ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸ್ಪೋಟ; ಬಾಲಕ ಸಾವು, 6 ಜನರಿಗೆ ಗಾಯ

ಫ್ರೆಂಡ್ಸ್ ಯುವಕರ ಬಳಗದ ವತಿಯಿಂದ ಆಯೋಜಿಸಿದ್ದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಈ ದುರಂತ ಸಂಭವಿಸಿದೆ.;

Update: 2025-08-30 04:04 GMT

ಗಣೇಶ ಮೆರವಣಿಗೆ ವೇಳೆ ಪಟಾಕಿ ಸ್ಪೋಟಗೊಂಡು ದುರಂತ ಸಂಭವಿಸಿದೆ. 

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಪೆಟ್ಟಿಗೆ ಸ್ಫೋಟಗೊಂಡ ಪರಿಣಾಮ 15 ವರ್ಷದ ಬಾಲಕ ಮೃತಪಟ್ಟು, ಪೊಲೀಸ್ ಕಾನ್​ಸ್ಟೇಬಲ್​ ಸೇರಿದಂತೆ ಆರು ಮಂದಿ ಗಾಯಗೊಂಡಿರುವ ದಾರುಣ ಘಟನೆ  ದೊಡ್ಡಬಳ್ಳಾಪುರ ತಾಲೂಕಿನ ಮುತ್ತೂರಿನಲ್ಲಿ ನಡೆದಿದೆ.

ಈ ಘಟನೆಯಲ್ಲಿ ಮುತ್ತೂರು ನಿವಾಸಿ ತನುಷ್ ರಾವ್ (15) ಎಂಬ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಣೇಶ್ (16), ಯೋಗೇಶ್ (15), ಮುನಿರಾಜು (27), ನಾಗರಾಜು (35), ಚೇತನ್ ಶಾವಿ (13) ಮತ್ತು ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಜಾಕೀರ್ ಹುಸೇನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫ್ರೆಂಡ್ಸ್ ಯುವಕರ ಬಳಗದ ವತಿಯಿಂದ ಆಯೋಜಿಸಿದ್ದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಈ ದುರಂತ ಸಂಭವಿಸಿದೆ. ಮೆರವಣಿಗೆಯಲ್ಲಿ ಬಳಸುತ್ತಿದ್ದ ಲಿಫ್ಟಿಂಗ್ ವಾಹನದಲ್ಲಿ ಪಟಾಕಿಗಳಿದ್ದ ಪೆಟ್ಟಿಗೆ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ವಾಹನದ ಸೈಲೆನ್ಸರ್‌ನಿಂದ ಉಂಟಾದ ಶಾಖದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. 

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Tags:    

Similar News