನಡೆಸಿದ್ದರು. ಆದರೆ, ರಾಮನಗರ ಜಿಲ್ಲೆಯ ಉದಯಕ್ಕೆ ಕಾರಣರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಮನಗರ ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದರು.;
ಡಿ. ಕೆ ಶಿವಕುಮಾರ್
ರಾಮನಗರ ಜಿಲ್ಲೆಯ ಹೆಸರು ಬದಲಾಯಿಸಿ, ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡಬೇಕು ಎಂಬ ಡಿಸಿಎಂ ಡಿಕೆ ಶಿವಕುಮಾರ್ ಅವರ ಪ್ರಯತ್ನಕ್ಕೆ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ, ಈ ಸಂಬಂಧ ಆದೇಶವೂ ಹೊರ ಬೀಳುತ್ತದೆ ಎಂದು ಹೇಳಿದ್ದಾರೆ. ರಾಮನಗರ ಜಿಲ್ಲಾ ಕೇಂದ್ರ ರಾಮನಗರದಲ್ಲೇ ಇರುತ್ತದೆ ಆದರೆ ಅದರ ಹೆಸರು ಮಾತ್ರ ಬದಲಾವಣೆ ಆಗುತ್ತದೆ ಎಂದು ಅವರು ತಿಳಿಸಿದರು.
ನಾವು ಬೆಂಗಳೂರಿಗೆ ಸೇರಿದವರು, ಬೆಂಗಳೂರು ಗ್ರಾಮಾಂತರ ಜಿಪಂ ಸದಸ್ಯನಾಗಿದ್ದೆ. ಇಡೀ ಜಗತ್ತಿನಲ್ಲೇ ಬೆಂಗಳೂರು ದಕ್ಷಿಣ ಅಭಿವೃದ್ಧಿ ಆಗುತ್ತದೆ. ಹಣಕಾಸು ವಿಚಾರ ಇಲ್ಲಿ ಬರುವುದಿಲ್ಲ. ಹೆಸರು ಬದಲಾವಣೆಗೆ ತಿರಸ್ಕರಿಸಲು ಕೇಂದ್ರಕ್ಕೆ ಅಧಿಕಾರ ಇಲ್ಲ. ಆದರೆ ಅವರಿಗೆ ತಿಳಿಸಬೇಕಿತ್ತು, ತಿಳಿಸಿದ್ದೇವೆ ಅಷ್ಟೇ. ಕೆಲವರು ರಾಜಕೀಯಕ್ಕಾಗಿ ಅಡ್ಡಿ ಮಾಡಿದರು. ಇದು ರಾಜ್ಯದ ವಿಚಾರ, ರಾಜ್ಯ ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ರಾಮನಗರ ಹೆಸರು ಬದಲಾವಣೆಗೆ ಶತ ಪ್ರಯತ್ನ ನಡೆಸಿದ್ದರು. ಆದರೆ, ರಾಮನಗರ ಜಿಲ್ಲೆಯ ಉದಯಕ್ಕೆ ಕಾರಣರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಮನಗರ ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಡಿಕೆಶಿ ಪ್ರಯತ್ನಕ್ಕೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಅಸ್ತು ಎಂದಿದೆ.