ED raids : ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ಸಂಬಂಧಿಸಿದ ಜಾಗಗಳ ಮೇಲೆ ಇಡಿ ದಾಳಿ

ಇಡಿ ದಾಳಿಯನ್ನು ಖಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು "ಇದೊಂದು ರಾಜಕೀಯ ಸೇಡು, ಇಡಿ ದಾಳಿಗಳು ಸೇಡಿನ ರಾಜಕೀಯದ ಪರಿಣಾಮವಾಗಿ ಕೇಂದ್ರವು ಈ ರೀತಿಯ ದಾಳಿಗಳನ್ನು ನಡೆಸುತ್ತಿದೆ" ಎಂದಿದ್ದಾರೆ.;

Update: 2025-04-25 14:51 GMT

ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ

ಮಹಿಳೆಯೊಬ್ಬರು ಚಿನ್ನದ ವ್ಯಾಪಾರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. 

ಇಡಿ ಅಧಿಕಾರಿಗಳು ದಾಳಿ ನಡೆಸಿ ಕಳೆದ ಒಂದು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದಾರೆ, ಒಬ್ಬ ವ್ಯಕ್ತಿಗೆ ತೊಂದರೆ ಕೊಡುವುದಕ್ಕೂ ಇತಿ-ಮಿತಿ ಇರಬೇಕು, ಕೆಲವು ಮಂದಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಳ್ಳುವುದು ನೋಡಿದರೆ ನನಗೆ ನೋವುಂಟಾಗುತ್ತದೆ, ನನ್ನನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆದಿದೆ ಎಂದು ಶಾಸಕ ವಿನಯ್‌ ಕುಲಕರ್ಣಿ ಆರೋಪಿಸಿದ್ದಾರೆ.

ಆರೋಪಿ ಮಹಿಳೆ ಐಶ್ವರ್ಯ ಗೌಡ ಹಾಗೂ ನಿಮ್ಮ ನಡುವೆ ಯಾವುದಾದರೂ ಹಣಕಾಸಿನ ವ್ಯವಹಾರ ನಡೆದಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ವಿನಯ್‌ ಕುಲಕರ್ಣಿ, ''ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ, ಹಣಕಾಸಿನ ವ್ಯವಹಾರ ನಡೆದಿದ್ದರೆ ಸುಲಭವಾಗಿ ಕಂಡುಹಿಡಿಯಬಹುದಿತ್ತು,'' ಎಂದು ಹೇಳಿದರು. 

ರಾಜಕೀಯ ಸೇಡು: ಸಿಎಂ ಸಿದ್ದರಾಮಯ್ಯ

ಇಡಿ ದಾಳಿಯನ್ನು ಖಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ "ಇದೊಂದು ರಾಜಕೀಯ ಸೇಡು, ಇಡಿ ದಾಳಿಗಳು ಸೇಡಿನ ರಾಜಕೀಯದ ಪರಿಣಾಮವಾಗಿ ಕೇಂದ್ರವು ಈ ರೀತಿಯ ದಾಳಿಗಳನ್ನು ನಡೆಸುತ್ತದೆ," ಎಂದ ಅವರು ''ಬಿಜೆಪಿ ನಾಯಕರ ಒಡೆತನದ ಆಸ್ತಿಗಳ ಮೇಲೆ ಇಡಿ ಏಕೆ ದಾಳಿ ನಡೆಸಿಲ್ಲ,'' ಎಂದು ಪ್ರಶ್ನಿಸಿದ್ದಾರೆ. 


Tags:    

Similar News