ಗಂಗಾಮತಸ್ತರ ಜೀವನ ಹಾಳು ಮಾಡಿದ ವ್ಯಕ್ತಿ ಡಿಕೆಶಿ: ಎಚ್‌ಡಿಕೆ ನೇರ ಆರೋಪ

ಕೆರೆಗಳಲ್ಲಿ ಮೀನು ಹಿಡಿದು ನೆಮ್ಮದಿಯ ಜೀವನ ಮಾಡುತ್ತಿದ್ದ ಗಂಗಾಮತಸ್ತರ ಜೀವನ ಹಾಳು ಮಾಡಿದ ವ್ಯಕ್ತಿ ಡಿಸಿಎಂ ಡಿಕೆ ಶಿವಕುಮಾರ್ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದಾರೆ.;

Update: 2024-11-07 14:30 GMT
ಹೆಚ್‌ ಡಿ ಕುಮಾರಸ್ವಾಮಿ
Click the Play button to listen to article

ಕೆರೆಗಳಲ್ಲಿ ಮೀನು ಹಿಡಿದು ನೆಮ್ಮದಿಯ ಜೀವನ ಮಾಡುತ್ತಿದ್ದ ಗಂಗಾಮತಸ್ತರ ಜೀವನ ಹಾಳು ಮಾಡಿದ ವ್ಯಕ್ತಿ ಡಿಸಿಎಂ ಡಿಕೆ ಶಿವಕುಮಾರ್ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದರು.

ಚನ್ನಪಟ್ಟಣ ಕ್ಷೇತ್ರದ ಕಾರೆಕೊಪ್ಪ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ಪ್ರಚಾರ ನಡೆಸಿದ ಅವರು; ಗಂಗಾ ಮತಸ್ತರು ಕೆರೆಗಳನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದರು. ಮೀನು ಅವರ ಜೀವನಾಧಾರ. ಕೆರೆ ಅವರ ತಾಯಿಯಾಗಿತ್ತು. ಅಂತಹ ಕೆರೆಗಳಲ್ಲಿ ಮೀನು ಹಿಡಿಯುವುದನ್ನು ಟೆಂಡರ್ ಕರೆದು ಬಲಿಷ್ಟರಿಗೆ ಕೆರೆಗಳನ್ನು ಒಪ್ಪಿಸಲಾಯಿತು. ತಲೆತಲಾಂತರಿಂದ ಕೆರೆಗಳನ್ನು ನಂಬಿದ್ದ ಗಂಗಾ ಮತಸ್ತರು ಬೀದಿ ಪಾಲಾದರು ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಟಿ ಪ್ರವರ್ಗಕ್ಕೆ ಗಂಗಾ ಮತಸ್ತರು

ಗಂಗಾ ಮತಸ್ತರನ್ನು ಪರಿಶಿಷ್ಟ ವರ್ಗದ ಪ್ರವರ್ಗಕ್ಕೆ ಸೇರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕಿದೆ. ಹಿಂದೆ ಡಿ.ಟಿ.ಜಯಕುಮಾರ್ ಅವರು ನಮ್ಮ ಪಕ್ಷದಲ್ಲಿ ಸಚಿವರಾಗಿದ್ದರು. ಆದರೆ, ಇತ್ತೀಚೆಗೆ ಈ ಸಮುದಾಯಕ್ಕೆ ಅವಕಾಶ ಕಡಿಮೆ ಆಗಿದೆ. ಹೀಗಾಗಿ ಎಸ್ಟಿ ಪ್ರವರ್ಗಕ್ಕೆ ಸೇರಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.

Tags:    

Similar News