ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಭೇಟಿ; ಮೋದಿ ಸ್ವಾಗತಕ್ಕೆ ಕಡಲ ನಗರಿ ಸಜ್ಜು

ರೋಡ್ ಶೋ ಮೂಲಕ ಮಠಕ್ಕೆ ಆಗಮಿಸಲಿರುವ ಮೋದಿ ಅವರು ಮೊದಲು ಕನಕದಾಸರಿಗೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ಬಳಿಕ ಕನಕನ ಕಿಂಡಿಯಲ್ಲಿ ಅಳವಡಿಸಿರುವ ಚಿನ್ನದ ಕವಚ ಹಾಗೂ ಸುವರ್ಣ ತೀರ್ಥ ಮಂಟಪ ಅನಾವರಣ ಮಾಡಲಿದ್ದಾರೆ.

Update: 2025-11-28 01:00 GMT

ಸುಮಾರು 237 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ರಾಜ್ಯ ಮತ್ತು ಕೇಂದ್ರ ಪಡೆಗಳ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ನ.28) ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಮೋದಿ ಅವರು ಮಧ್ಯಾಹ್ನ 12ಕ್ಕೆ ಉಡುಪಿಗೆ ಆಗಮಿಸಲಿದ್ದು, ಪ್ರಧಾನಿ ಸ್ವಾಗತಕ್ಕೆ ಶ್ರೀಮಠ ಸಜ್ಜಾಗಿದೆ. ರೋಡ್ ಶೋ ಮೂಲಕ ಮಠಕ್ಕೆ ಆಗಮಿಸಲಿರುವ ಮೋದಿ ಅವರು ಮೊದಲು ಕನಕದಾಸರಿಗೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ಬಳಿಕ ಕನಕನ ಕಿಂಡಿಯಲ್ಲಿ ಅಳವಡಿಸಿರುವ ಚಿನ್ನದ ಕವಚ ಹಾಗೂ ಸುವರ್ಣ ತೀರ್ಥ ಮಂಟಪ ಅನಾವರಣ ಮಾಡಲಿದ್ದಾರೆ. ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಮತ್ತು ಸುವರ್ಣ ಪಾದುಕೆಯ ದರ್ಶನ ಪಡೆಯಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಪ್ರಧಾನಿಯವರು ಸರ್ವಜ್ಞ ಪೀಠ, ಗೋಶಾಲೆ ಹಾಗೂ ಗೀತಾಮಂದಿರಕ್ಕೆ ಭೇಟಿ ನೀಡಿ ಉಪಾಹಾರ ಸ್ವೀಕರಿಸುವರು. ನಂತರ ಸಭೆಯಲ್ಲಿ ಪಾಲ್ಗೊಂಡು ಗೀತಾ ಪಠಣದ ಅಂಗವಾಗಿ 18ನೇ ಅಧ್ಯಾಯದ ಅಂತಿಮ ಶ್ಲೋಕಗಳನ್ನು ಪಠಿಸಲಿದ್ದಾರೆ ಎಂದು ಪರ್ಯಾಯ ಶ್ರೀಗಳು ತಿಳಿಸಿದ್ದಾರೆ.

ಬಿಗಿ ಬಂದೋಬಸ್ತ್

ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಕಠಿಣ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 3000 ಕ್ಕೂ ಹೆಚ್ಚು ಪೊಲೀಸರು, 10 ಡಿಐಜಿ/ ಎಸ್ಪಿಗಳು, ಹಾಗೂ ಹಲವಾರು ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಭದ್ರತಾ ಮೇಲ್ವಿಚಾರಣೆಯನ್ನು ಎಡಿಜಿಪಿ ಜಿತೇಂದ್ರ ಕುಮಾರ್ ವಹಿಸಿದ್ದಾರೆ. ಎಸ್‌ಪಿಜಿ ಈಗಾಗಲೇ ಉಡುಪಿಯಲ್ಲಿ ಬೀಡು ಬಿಟ್ಟಿದ್ದು, ಹದ್ದಿನ ಕಣ್ಣಿಟ್ಟಿದೆ.

ಬೆಳಿಗ್ಗೆ ಬೆ.8.15ಕ್ಕೆ ದೆಹಲಿಯಿಂದ ವಿಮಾನದಲ್ಲಿ ಹೊರಡಲಿರುವ ಪ್ರಧಾನಿ ಮೋದಿ ಅವರು, 11.05 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. 11.35ಕ್ಕೆ ಆದಿ ಉಡುಪಿ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ.

ಮಧ್ಯಾಹ್ನ 12 ರಿಂದ 1.30 ರವರೆಗೆ ಶ್ರೀಕೃಷ್ಣ ಮಠ ಭೇಟಿ, ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1.35ಕ್ಕೆ ಮಠದಿಂದ ನಿರ್ಗಮಿಸಲಿದ್ದು, 1.45 ಕ್ಕೆ ಮಂಗಳೂರಿಗೆ ವಾಪಸ್ ಆಗಲಿದ್ದಾರೆ. 2.15ಕ್ಕೆ ಗೋವಾದ ದಾಬೋಲಿಮ್‌ಗೆ ಪ್ರಯಾಣಿಸಲಿದ್ದಾರೆ. 3.05ಕ್ಕೆ ಗೋಕರ್ಣ ಪರ್ತಗಳಿ ಜೀವೋತ್ತಮ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಮಂಗಳೂರಿನಲ್ಲಿ ಡ್ರೋನ್ ನಿಷೇಧ

ಪ್ರಧಾನಿ ಆಗಮನದ ಹಿನ್ನೆಲೆ ನಾಳೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತ ಡ್ರೋನ್‌ ಹಾರಾಟಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. CISF ಹಾಗೂ ಸ್ಥಳೀಯ ಪೊಲೀಸರ ನಿಯೋಜನೆಯೊಂದಿಗೆ ಬಂದೋಬಸ್ತ್ ಕಠಿಣಗೊಳಿಸಲಾಗಿದೆ. ಮೋದಿ ನೇರವಾಗಿ ವಿಮಾನ ನಿಲ್ದಾಣದೊಳಗಿಂದಲೇ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸುವ ವ್ಯವಸ್ಥೆ ಮಾಡಲಾಗಿದೆ.

Tags:    

Similar News