ಉಳ್ಳಾಲದಲ್ಲಿ ಪಶ್ಚಿಮ ಬಂಗಾಳದ ಯುವತಿಯ ಮೇಲೆ ಗ್ಯಾಂಗ್ ರೇಪ್; ಮೂವರು ಆರೋಪಿಗಳು ವಶಕ್ಕೆ
ಪೊಲೀಸ್ ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದಿಂದ ಮಂಗಳೂರಿಗೆ ಆಗಮಿಸಿದ್ದ ಈ ಯುವತಿಗೆ ಕೆಲಸ ಕೊಡಿಸುವ ನೆಪದಲ್ಲಿ ಆರೋಪಿಗಳು ಮದ್ಯ ಕುಡಿಸಿದ್ದಾರೆ. ಬಳಿಕ ಆಕೆಯನ್ನು ಒಂದು ನಿರ್ಜನ ಪ್ರದೇಶಕ್ಕೆ ಸ್ಥಳಕ್ಕೆ ಕರೆದೊಯ್ದು, ಮೂವರು ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.;
ಎಐ ರಚಿತ ಚಿತ್ರ
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯೊಬ್ಬಳ ಮೇಲೆ ಗ್ಯಾಂಗ್ ರೇಪ್ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿಯನ್ನು ಅರೆಪ್ರಜ್ಞಾವಸ್ಥೆಯಲ್ಲಿ, ದೇಹದಾದ್ಯಂತ ಗಾಯಗಳೊಂದಿಗೆ ಪತ್ತೆಯಾದ ಬಳಿಕ ಘಟನೆ ಬಯಲಿಗೆ ಬಂದಿದೆ. ಪ್ರಸ್ತುತ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಭುರಾಜ್, ಮಿಥುನ್ ಹಾಗೂ ಮನೀಶ್ ಆರೋಪಿಗಳು. ಪ್ರಭುರಾಜ್ 10 ವರ್ಷಕ್ಕಿಂತಲೂ ಹೆಚ್ಚು ಕಾಲ ಆಟೋಚಾಲಕನಾಗಿದ್ದರೆ,. ಆತನ ಸ್ನೇಹಿತನಾಗಿರುವ ಆರೋಪಿ ಮಿಥುನ್ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಮನೀಶ್ ಚಾಲಕ ಹಾಗೂ ಎಲೆಕ್ಟ್ರಿಷಿಯನ್ ವೃತ್ತಿಗಳನ್ನು ಮಾಡುತ್ತಿದ್ದ
ಪೊಲೀಸ್ ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದಿಂದ ಮಂಗಳೂರಿಗೆ ಆಗಮಿಸಿದ್ದ ಈ ಯುವತಿಗೆ ಕೆಲಸ ಕೊಡಿಸುವ ನೆಪದಲ್ಲಿ ಆರೋಪಿಗಳು ಮದ್ಯ ಕುಡಿಸಿದ್ದಾರೆ. ಬಳಿಕ ಆಕೆಯನ್ನು ಒಂದು ನಿರ್ಜನ ಪ್ರದೇಶಕ್ಕೆ ಸ್ಥಳಕ್ಕೆ ಕರೆದೊಯ್ದು, ಮೂವರು ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಘಟನೆಯ ಬಳಿಕ ಯುವತಿಯನ್ನು ಅರೆಪ್ರಜ್ಞಾವಸ್ಥೆಯಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ದಿನವಿಡೀ ಸುತ್ತಾಡಿಸಿದ್ದ ಪ್ರಭುರಾಜ್
ಕೇರಳದಿಂದ ರೈಲಿನಲ್ಲಿ ನಗರಕ್ಕೆ ಬಂದಿದ್ದ ಯುವತಿ ಪ್ರಭುರಾಜ್ ಆಟೋರಿಕ್ಷಾದಲ್ಲಿ ಪ್ರಯಾಣಿಸಿದ್ದರು. ಗೆಳೆಯನ ಜೊತೆ ಕೆಲಸ ಹುಡುಕಲು ಮಂಗಳೂರಿಗೆ ಬಂದಿದ್ದು. ಆತನ ಜೊತೆ ಜಗಳವಾಗಿದ್ದ ವಿಷಯವನ್ನೂ ಆತನಲ್ಲಿ ವಿವರಿಸಿದ್ದಳು. ತನ್ನ ಮೊಬೈಲ್ ಕೆಟ್ಟು ಹೋಗಿರುವ ವಿಷಯವನ್ನೂ ತಿಳಿಸಿದ್ದಳು. ಆಕೆಯ ಸ್ನೇಹ ಸಂಪಾದಿಸಲು ಪ್ರಭುರಾಜ್ ಮೊಬೈಲ್ ದುರಸ್ತಿಗಾಗಿ ಆಕೆಯನ್ನು ಅನೇಕ ಮಳಿಗೆಗಳಿಗೆ ಆತ ಕರೆದೊಯ್ದಿದ್ದ. ಈ ವೇಳೆ ರಿಕ್ಷಾ ಚಾಲಕ ಆಕೆಗೆ ಉಪಾಹಾರ ನೀಡಿದ್ದ. ಮೊಬೈಲ್ ದುರಸ್ತಿಯ ಹಣವನ್ನೂ ಆತನೇ ಪಾವತಿಸಿದ್ದ.
ರಿಕ್ಷಾ ಚಾಲಕ ಆಹಾರದಲ್ಲಿ ಮತ್ತು ಬರುವ ಪದಾರ್ಥ ಬೆರೆಸಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ಆಕೆಯ ಪ್ರಜ್ಞೆ ತಪ್ಪಿಸಿ ಮುನ್ನೂರು ಪ್ರದೇಶಕ್ಕೆ ಕರೆದೊಯ್ಯುವಾಗ ರಿಕ್ಷಾಚಾಲಕ ಹಾಗೂ ಆತನ ಗೆಳೆಯರು ಪಾನಮತ್ತರಾಗಿದ್ದರು. ಆ ಯುವತಿಗೂ ಮದ್ಯ ಕುಡಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲಸ ಕೊಡಿಸುವ ಭರವಸೆ
ಆರೋಪಿಗಳು ಯುವತಿಗೆ ಕೆಲಸದ ಭರವಸೆ ನೀಡಿ ಮೋಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376D (ಗ್ಯಾಂಗ್ ರೇಪ್) ಮತ್ತು ಇತರ ಸಂಬಂಧಿತ ಕಾನೂನುಗಳಡಿ ಪ್ರಕರಣ ದಾಖಲಿಸಿದ್ದಾರೆ.
ಸ್ಥಳದಲ್ಲಿ ಸಿಕ್ಕಿರುವ ಸಾಕ್ಷ್ಯಗಳು ಮತ್ತು ಯುವತಿಯ ಹೇಳಿಕೆಯ ಆಧಾರದ ಮೇಲೆ ತನಿಖೆ ಮುಂದುವರಿದಿದೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ, ಆರೋಪಿಗಳ ಚಲನವಲನಗಳನ್ನು ಗುರುತಿಸಲಾಗಿದೆ. ಜೊತೆಗೆ, ಆರೋಪಿಗಳಿಗೆ ಸಂಬಂಧಿಸಿದ ಇತರ ವ್ಯಕ್ತಿಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಗಾಯಗೊಂಡ ಯುವತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ದೇಹದಾದ್ಯಂತ ಗಾಯಗಳಿದ್ದು, ಆಕೆ ತೀವ್ರ ಮಾನಸಿಕ ಆಘಾತದಲ್ಲಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಜೊತೆಗೆ, ಮಾನಸಿಕ ಸಮಾಲೋಚನೆಯನ್ನೂ ನೀಡಲಾಗುತ್ತಿದೆ. ಯುವತಿಯ ಕುಟುಂಬಕ್ಕೆ ಈ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರು ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ.