ಡಿಕೆ ಶಿವಕುಮಾರ್‌ ತೇಜೋವಧೆ ಆರೋಪ: ಮೂವರ ವಿರುದ್ಧ ಎಫ್‌ಐಆರ್‌ ದಾಖಲು

Update: 2024-05-05 05:51 GMT

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಕಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತೇಜೋವಧೆ ಮಾಡಿರುವ ಆರೋಪದಡಿ ಮೂವರ ವಿರುದ್ಧ ಹೈಗ್ರೆಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

ಡಿಕೆ ಶಿವಕುಮಾರ್ ಅವರ ತೇಜೋವಧೆಗೆ ಸಂಬಂಧಿಸಿದಂತೆ ಹರೀಶ್ ನಾಗರಾಜು ಎಂಬುವವರು ದೂರು ನೀಡಿದ್ದರು. ದೂರಿನ ಮೇರೆಗೆ ಸಾಮಾಜಿಕ ಜಾಲತಾಣದಲ್ಲಿ ಸಂತೋಷ್ ನೆಲಮಂಗಲ, ರಾಜೇಶ್ ಗೌಡ ಹಾಗೂ ಕೇಸರಿ ಸಾಮ್ರಾಟ್ ಹೆಸರಿನ ಖಾತೆಗಳ ನಿರ್ವಹಣೆದಾರರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ?

ಡಿಕೆಶಿ ಅವರ ನಕಲಿ ಚಿತ್ರ ಹಾಗೂ ವಿಡಿಯೊಗಳನ್ನು ಬೇರೆಯವರ ಚಿತ್ರ-ವಿಡಿಯೊಗಳಿಗೆ ಹೋಲಿಕೆ ಮಾಡಿ ಏ.29ರಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ನಲ್ಲಿ ಡಿಕೆಶಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಲಾಗಿತ್ತು. ಹೀಗಾಗಿ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Similar News