Karnataka DGP| ಪ್ರಭಾರ ಡಿಜಿ-ಐಜಿಪಿ ಹುದ್ದೆಗೆ ಡಾ.ಎಂ.ಎ.ಸಲೀಂ ನೇಮಕ

ಅಲೋಕ್ ಮೋಹನ್ ಅವರ ನಿವೃತ್ತಿಯಿಂದ ತೆರವಾಗಲಿರುವ ಡಿಜಿ-ಐಜಿಪಿ ಹುದ್ದೆಯನ್ನು ಹಂಗಾಮಿಯಾಗಿ ಡಾ.ಎಂ.ಎ.ಸಲೀಂ ಅವರು ಬುಧವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದಾರೆ. ಎರಡು ತಿಂಗಳ ಬಳಿಕ ಕಾಯಂ ಆಗಿ ನೇಮಕಗೊಳ್ಳಲಿದ್ದಾರೆ.;

Update: 2025-05-21 12:10 GMT

ಪ್ರಭಾರಿ ಡಿಜಿ-ಐಜಿಪಿ ಹುದ್ದೆಗೆ ಡಾ.ಎಂ.ಎ.ಸಲೀಂ ನೇಮಕ

ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಕನ್ನಡಿಗ ಡಾ.ಎಂ.ಎ.ಸಲೀಂ ಅವರು ಬುಧವಾರ ನೇಮಕಗೊಂಡಿದ್ದಾರೆ. 

ಅಲೋಕ್ ಮೋಹನ್ ಅವರ ನಿವೃತ್ತಿಯಿಂದ ತೆರವಾಗಲಿರುವ ಡಿಜಿ-ಐಜಿಪಿ ಹುದ್ದೆಯನ್ನು ಹಂಗಾಮಿ ಡಾ.ಎಂ.ಎ.ಸಲೀಂ ಅವರು ಬುಧವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದಾರೆ. ಎರಡು ತಿಂಗಳ ಬಳಿಕ ಕಾಯಂ ಆಗಿ ನೇಮಕಗೊಳ್ಳಲಿದ್ದಾರೆ.

ಹಾಲಿ ಡಿಜಿಪಿಯಾಗಿರುವ ಡಾ.ಅಲೋಕ್‌ಮೋಹನ್ ಅವರ ಅವಧಿ ಬುಧವಾರವೇ ಮುಗಿದಿದ್ದು, ಅವರಿಗೆ ಗೌರವ ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು. ಇದಾದ ಬಳಿಕ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಸಲೀಂ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಅಲೋಕ್ ಮೋಹನ್ ಅವರ ಅವಧಿ ಏಪ್ರಿಲ್‌ಗೆ ಮುಗಿದಿತ್ತಾದರೂ ಡಿಜಿಪಿಯಾಗಿ ಎರಡು ವರ್ಷದ ಅವಧಿ ಮುಗಿಸುವ ಉದ್ದೇಶದಿಂದ ಮೂರು ವಾರಗಳ ಕಾಲ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿತ್ತು.  ಸಲೀಂ ಅವರು ಮುಂದಿನ ವರ್ಷದ ಜೂನ್‌ಗೆ ನಿವೃತ್ತರಾಗಲಿದ್ದು. ಹದಿಮೂರು ತಿಂಗಳ ಕಾಲ ಡಿಜಿಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 

ಕರ್ನಾಟಕದ ತುಮಕೂರು ಜಿಲ್ಲೆಯವರಾದ ಡಾ.ಸಲೀಂ ಅವರು ಮೂರು ದಶಕದ ಅವಧಿಯಲ್ಲಿ ಕುಶಾಲನಗರ ಎಎಸ್ಪಿ, ಉಡುಪಿ, ಹಾಸನ ಎಸ್ಪಿ, ಮೈಸೂರು ನಗರ ಪೊಲೀಸ್ ಆಯುಕ್ತ, ದಾವಣಗೆರೆ ಐಜಿಪಿ, ಬೆಂಗಳೂರು ನಗರ ಸಂಚಾರ ವಿಭಾಗದ ಮುಖ್ಯಸ್ಥ ಈಗ ಸಿಐಡಿ ಡಿಜಿಪಿಯಾಗಿದ್ದಾರೆ. ಸಂಚಾರ ವಿಷಯದಲ್ಲಿಯೇ ಇವರು ಪಿಎಚ್‌ಡಿ ಮಾಡಿದ್ದಾರೆ.


Tags:    

Similar News