ಗಾಳಿ ಆಂಜನೇಯ ಸ್ವಾಮಿ ರಥೋತ್ಸವ: ಮೈಸೂರು ರಸ್ತೆಯಲ್ಲಿ ಸಂಚಾರ ಬದಲಾವಣೆ

ದೇವಸ್ಥಾನದ ಸುತ್ತಮುತ್ತ ಸಂಚಾರ ಬದಲಾವಣೆ ಮಾಡಲಾಗಿದ್ದು, ಕೆಂಗೇರಿ ಕಡೆಯಿಂದ ಮೈಸೂರು ರಸ್ತೆಯ ಮೂಲಕ ನಗರ ಪ್ರವೇಶಿಸುವ ಎಲ್ಲ ಮಾದರಿಯ ವಾಹನಗಳನ್ನು ಕಿಂಕೊ ಜಂಕ್ಷನ್‌ನಿಂದ ಹೊಸಗುಡ್ಡದಹಳ್ಳಿ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ ತಾತ್ಕಾಲಿಕ ನಿರ್ಬಂಧಿಸಲಾಗಿದೆ.

Update: 2024-04-18 07:28 GMT
ಗಾಳಿ ಆಂಜನೇಯ ಸ್ವಾಮಿ

ಬೆಂಗಳೂರು: ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ರಥೋತ್ಸವ ಏ. 17 ರಿಂದ 19ರ ವರೆಗೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ದೇವಸ್ಥಾನದ ಸುತ್ತಮುತ್ತ ಸಂಚಾರ ಬದಲಾವಣೆ ಮಾಡಲಾಗಿದ್ದು, ಕೆಂಗೇರಿ ಕಡೆಯಿಂದ ಮೈಸೂರು ರಸ್ತೆಯ ಮೂಲಕ ನಗರ ಪ್ರವೇಶಿಸುವ ಎಲ್ಲ ಮಾದರಿಯ ವಾಹನಗಳನ್ನು ಕಿಂಕೊ ಜಂಕ್ಷನ್‌ನಿಂದ ಹೊಸಗುಡ್ಡದಹಳ್ಳಿ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ ತಾತ್ಕಾಲಿಕ ನಿರ್ಬಂಧಿಸಲಾಗಿದೆ.

ಸಂಚಾರ ನಿಷೇಧ

ಮೆಜೆಸ್ಟಿಕ್ ಮತ್ತು ಸಿಟಿ ಮಾರುಕಟ್ಟೆ ಕಡೆಯಿಂದ ಮೈಸೂರು ರಸ್ತೆಯ ಮೂಲಕ ಕೆಂಗೇರಿ ಮತ್ತು ಮೈಸೂರು ಕಡೆಗೆ ತೆರಳುವ ಎಲ್ಲ ಮಾದರಿಯ ವಾಹನಗಳನ್ನು ಹೊಸಗುಡ್ಡದಹಳ್ಳಿ ಜಂಕ್ಷನ್‌ನಿಂದ ಕಿಂಕೊ ಜಂಕ್ಷನ್‌ವರೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಪರ್ಯಾಯ ಮಾರ್ಗಗಳು1:

ಕೆಂಗೇರಿ ಕಡೆಯಿಂದ ಮೈಸೂರು ರಸ್ತೆ ಮೂಲಕ ನಗರ ಪ್ರವೇಶಿಸುವ ಎಲ್ಲ ಮಾದರಿ ವಾಹನಗಳು ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದುಕೊಳ್ಳಬೇಕು. ನಾಗರಬಾವಿ ಜಂಕ್ಷನ್ ಹತ್ತಿರ ಬಲಕ್ಕೆ ತಿರುವು ಪಡೆದು ಚಂದ್ರಾಲೇಔಟ್‌ನ 80 ಅಡಿ ರಸ್ತೆಯಲ್ಲಿ ಸಾಗಿ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮೂಲಕ ಮುಂದಕ್ಕೆ ಸಾಗಬಹುದು. ನಂತರ, ಎಂಸಿ ಸರ್ಕಲ್ ಬಳಿ ಬಲಕ್ಕೆ ತರುವು ಪಡೆದು ಮಾಗಡಿ ರಸ್ತೆಯ ಮೂಲಕ ತೆರಳಬಹುದು.

ಮೆಜೆಸ್ಟಿಕ್ ಕಡೆಗೆ ಹೋಗುವ ವಾಹನಗಳು ಹುಣಸೇಮರ ಜಂಕ್ಷನ್ ಬಳಿ ಎಡಕ್ಕೆ ತಿರುವು ಪಡೆದು ಕೆ.ಬಿ.ಜಂಕ್ಷನ್ ಮೂಲಕ ಸಾಗಿ ಖೋಡೆ ಸರ್ಕಲ್ ತಲುಪಿ ಅಲ್ಲಿಂದ ಮೆಜೆಸ್ಟಿಕ್ ಕಡೆಗೆ ತೆರಳಬಹುದು.

ಸಿಟಿ ಮಾರುಕಟ್ಟೆಗೆ ತೆರಳುವ ವಾಹನ ಸವಾರರು ಹುಣಸೇಮರ ಜಂಕ್ಷನ್ ಬಳಿ ಬಲಕ್ಕೆ ತಿರುವ ಪಡೆದು ಬಿನ್ನಿಮಿಲ್ ಜಂಕ್ಷನ್ ಸರ್ಕಲ್ ಬಳಿ ಎರಡಕ್ಕೆ ತಿರುವು ಪಡೆದು ಮಾರುಕಟ್ಟೆ ತಲುಪಬಹುದು.

ಪರ್ಯಾಯ ಮಾರ್ಗ 2:

ನಾಯಂಡಹಳ್ಳಿ, ಬಿಎಚ್‌ ಇಎಲ್ ಮತ್ತು ಮೈಸೂರು ರಸ್ತೆ ಮೂಲಕ ಮೆಜೆಸ್ಟಿಕ್ ಮತ್ತು ಸಿಟಿ ಮಾರುಕಟ್ಟೆಗೆ ಬರುವ ವಾಹನಗಳು ಕಿಂಕೊ ಜಂಕ್ಷನ್ ಬಳಿ ಎಡಕ್ಕೆ ತಿರುವು ಪಡೆದು ಅತ್ತಿಗುಪ್ಪೆ ಜಂಕ್ಷನ್, ವಿಜಯನಗರ ಬಸ್ ನಿಲ್ದಾಣ ಮೂಲಕ ಎಂಸಿ ಸರ್ಕಲ್‌ನಲ್ಲಿ ಬಲಕ್ಕೆ ತಿರುವು ಪಡೆದು ಮಾಗಡಿ ಮುಖ್ಯರಸ್ತೆಯ ಮೂಲಕ ಸಾಗಬಹುದು.

ಮೆಜೆಸ್ಟಿಕ್‌ಗೆ ಹೋಗುವ ವಾಹನಗಳು ಹುಣಸೇಮರ ಜಂಕ್ಷನ್ ಬಳಿ ಎಡ ತಿರುವು ಪಡೆದು ಕೆಬಿ ಜಂಕ್ಷನ್ ಮೂಲಕ ಸಾಗಿ ಖೋಡೆ ಸರ್ಕಲ್ ತಲುಪಿ ಮೆಜೆಸ್ಟಿಕ್‌ಗೆ ತೆರಳಬಹುದು.

ಸಿಟಿ ಮಾರುಕಟ್ಟೆಗೆ ಹೋಗುವ ವಾಹನ ಸವಾರರು ಹುಣಸೇಮರ ಜಂಕ್ಷನ್ ಬಳಿ ಬಲಕ್ಕೆ ತಿರುವು ಪಡೆದು ಬಿನ್ನಿಮಿಲ್ ಜಂಕ್ಷನ್ ಮೂಲಕ ಸಿರ್ಸಿ ಸರ್ಕಲ್ ಬಳಿ ಎಡಕ್ಕೆ ತಿರುವು ಪಡೆದು ಮಾರುಕಟ್ಟೆಗೆ ತಲುಪಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

Tags:    

Similar News