Selfie Incident | ಅಗ್ನಿಶಾಮಕ ದಳ ಕಾರ್ಯಾಚರಣೆ ಯಶಸ್ವಿ: ಸಾವು ಗೆದ್ದು ಬಂದ ಯುವತಿ!
ಅಗ್ನಿಶಾಮಕ ದಳದ ಕಾರ್ಯಾಚಣೆಯೇ ಬಲು ರೋಚಕವಾಗಿತ್ತು. ಭಾನುವಾರ ಈ ಘಟನೆ ಸಂಭವಿಸಿದ್ದು, ಸೋಮವಾರ ಆಕೆಯನ್ನು ಕಾಪಾಡುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಸುಮಾರು 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿ ಬದುಕಿ ಬಂದಿದ್ದಾಳೆ.;
ಸೆಲ್ಫಿ ತೆಗೆಯುವಾಗ ಕಾಲು ಜಾರಿ ಕೆರೆ ಕೋಡಿಗೆ ಬಿದ್ದ ಯುವತಿಯೊಬ್ಬಳನ್ನು ಅಗ್ನಿಶಾಮಕ ದಳ ಸತತ 12 ಗಂಟೆ ಕಾರ್ಯಾಚರಣೆ ಮೂಲಕ ರಕ್ಷಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯ ಶ್ರಮದಿಂದಾಗಿ ಯುವತಿ ಕೊನೆಗೂ ಸಾವನ್ನೇ ಗೆದ್ದು ಬಂದಿದ್ದಾಳೆ.
ನಿರಂತರ ಹನ್ನೆರಡು ಗಂಟೆ ಕಾಲ ನಡೆದ ಅಗ್ನಿಶಾಮಕ ದಳದ ರಕ್ಷಣಾ ಕಾರ್ಯಾಚಣೆಯೇ ರೋಚಕವಾಗಿತ್ತು. ಭಾನುವಾರ ಯುವತಿ ಕಾಲು ಜಾರಿ ಬಿದ್ದ ಘಟನೆ ಸಂಭವಿಸಿದ್ದು, ಸೋಮವಾರ ಆಕೆಯನ್ನು ಕಾಪಾಡುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.
ಹತ್ತೊಂಬತ್ತು ವರ್ಷದ ಹಂಸ, ಭಾನುವಾರ ಸ್ನೇಹಿತರ ಜೊತೆ ತುಮಕೂರು ಜಿಲ್ಲೆಯ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದಿಳು. ಈ ವೇಳೆ ಅಲ್ಲೆ ಸಮೀಪದಲ್ಲಿರುವ ಮೈದಾಳ ಕೆರೆ ಕೋಡಿ ಬಳಿ ಹೋಗಿದ್ದರು. ಯುವತಿ ರಭಸವಾಗಿ ಹರಿಯುವ ನೀರಿನೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಮುಂದಾದಾಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿ ಕಲ್ಲುಬಂಡೆಗಳ ಮಧ್ಯೆ ಸಿಲುಕಿಕೊಂಡಿದ್ದಳು.
ಯುವತಿ ನೋಡ ನೋಡುತ್ತಿದ್ದಂತೆ ಕಾಲು ಜಾರಿ ಕೆರೆಗೆ ಬಿದ್ದಿದ್ದನ್ನು ನೋಡಿ ಅಕ್ಕಪಕ್ಕದವರು, ಸ್ನೇಹಿತರು ರಕ್ಷಣೆಗೆ ಪ್ರಯತ್ನಿಸಿದರೂ ಆಕೆಯನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತ್ವರಿತ ಕಾರ್ಯಾಚರಣೆ ನಡೆಸಿದ್ದರು. ಅಗ್ನಿಶಾಮಕ ಸಿಬ್ಬಂದಿ ಸತತ 12 ಗಂಟೆಗಳ ಕಾರ್ಯಾಚರಣೆ ನಡೆಸಿದ್ದರು.
ಭಾನುವಾರ ಸಂಜೆ 5.30ಕ್ಕೆ ಕೆರೆ ಬಳಿ ಹಂಸ ಮತ್ತು ಸ್ನೇಹಿತರು ರೀಲ್ಸ್ ಮಾಡುವಾಗ ಈ ಅವಘಡ ಸಂಭವಿಸಿತ್ತು. ಮೊಣಕಾಲುದ್ದದ ನೀರಿನಲ್ಲಿ ಸುಳಿ ಜಾಸ್ತಿ ಇದ್ದ ಕಾರಣ ಜಾರಿ ಹೋಗಿ ಕಲ್ಲು ಬಂಡೆಗಳ ನಡುವೆ ಸಿಲುಕಿಕೊಂಡ ಯುವತಿಯನ್ನು ಅದೃಷ್ಟವೇನೋ ಎಂಬಂತೆ ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿಯನ್ನು ರಕ್ಷಣೆ ಮಾಡಿಸಲಾಗಿದೆ. ಅಧಿಕಾರಿಗಳು ಸಿಬ್ಬಂದಿ ಹಗ್ಗ ಬಿಟ್ಟು ಯುವತಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಯನ್ನು ಹೊರಕ್ಕೆ ತರುತ್ತಿದ್ದಂತೆ ಹೊರಗಿನಿಂದ ಹರ್ಷೋದ್ಘಾರ ಕೇಳಿ ಬಂದಿದೆ. ಅಕ್ಕಪಕ್ಕ ನಿಂತಿದ್ದವರೆಲ್ಲರು ರಕ್ಷಣಾ ಕಾರ್ಯಾಚರಣೆ ವಿಡಿಯೋ ಮಾಡಿದ್ದಾರೆ. ಪೋಟೋ ಕ್ಲಿಕ್ಕಿಸಿದ್ದಾರೆ. ರಕ್ಷಣಾ ಸಿಬ್ಬಂದಿಗೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.