ದರ್ಶನ್ ತಪ್ಪು ಮಾಡಿಲ್ಲ; ನಿರ್ಮಾಪಕ ಕೆ ಮಂಜು
ಅವತ್ತಿನಿಂದ ಇವತ್ತಿನವರೆಗೂ ದರ್ಶನ್ ನೋಡುವಾಗಲೂ ಅದೇ ರೀತಿ ಇದ್ದಾರೆ. ಈಗಲೂ ಹಾಗೇ ಇದ್ದಾರೆ. ಅವರು ಕೆಟ್ಟವರಲ್ಲ.;
ʻʻಅವತ್ತಿನಿಂದ ಇವತ್ತಿನವರೆಗೂ ದರ್ಶನ್ ನೋಡುವಾಗಲೂ ಅದೇ ರೀತಿ ಇದ್ದಾರೆ. ಈಗಲೂ ಹಾಗೇ ಇದ್ದಾರೆ. ಅವರು ಕೆಟ್ಟವರಲ್ಲ. ನಮ್ಮ ನಿರ್ಮಾಪಕರಿಗೆ ಮೊದಲ ಆದ್ಯತೆ ನೀಡುತ್ತಾರೆ. ಕಥೆ ಕೇಳಿ ಸಿನಿಮಾ ಮಾಡುತ್ತಾರೆ. ಕೆಲವರು ಹೇಳುತ್ತಾರೆ. ಈ ಘಟನೆ ಬಗ್ಗೆ ಪ್ರೂಫ್ ಇದೆಯಾ? ದರ್ಶನ್‌ಗೆ ಅಡ್ವಾನ್ಸ್ ಕೊಟ್ಟೆ ಎಂದು ಪರ ಮಾತನಾಡುತ್ತಿಲ್ಲ. ತಪ್ಪಾಗಿಲ್ಲ ಅಂತಿಲ್ಲ. ಆದರೆ ನೋಡಿಲ್ಲ. ಈತರ ಘಟನೆ ನಡೆಯಬಾರದಿತ್ತು. ನಡೆದು ಹೋಗಿದೆ. ಅತೀ ಶೀಘ್ರದಲ್ಲಿ ಹೊರಬರುತ್ತಾರೆʼ...
ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬಗ್ಗೆ ಸ್ಯಾಂಡಲ್‌ವುಡ್ ಫೇಮಸ್ ನಿರ್ಮಾಪಕ ಕೆ ಮಂಜು ಅವರು ದರ್ಶನ್ ಕುರಿತಾಗಿ ಮೇಲಿನಂತೆ ಹೇಳಿದ್ದಾರೆ. ʻʻದರ್ಶನ್ ನೀವು ಅಂದ್ಕೊಂಡಿರೋ ಹಾಗೆ ಕೆಟ್ಟವರಲ್ಲ. ಅವರು ಒಳ್ಳೆಯದು ಮಾಡಿದ್ದಾರೆ. ನಾವು ನೋಡಿದ ಹಾಗೇ ಅವರು ಒಳ್ಳೆಯ ವ್ಯಕ್ತಿ. ಕೆಲವರೊಂದಿಗೆ ಭಿನ್ನಾಭಿಪ್ರಾಯಗಳಿವೆ. ಅದು ಬಿಟ್ಟರೆ ಬೇರೆ ಏನೂ ಇಲ್ಲ. ಚಿತ್ರರಂಗಕ್ಕೆ ಒಳ್ಳೆಯದಾಗುತ್ತೆ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ ಎಂದು ತಿಳಿಸಿದ್ದಾರೆ.
ತನ್ನ ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬವರನ್ನು ದರ್ಶನ್ ಮತ್ತು ಗ್ಯಾಂಗ್ ಚಿತ್ರಹಿಂಸೆ ನೀಡಿ ಕೊಲೆಗೈದ ಆರೋಪದಲ್ಲಿ ದರ್ಶನ್ ಜೈಲುಪಾಲಾಗಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಅವರ ಆಪ್ತರು ಭೇಟಿ ನೀಡುತ್ತಿದ್ದಾರೆ. ದರ್ಶನ್‌ಗೆ ಸಮಾಧಾನದ ಮಾತುಗಳನ್ನು ಹೇಳಿ ಬರುತ್ತಿದ್ದಾರೆ.