‘ಮದುವೆ ಡೇಟ್ ಚೇಂಜ್ ಮಾಡಬೇಡ, ಅಷ್ಟರೊಳಗೆ ಬರ್ತೀನಿ’: ತರುಣ್ಗೆ ದರ್ಶನ್ ಭರವಸೆ
ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಭೇಟಿಗೆ ಎಂದು ʻಕಾಟೇರʼ ನಿರ್ದೇಶಕ ತರುಣ್ ಸುಧೀರ್ ಭೇಟಿ ಮಾಡಿದ್ದಾರೆ.;
ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಭೇಟಿಗೆ ಎಂದು ʻಕಾಟೇರʼ ನಿರ್ದೇಶಕ ತರುಣ್ ಸುಧೀರ್ ಭೇಟಿ ಮಾಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻದರ್ಶನ್ ಅವರಿಗೆ ಸ್ವಲ್ಪ ಹುಷಾರಿಲ್ಲ. ರಿಕವರ್ ಆಗುತ್ತ ಇದ್ದಾರೆ. ನನ್ನ ನೋಡಿದಾಗ ಯಾವ ಸ್ಮೈಲ್ ಅಲ್ಲಿ ನೋಡುತ್ತಿದ್ದು ಅದೇ ನಗುವಿನಲ್ಲಿ ಇಂದು ನೋಡಿದರು. ಅವರಗಿಂತ ನಾವೇ ವೀಕ್ ಆಗಿದ್ದೇವೆ. ನನ್ನ ಮದುವೆ ಬಗ್ಗೆ ದರ್ಶನ್ ಅವರಿಗೆ ಮೊದಲೇ ಗೊತ್ತಿತ್ತು. ಈ ವಿಚಾರದಲ್ಲಿ ನನಗೆ ಮೊದಲಿನಿಂದಲೂ ತೊಳಲಾಟ ಇತ್ತು. ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಾಯಿಸಬೇಡ ಅಂತ ಅವರು ಹೇಳಿದ್ದಾರೆ. ನಾನು ಬಂದೇ ಬರ್ತೀನಿ ಎನ್ನುವ ನಂಬಿಕೆ ಅವರಲ್ಲಿ ಇದೆ. ಅವರು ಏನು ತಪ್ಪು ಮಾಡಿಲ್ಲ ಎನ್ನುವ ನಂಬಿಕೆ ನಮಗೂ ಇದೆ ಎಂದರು.
‘ನನ್ನ ಮದುವೆಗೆ ಬರಲು ವಿಶೇಷ ಅನುಮತಿ ಇದೆಯೋ ಇಲ್ಲವೋ ಎಂಬ ನನಗೆ ತಿಳಿದಿಲ್ಲ. ಮದುವೆ ದಿನಾಂಕಕ್ಕೂ ಮೊದಲೇ ದರ್ಶನ್ ಅವರು ಹೊರಗೆ ಬರುತ್ತಾರೆ ಎಂಬ ನಂಬಿಕೆ ನನಗೆ ಇದೆ. ಇಂದು ಆಮಂತ್ರಣ ಪತ್ರಿಕೆ ನೀಡಲು ಸಾಧ್ಯವಾಗಿಲ್ಲ. ಯಾಕೆಂದರೆ ಜೈಲಿನ ಒಳಗೆ ಏನನ್ನೂ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಹೋಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ’ ಎಂದು ತರುಣ್ ಸುಧೀರ್ ಹೇಳಿದ್ದಾರೆ.
"ಈಗ ಏನು ನಡೆದಿದೆ, ಅದನ್ನು ಕಾನೂನು ನೋಡಿಕೊಳ್ಳುತ್ತದೆ. ನಾನು ಎರಡು ವಾರಗಳಿಂದ ಇಲ್ಲಿಗೆ ಬರಬೇಕು ಎಂದು ತುಂಬ ಪ್ರಯತ್ನಪಡ್ತಾ ಇದ್ದೆ. ಈಗ ಅನುಮತಿ ಸಿಕ್ಕಿತ್ತು, ಹಾಗಾಗಿ ಬಂದೆ" ಎಂದು ಹೇಳಿದ ತರುಣ್ ಸುಧೀರ್, ಮದುವೆ ಯಾವಾಗ ಅನ್ನೋ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದು ಹೇಳಿದರು. ತರುಣ್ ಜೊತೆಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟ ಯಶಸ್ ಸೂರ್ಯ ಆಗಮಿಸಿದ್ದರು.
ತರುಣ್ ಹಾಗೂ ನಟಿ ಸೋನಲ್ ಮುದುವೆಗೆ ಮುಂದಾಗಿದ್ದಾರೆ. ಅಗಸ್ಟ್ 10,11ಕ್ಕೆ ತರುಣ್ ,ಸೋನಾಲ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂದು ತಿಳಿದು ಬಂದಿದೆ. ಚೌಕ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ತರುಣ್ ರಾಬರ್ಟ್, ಕಾಟೇರ ಎರಡು ಹಿಟ್ ಸಿನಿಮಾಗಳನ್ನು ಕೊಟ್ಟರು. ಇದೀಗ ತರುಣ್ 4ನೇ ಸಿನಿಮಾ ತಯಾರಿಯಲ್ಲಿದ್ದಾರೆ.