ದರ್ಶನ್ ಬಂಧನ : 'ಡಿ ಬಾಸ್' ಹುಡುಕಾಟದಲ್ಲಿ 'ಚಾಲೆಂಜಿಂಗ್ ಸ್ಟಾರ್' ಕಳೆದುಕೊಂಡೆವು ಎಂದ ಅಭಿಮಾನಿಗಳು

ಇತ್ತೀಚಿನ ವರ್ಷಗಳಲ್ಲಿ ದರ್ಶನ್‌ ಅಭಿಮಾನಿ ಬಳಗ ಅವರನ್ನು 'ಡಿ ಬಾಸ್' ಎಂದು ಕರೆಯುತ್ತಿದ್ದರು. 'ಡಿ ಬಾಸ್' ಎಂಬ ಬಿರುದು ಅವರ ಮಾಸ್ ಸಿನಿಮಾಗಳನ್ನು ಮತ್ತು ಆಕ್ಷನ್ ಸಿನಿಮಾಗಳನ್ನು ಪ್ರತಿನಿಧಿಸುತ್ತದೆ.;

Update: 2025-08-18 06:04 GMT

ನಟ ದರ್ಶನ್‌

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿರುವುದು ಅವರ ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ‘ಇನ್ ಸರ್ಚ್ ಆಫ್ ಡಿ ಬಾಸ್, ವಿ ಲಾಸ್ಟ್ ಚಾಲೆಂಜಿಂಗ್ ಸ್ಟಾರ್’ (D Boss ಹುಡುಕಾಟದಲ್ಲಿ ನಾವು ಚಾಲೆಂಜಿಂಗ್ ಸ್ಟಾರ್ ಕಳೆದುಕೊಂಡೆವು) ಎಂಬ ಟ್ರೆಂಡ್ ಆರಂಭವಾಗಿದೆ.

ಹಲವು ವರ್ಷಗಳಿಂದ ದರ್ಶನ್ ಅವರನ್ನು ಅಭಿಮಾನಿಗಳು 'ಚಾಲೆಂಜಿಂಗ್ ಸ್ಟಾರ್' ಎಂದೇ ಕರೆಯುತ್ತಿದ್ದರು. ಈ ಬಿರುದು ಅವರ ರೊಮ್ಯಾಂಟಿಕ್ ಮತ್ತು ಆಕ್ಷನ್ ಸಿನಿಮಾಗಳ ಕಾಲದ ಚಾರ್ಮ್ ಅನ್ನು ನೆನಪಿಸುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರ ಅಭಿಮಾನಿ ಬಳಗ ಅವರನ್ನು 'ಡಿ ಬಾಸ್' ಎಂದು ಕರೆಯುತ್ತಿದ್ದರು. 'ಡಿ ಬಾಸ್' ಎಂಬ ಬಿರುದು ಅವರ ಮಾಸ್ ಸಿನಿಮಾಗಳನ್ನು ಮತ್ತು ಆಕ್ಷನ್ ಸಿನಿಮಾಗಳನ್ನು ಪ್ರತಿನಿಧಿಸುತ್ತದೆ.

Full View

ಆದರೆ ಇತ್ತೀಚೆಗೆ ದರ್ಶನ್ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅವರ ಬಂಧನವು ಅಭಿಮಾನಿಗಳಿಗೆ ಮತ್ತಷ್ಟು ನಿರಾಸೆ ಮೂಡಿಸಿದೆ. ಹೀಗಾಗಿ, ಹಲವು ಅಭಿಮಾನಿಗಳು 'ಡಿ ಬಾಸ್' ಆಗಿ ಅವರ ಹೆಚ್ಚಿದ ಜನಪ್ರಿಯತೆ, ಮತ್ತು ಆ ಮೂಲಕ ವಿವಾದಗಳಿಗೆ ಸಿಲುಕಿರುವ ಬೆಳವಣಿಗೆಯಿಂದಾಗಿ, 'ಚಾಲೆಂಜಿಂಗ್ ಸ್ಟಾರ್' ಆಗಿ ಅವರ ಹಳೆಯ ಜನಪ್ರಿಯತೆ ಮತ್ತು ಚಾರ್ಮ್ ಕಳೆದುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಟ್ರೆಂಡ್, ದರ್ಶನ್ ಅವರ ಅಭಿಮಾನಿಗಳು ಅವರ ಹಳೆಯ ಜನಪ್ರಿಯತೆ ಮತ್ತು ಘನತೆ ಮರಳಿ ಬರಬೇಕೆಂದು ಬಯಸುತ್ತಿದ್ದಾರೆ. 

Tags:    

Similar News