ಧರ್ಮಸ್ಥಳ ಪ್ರಕರಣ: ನಾಪತ್ತೆಯಾಗಿದ್ದ ಅನನ್ಯಾ ಭಟ್ ಚಿತ್ರ ತೋರಿಸಿ ವಿಡಿಯೋ ಬಿಡುಗಡೆ ಮಾಡಿದ ಸುಜಾತಾ ಭಟ್
ತಮ್ಮ ಮಗಳು ಅನನ್ಯಾ ಭಟ್, 22 ವರ್ಷಗಳ ಹಿಂದೆ (2003) ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ತೆರಳಿದ ಸಂದರ್ಭದಲ್ಲಿ ನಾಪತ್ತೆಯಾದಳೆಂದು ಅರೋಪಿಸಿ ರಾಜ್ಯದ ಗಮನಸೆಳೆದಿದ್ದ ಸುಜಾತಾ ಭಟ್ ಮೊದಲ ಬಾರಿಗೆ ತಮ್ಮ ಪುತ್ರಿಯ ಭಾವಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.;
ತಮ್ಮ ಮಗಳು ಅನನ್ಯಾ ಭಟ್, 22 ವರ್ಷಗಳ ಹಿಂದೆ (2003) ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ತೆರಳಿದ ಸಂದರ್ಭದಲ್ಲಿ ನಾಪತ್ತೆಯಾದಳೆಂದು ಅರೋಪಿಸಿ ರಾಜ್ಯದ ಗಮನಸೆಳೆದಿದ್ದ ಸುಜಾತಾ ಭಟ್ ಮೊದಲ ಬಾರಿಗೆ ತಮ್ಮ ಪುತ್ರಿಯ ಭಾವಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು "ಭೀಮʼ ಎಂಬಾತ ದೂರು ನೀಡಿದ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಸಂದರ್ಭದಲ್ಲೇ ತಮ್ಮ ಮಗಳು ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಳು ಎಂಬ ಸ್ಫೋಟಕ ಹೇಳಿಕೆ ನೀಡಿದ್ದ ಸುಜಾತಾ ಭಟ್ ಬಗ್ಗೆ ಸಾಕಷ್ಟು ಆಪಾದನೆಗಳೂ ಕೇಳಿಬಂದಿದ್ದವು. ಅಕೆ ಸುಳ್ಳು ಮಾಹಿತಿ ನೀಡಿದ್ದಾರೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದ್ದ ಸುಜಾತಾ ಭಟ್ ತನಿಖಾಧಿಕಾರಿಗಳ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಆರೋಪಗಳೂ ಕೇಳಿಬಂದಿದ್ದವು.
ಶನಿವಾರ ಈ ಬಗ್ಗೆ ಪ್ರತಿಕ್ರಿಯೆ ಎಂಬಂತೆ ಸುಜಾತಾ ಭಟ್ ಅವರು ತಮ್ಮ ಮಗಳ ಭಾವಚಿತ್ರ ತೋರಿಸುವ ವಿಡಿಯೋವನ್ನು ತಮ್ಮ ವಕೀಲರ ಮೂಲಕ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ತಮ್ಮ ವಿರುದ್ಧದ ಅರೋಪಗಳಿಗೆ ಉತ್ತರಿಸುವ ಪ್ರಯತ್ನವನ್ನು ನಡೆಸಿದ್ದಾರೆ ಎನ್ನಲಾಗಿದೆ.
ಸುಜಾತಾ ಭಟ್ ದೂರೇನು?
2003ರಲ್ಲಿ ತನ್ನ ಮಗಳು ಅನನ್ಯಾ ಭಟ್, ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾಗ ಧರ್ಮಸ್ಥಳ ಪ್ರವಾಸಕ್ಕೆ ಹೋಗಿ ನಾಪತ್ತೆಯಾಗಿದ್ದಾಳೆ ಎಂದು ಸುಜಾತಾ ಭಟ್ ದೂರು ನೀಡಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ದೂರು ದಾಖಲಿಸದೆ ಬೈದು ಕಳುಹಿಸಿದ್ದಾರೆಂದು ಆರೋಪಿಸಿದ್ದರು.
ಬಳಿಕ ತಮ್ಮನ್ನು ಅಪಹರಿಸಿ ಚಿತ್ರಹಿಂಸೆ ನೀಡಲಾಗಿತ್ತು ಹಾಗೂ ತಾವು ಕೋಮಾದಲದ್ದೆ ಎಂದೂ ದೂರಿನಲ್ಲಿ ತಿಳಿಸಿದ್ದರು. ಭೀಮಾ ಎಂಬಾತನ ದೂರು ಬಳಿಕ ತಮ್ಮ ಮಗಳ ಅಸ್ಥಿಪಂಜರ ಸಿಕ್ಕಿದ್ದೇ ಆದಲ್ಲಿ ತಮಗೆ ನೀಡಬೇಕೆಂದು ದೂರಿನಲ್ಲಿ ಪೊಲೀಸರಿಗೆ ಮನವಿ ಮಾಡಿದ್ದರು.
ಇತ್ತೀಚೆಗೆ ಸುಜಾತಾ ಭಟ್ ಅವರು ಸುಳ್ಳು ಹೇಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಈಗ ಅವರು ಮಾಧ್ಯಮಗಳಿಗೆ ಮಾಡಿರುವ ವಿಡಿಯೋ ತುಣುಕಿನಲ್ಲಿ ಮಗಳ ಚಿತ್ರವನ್ನು ತಮ್ಮ ವಕೀಲ ಮಂಜುನಾಥ್ ಅವರಿಗೆ ತೋರಿಸಿದ್ದಾರೆ. ಆ ಚಿತ್ರ ಅವರ ಮಗಳು, ಕಾಣೆಯಾದ ಅನನ್ಯಾ ಭಟ್ ಅವಳದ್ದೇ ಎಂದು ಹೇಳಲಾಗಿದೆ.