ಕಿರುತೆರೆಯಿಂದ ಪ್ಯಾನ್ ಇಂಡಿಯಾ ಸ್ಟಾರ್ ಆದ ದೀಕ್ಷಿತ್ ಶೆಟ್ಟಿ: ರಶ್ಮಿಕಾ ಬಗ್ಗೆ ಹೇಳಿದ್ದೇನು?
ದೀಕ್ಷಿತ್ ಶೆಟ್ಟಿ ತೆಲುಗು ಸಿನಿಮಾ ʻದಿ ಗರ್ಲ್‌ಫ್ರೆಂಡ್ʼ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ಅವರೊಂದಿಗೆ ತೆರೆಹಂಚಿಕೊಂಡಿದ್ದಾರೆ.;
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ಇಂದು ಪ್ಯಾನ್ ಇಂಡಿಯಾ ಸಿನಿಮಾದವರೆಗೆ ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಕನ್ನಡ ಮೂಲದವರಾದರೂ ಕನ್ನಡದ ಬಗ್ಗೆ ಅವರಿಗೆ ಅಸಡ್ಡೆ, ಕನ್ನಡ ಮಾತನಾಡಲ್ಲ ಎಂದು ಆಗಾಗ ಟ್ರೋಲ್‌ಗೆ ಒಳಗಾಗಿದ್ದೇ ಹೆಚ್ಚು. ಆದರೆ ಇದೀಗ ನಟಿ ರಶ್ಮಿಕಾ ಮಂದಣ್ಣ ಕನ್ನಡದ ನಟ ದೀಕ್ಷಿತ್ ಶೆಟ್ಟಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
'ನಾಗಿಣಿ' ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿರುವ ಹಾಗೂ ದಿಯಾ ಸಿನಿಮಾದಿಂದ ಎಲ್ಲರ ಮನಗೆದ್ದಿರುವ ದೀಕ್ಷಿತ್ ಶೆಟ್ಟಿ ತೆಲುಗು ಸಿನಿಮಾ ʻದಿ ಗರ್ಲ್‌ಫ್ರೆಂಡ್ʼ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ಅವರೊಂದಿಗೆ ತೆರೆಹಂಚಿಕೊಂಡಿದ್ದಾರೆ. ನಿರ್ದೇಶಕ ರಾಹುಲ್ ರವೀಂದ್ರನ್ ಅವರ 'ದಿ ಗರ್ಲ್‌ಫ್ರೆಂಡ್' ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಹಾಗೂ ದೀಕ್ಷಿತ್ ಶೆಟ್ಟಿ ಅವರ ʻಸ್ವರವೇʼ ಹಾಡು ಬಿಡುಗಡೆಗೊಂಡು ಮೆಚ್ಚುಗೆ ವ್ಯಕ್ತವಾಗಿದೆ.
ರಶ್ಮಿಕಾ ಮಂದಣ್ಣ ಜೊತೆ ಕೆಲಸ ಮಾಡಿರುವ ಕನ್ನಡ ನಟ ದೀಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣನ ಬಗ್ಗೆ ಭಾವನಾತ್ಮಕ ಸಂದೇಶವೊಂದು ಬರೆದಿದ್ದಾರೆ. ಸ್ವರವೇ ಚಿತ್ರೀಕರಣದ ಸಮಯದಲ್ಲಿ ತಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಚಿತ್ರದ ನಾಯಕಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಹಾಡಿನ ಸೆಟ್‌ಗಳಿಂದ ಚಿತ್ರಗಳನ್ನು ಮತ್ತು ಹಾಡಿನ ಬಿಹೈಂಡ್ ದಿ ಸೀನ್ಸ್ ಕ್ಲಿಪ್ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ ನಟ, "ಎಲ್ಲಿಂದ ಪ್ರಾರಂಭಿಸಬೇಕೆಂದು ತಿಳಿದಿರಲಿಲ್ಲ... ಈ ಹಾಡಿಗಾಗಿ ವಿಶೇಷವಾಗಿ ಮಾಡಲಾದ ಇಂತಹ ಬೃಹತ್ ಸೆಟಪ್‌ನಲ್ಲಿ ಮೊದಲ ಬಾರಿಗೆ ನೃತ್ಯ ಮಾಡಲಾಗುತ್ತಿದೆ. ಇದು ಹಲವು ನೆನಪುಗಳನ್ನು ಮರಳಿ ತಂದಿದೆ. ಒಂದು ಸಣ್ಣ ರೋಲರ್‌ಕೋಸ್ಟರ್ ಸವಾರಿ... ಆದರೆ ಒಂದು ಶಕ್ತಿಶಾಲಿ ಸವಾರಿ! ಎಂದು ಬರೆದುಕೊಂಡಿದ್ದಾರೆ.
ರಶ್ಮಿಕಾರನ್ನು ಹಾಡಿ ಹೊಗಳಿದ್ದ ದೀಕ್ಷಿತ್
ಸಂದರ್ಶನವೊಂದರಲ್ಲಿ ರಶ್ಮಿಕಾ ಜೊತೆಗಿನ ನಟನೆ, ಅವರ ಸ್ಟಾರ್‌ಗಿರಿ ಅವರು ಮಾತನಾಡಿದ್ದು, ಅವರ ಬಗ್ಗೆ ಹೊರಗಡೆ ಏನು ಮಾತನಾಡುತ್ತಾರೆ. ಹೊರಗಡೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಅದು ಅವರ ಅಭಿಪ್ರಾಯ. ರಶ್ಮಿಕಾ ಅವರು ''ಭಾರತದಲ್ಲಿ ಎಲ್ಲ ಭಾಷೆಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ನಟಿಸಿದ್ದಾರೆ. ಅವರು ಕೂಡ ಸ್ಟಾರ್ ನಟಿ. ನನ್ನ ಬಳಿ ಅಟಿಟ್ಯೂಡ್ ರೀತಿಯಲ್ಲಿ ನಡೆದುಕೊಂಡಿಲ್ಲ. ರಶ್ಮಿಕಾ ಅವರು ಅಷ್ಟೊ ದೊಡ್ಡ ಸ್ಟಾರ್ ನಟಿ ಆದರೂ ಸಹಿತ ತುಂಬಾ ಕಂಫರ್ಟೆಬಲ್ ಆಗಿದ್ದರು. ಅವರು ಹಾಗಿದ್ದಿದ್ದಕ್ಕೆ ನನಗೆ ಸಿನಿಮಾದಲ್ಲಿ ಕೆಲಸ ಮಾಡಲು ಸುಲಭವಾಯಿತು ಎಂದು ನಟ ಹೇಳಿಕೊಂಡಿದ್ದಾರೆ.
ರಶ್ಮಿಕಾ ಅವರು ತುಂಬಾ ಹಾರ್ಡ್ ವರ್ಕಿಂಗ್. ಕೆಲವು ನನಗೆ ಹೇಳುತ್ತಾರೆ. ಆದರೆ ನನಗಿಂತ ಹತ್ತು ಪಟ್ಟು ಹೆಚ್ಚು ಕೆಲಸ ಮಾಡುವ ನಟಿ ರಶ್ಮಿಕಾ. ಸೆಟ್ ನಲ್ಲಿದ್ದಾಗ ನಾವಿಬ್ಬರು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮಾತನಾಡುತ್ತಿದ್ದೆವು. ಸೆಟ್‌ನಲ್ಲಿ ಕನ್ನಡವನ್ನು ಮಾತನಾಡಿದ್ದೇವೆ. ಸಿನಿಮಾ ಡೈಲಾಗಿಗೋಸ್ಕರ ಭಾಷೆ ಸರಳವಾಗಿ ಬರುವಂತೆ ನಾವು ತುಲುಗಿನಲ್ಲಿ ಮಾತನಾಡಿದ್ದೇವೆ ಎಂದು ದೀಕ್ಷಿತ್ ತಿಳಿಸಿದ್ದಾರೆ.
ಸದ್ಯ ನಟ ದೀಕ್ಷಿತ್ ಶೆಟ್ಟಿ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅದರಲ್ಲಿ ಪ್ರಮುಖವಾಗಿ ರಶ್ಮಿಕಾ ಮಂದಣ್ಣ ಜೊತೆಗೆ ʻದಿ ಗರ್ಲ್‌ಫ್ರೆಂಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ʻಶವರಾʼ ಸಿನಿಮಾ ಸೆಟ್ಟೇರಿದೆ. ಮಲಯಾಳಂನ ʻಏಂಜಲ್ ನಂ 16’ ಚಿತ್ರದಲ್ಲಿಯೂ ದೀಕ್ಷಿತ್ ನಟಿಸುತ್ತಿದ್ದಾರೆ.
ದೀಕ್ಷಿತ್ ಶೆಟ್ಟಿ ಅವರು ಕನ್ನಡ ಮತ್ತು ತೆಲುಗು ಎರಡೂ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ಒಬ್ಬ ಭರವಸೆಯ ನಟ. ಅವರ ಪ್ರಯೋಗಾತ್ಮಕ ಚಿತ್ರಗಳ ಆಯ್ಕೆ ಮತ್ತು ಸರಳ ಜೀವನಶೈಲಿ ಅವರನ್ನು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿಸಿದೆ.
ಕಿರುತೆರೆಯಿಂದ ಹಿರಿತೆರೆವರೆಗೆ...
ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿರುವ ನಟ ದೀಕ್ಷಿತ್ ಶೆಟ್ಟಿ ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರದವರು. ಕಿರುತೆರೆಯ ಮೂಲಕ ನಟನಾ ವೃತ್ತಿಯನ್ನು ಆರಂಭಿಸಿದ್ದ ದೀಕ್ಷಿತ್ ಶೆಟ್ಟಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ನಾಗಿಣಿ' ಧಾರಾವಾಹಿ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದಲ್ಲದೆ, ಅವರು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿ ದೀಪಿಕಾ ದಾಸ್ ಅವರೊಂದಿಗೆ ವಿಜೇತರಾಗಿ ಹೊರಹೊಮ್ಮಿದರು.
ಇದಲ್ಲದೆ ದೀಕ್ಷಿತ್ ಕೆಲ ಸಿನಿಮಾಗಳಲ್ಲಿ ನಟಿಸಿದ ನಂತರ 2020ರಲ್ಲಿ ತೆರೆಕಂಡ ʻದಿಯಾʼ ಸಿನಿಮಾ ಅವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿತು. ತೆಲುಗು ಚಿತ್ರರಂಗಕ್ಕೆ 'ಮುಗ್ಗುರು ಮೊನಗಲ್ಲು' ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. ಆದರೆ, ನಾನಿ ಮತ್ತು ಕೀರ್ತಿ ಸುರೇಶ್ ಜೊತೆ ನಟಿಸಿದ 2023ರ 'ದಸರಾ' ಚಿತ್ರ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರು ತಂದುಕೊಟ್ಟಿತು. 2024ರಲ್ಲಿ ತೆರೆಕಂಡ 'ಬ್ಲಿಂಕ್' ಚಿತ್ರವೂ ಅವರಿಗೆ ಯಶಸ್ಸು ತಂದುಕೊಟ್ಟಿತು. ಅವರು ತಮ್ಮ ಪ್ರಾಯೋಗಿಕ ಪಾತ್ರಗಳ ಆಯ್ಕೆಯಿಂದ ಗುರುತಿಸಿಕೊಂಡಿದ್ದಾರೆ. ದೀಕ್ಷಿತ್ ಶೆಟ್ಟಿ ಇತ್ತೀಚೆಗೆ ತಮ್ಮದೇ ಆದ ನಿರ್ಮಾಣ ಸಂಸ್ಥೆ 'ಧೀ ಸಿನಿಮಾಸ್' ಸ್ಥಾಪಿಸಿದ್ದಾರೆ.
ಸರಳ ಜೀವನಶೈಲಿಗೆ ಹೆಸರುವಾಸಿ
ದೀಕ್ಷಿತ್ ಶೆಟ್ಟಿ ತಮ್ಮ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿದರೂ, ಅವರು ಇನ್ನೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ತಮ್ಮ ಹಣಕಾಸು ನಿರ್ವಹಣೆಯ ಬಗ್ಗೆ ಬಹಳ ಸ್ಪಷ್ಟ ನಿಲುವು ಹೊಂದಿದ್ದಾರೆ. "ಹಣ ಬಂದಾಗ ದೊಡ್ಡ ಮನೆ, ದೊಡ್ಡ ಕಾರು ಎಂದು ಪ್ಲಾನ್ ಮಾಡಿದರೆ, ಹಣ ಬಾರದೇ ಇರುವ ಸಮಯದಲ್ಲಿ ತುಂಬಾ ಕಷ್ಟವಾಗುತ್ತದೆ. ಹಾಗಾಗಿ ನನಗೆ ಬಂದ ಹಣವನ್ನು ಇನ್ನೊಂದು ವರ್ಷ ನನಗೆ ಹಣ ಬರಲ್ಲ ಎಂಬ ಯೋಚನೆಯಲ್ಲಿಯೇ ನನ್ನ ಲೈಫ್ ಅನ್ನು ತುಂಬಾ ಸರಳವಾಗಿಟ್ಟುಕೊಳ್ಳಲು ಪ್ರಯತ್ನ ಪಡುತ್ತೇನೆ" ಎಂದು ಹೇಳಿಕೊಂಡಿದ್ದಾರೆ. ದಿವಂಗತ ಡಾ. ರಾಜ್‌ಕುಮಾರ್ ಅವರು ತಮ್ಮ ಸ್ಪೂರ್ತಿ ಎಂದು ದೀಕ್ಷಿತ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಸ್ವಂತ ಬಿಸಿನೆಸ್ ಆರಂಭಿಸಿದ ರಶ್ಮಿಕಾ ಮಂದಣ್ಣ
ನಟ ರಶ್ಮಿಕಾ ಮಂದಣ್ಣ ರಶ್ಮಿಕಾ ಮಂದಣ್ಣ ಸಿನಿ ಜರ್ನಿ ಜೊತೆ ಬ್ಯುಸಿನೆಸ್ ಕೂಡ ಶುರು ಮಾಡಿದ್ದಾರೆ. ಸ್ಯಾಂಡಲ್‌ವುಡ್, ಟಾಲಿವುಡ್, ಬಾಲಿವುಡ್ ಎಲ್ಲಾ ಕಡೆ ತನ್ನದೇ ಛಾಪು ಮೂಡಿಸಿರುವ ರಶ್ಮಿಕಾ ಡಿಯರ್ ಡೈರಿ ಜೊತೆ ಬ್ಯುಸಿನೆಸ್ ವರ್ಲ್ಡ್‌ಗೆ ಹೆಜ್ಜೆ ಇಟ್ಟಿದ್ದಾರೆ.
ಈ ಬ್ರ್ಯಾಂಡ್‌ನ ಮೊದಲ ಸಂಗ್ರಹದಲ್ಲಿ 'National Crush', 'Irreplaceable' ಮತ್ತು 'Controversial' ಎಂಬ ಮೂರು ವಿಭಿನ್ನ ಶೈಲಿಯ ಪರಿಮಳಗಳು ಲಭ್ಯವಿರುವುದು ವಿಶೇಷ. ಇವುಗಳಲ್ಲಿ ಪ್ರತಿ ಪರಿಮಳವೂ ರಶ್ಮಿಕಾ ತಮ್ಮ ಜೀವನದ ನಿರ್ದಿಷ್ಟ ಘಟ್ಟಗಳು ಅಥವಾ ಅನುಭವಗಳನ್ನು ಪ್ರತಿನಿಧಿಸುತ್ತದೆ. ಪರಿಮಳ ತಯಾರಿಕೆಯಲ್ಲಿ ಭಾರತೀಯ ಮೂಲದ ಗುಲಾಬಿ ಕಮಲ, ಮಲ್ಲಿಗೆ, ಕಬ್ಬು, ಲಿಚಿ ಮತ್ತು ಪ್ಯಾಶನ್‌ಫ್ರೂಟ್ ಮುಂತಾದ ಸುವಾಸನೆಗಳು ಒಳಗೊಂಡಿದ್ದು, ಆಧುನಿಕ ಪರಿಕಲ್ಪನೆಗೆ ಸ್ಥಳೀಯ ಸ್ಪರ್ಶ ನೀಡುವ ಉದ್ದೇಶವನ್ನು ಹೊಂದಿದೆ.