ಹುಬ್ಬಳ್ಳಿ ವಿದ್ಯಾರ್ಥಿನಿ ಹತ್ಯೆ ಪ್ರಕರಣ| ಪ್ರೀತಿ ನಿರಾಕರಿಸಿದ್ದಕ್ಕೆ ಕೃತ್ಯ ನಡೆಸಿದ್ದಾರೆ: ತಂದೆ ನಿರಂಜನ್ ಹಿರೇಮಠ
ನನ್ನ ಮಗಳ ಕೊಲೆ ಹಿಂದೆ ಲಬ್ ಜಿಹಾದ್ ಇದೆ. ಕೊಲೆಗಾರನ ಜೊತೆಗೆ ನಾಲ್ಲೈದು ಅದೇ ಸಮುದಾಯದವರು ಇರುತಿದ್ದರು.;
ಹುಬ್ಬಳ್ಳಿ: ಬಿವಿಬಿ ಇಂಜಿನಿಯರ್ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿಯ ತಂದೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಅವರು ಪ್ರತಿಕ್ರಿಯಿಸಿದ್ದು, ನನ್ನ ಮಗಳ ಕೊಲೆ ಹಿಂದೆ ಲವ್ ಜಿಹಾದ್ ಇದೆ. ಅನೇಕ ಸಲ ಮಗಳ ಜೊತೆಗೆ ಮಾತನಾಡುವುದನ್ನು ನಾನು ನೋಡಿದ್ದೇನೆ. ಕೊಲೆಗಾರನ ಜೊತೆಗೆ ಅದೇ ಸಮುದಾಯದ ನಾಲ್ಲೈದು ಜನರು ಇರುತಿದ್ದರು.
ʻಸರ್ಕಾರ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ನನ್ನ ಮಗಳಿಗೆ ಆದ ಅನ್ಯಾಯ ಬೇರೆ ಹೆಣ್ಣು ಮಕ್ಕಳಿಗೆ ಆಗಬಾರದು. ನನ್ನ ಮಗಳು ಬಹಳ ಮುಗ್ಧೆ. ಯಾರೊಂದಿಗೂ ಜಗಳ ಆಡುವ ಸ್ವಭಾವದವಳಲ್ಲ. ಅವಳು ಪ್ರತಿಭಾವಂತೆ ಎಂದು ತಂದೆ ನಿರಂಜನ್ ಹಿರೇಮಠ್ ತಿಳಿಸಿದ್ದಾರೆ.
ತುಂಬಾ ದಿನದ ಹಿಂದೆ ಆ ವ್ಯಕ್ತಿ ನನ್ನ ಮಗಳ ಹಿಂದೆ ಬಿದ್ದಿದ್ದ. ಲವ್ ಮಾಡುವಂತೆ ಪಿಡಿಸಿ ಬೆದರಿಕೆ ಹಾಕಿದ್ದ. ನಾನು ಸಹ ಎಚ್ಚರಿಕೆ ಕೊಟ್ಟಿದ್ದೆ. ನನ್ನ ಮಗಳು ಆತನ ಪ್ರೀತಿಗೆ ಒಪ್ಪದೇ ನಿರಾಕರಿಸಿ ಎಲ್ಲರಂತೆ ಸುಮ್ಮನಿದ್ದಳು, ಕಾಲೇಜಿಗೆ ಹೋಗುತ್ತಿದ್ದರು. ಆತನ ಸ್ನೇಹಿತರ ಜತೆ ಮೂರು ನಾಲ್ಕು ದಿನದಿಂದ ಪ್ಲಾನ್ ಮಾಡಿದ್ದು, ಗುರುವಾರ ಬಂದು ಆರೋಪಿ ಕೊಲೆ ಮಾಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.