Dengue Outbreak | ಮಳೆ ನಡುವೆ ಡೆಂಗ್ಯೂ ಉಲ್ಬಣ: 10 ಸಾವಿರ ಗಡಿ ದಾಟಿದ ಪ್ರಕರಣ

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು 10,000 ಗಡಿ ದಾಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ನಡುವೆ ಶಂಕಿತ ಡೆಂಗ್ಯೂ ನಿಂದಾಗಿ ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.

Update: 2024-07-17 13:33 GMT
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳವಾಗಿದೆ.
Click the Play button to listen to article

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು 10,000 ಗಡಿ ದಾಟಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 487 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಜನವರಿಯಿಂದ ಈವರೆಗೆ ಒಟ್ಟು 10,449 ಪ್ರಕರಣಗಳು ದೃಢಪಟ್ಟಿವೆ.

ಏಳು ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ(3,770), ಚಿಕ್ಕಮಗಳೂರು (621), ಮೈಸೂರು (562), ಹಾವೇರಿ (508), ಧಾರವಾಡ (397), ಚಿತ್ರದುರ್ಗ (350), ದಕ್ಷಿಣ ಕನ್ನಡ (345), ಶಿವಮೊಗ್ಗ (332) ಪ್ರಕರಣ ದಾಖಲಾಗಿವೆ. ಇದುವರೆಗೆ ಹತ್ತು ಮಂದಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ.

ರಾಜ್ಯ ಸರ್ಕಾರವು ರಾಜ್ಯಾದ್ಯಂತ 'ಡೆಂಗ್ಯೂ ವಾರ್ ರೂಮ್'ಗಳನ್ನು ಸ್ಥಾಪಿಸಿದೆ. ಇದು ಹೆಚ್ಚುತ್ತಿರುವ ಪ್ರಕರಣಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಮಾಡುತ್ತಿದ್ದು, ರೋಗಗಳ ಪ್ರಭಾವ ಮತ್ತು ಹರಡುವಿಕೆಯನ್ನು ತಗ್ಗಿಸಲು ಕೆಲಸ ಮಾಡುತ್ತದೆ. ಆರೋಗ್ಯ ಕಾರ್ಯಕರ್ತರು ಸೊಳ್ಳೆಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ಹಲವು ಪ್ರದೇಶಗಳಲ್ಲಿ ಫಾಗಿಂಗ್ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ 487 ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಒಟ್ಟು 358 ಸಕ್ರಿಯ ಪ್ರಕರಣಗಳು. ಹೆಚ್ಚಿನ ಪ್ರಕರಣಗಳು, ಸುಮಾರು 37 ಪ್ರತಿಶತ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ವರದಿಯಾಗಿದೆ. 0-1 ವರ್ಷ ವಯಸ್ಸಿನ ಮಕ್ಕಳಲ್ಲಿ ಡೆಂಗ್ಯೂ ಹೆಚ್ಚಳವು ಆತಂಕಕಾರಿಯಾಗಿದೆ. ಏಕೆಂದರೆ ಈ ವಯೋಮಾನದವರಲ್ಲಿ ಇದುವರೆಗೆ ಕನಿಷ್ಠ 170 ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ಡೆಂಗ್ಯೂ ಪ್ರಾರಂಭವಾದಾಗಿನಿಂದ ಬೆಂಗಳೂರು ಮಹಾನಗರದಲ್ಲಿ ಪ್ರಕರಣಗಳ ಸಂಖ್ಯೆ ಭಾರಿ ಏರಿಕೆ ಕಂಡಿದೆ. ನಗರದಲ್ಲಿ ಒಟ್ಟು 3,587 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಇಲಾಖೆಯ ಪ್ರಕಾರ ಜನವರಿ 1 ಮತ್ತು ಜುಲೈ ನಡುವೆ ನಗರದಲ್ಲಿ 1,563 ಡೆಂಗ್ಯೂ ಪಾಸಿಟಿವ್‌ ಪ್ರಕರಣಗಳು ಮತ್ತು 6,443 ಶಂಕಿತ ಪ್ರಕರಣಗಳು ದಾಖಲಾಗಿವೆ. 

Tags:    

Similar News