ದರ್ಶನ್ ಅಟ್ಟಹಾಸ ಪ್ರಕರಣ | ಕೊಲೆ ಒಪ್ಪಿಕೊಳ್ಳಲು ಡೀಲ್ ಮಾಡಿದ್ದ 30 ಲಕ್ಷ ನಗದು ಸೀಜ್
ರೇಣುಕಾಸ್ವಾಮಿ ಕೊಲೆಯನ್ನು ಒಪ್ಪಿಕೊಳ್ಳಲು ಆರೋಪಿಗಳಿಗೆ ನೀಡಲು ಆರೋಪಿ ವಿನಯ್ ಮಾಲೀಕತ್ವದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.;
By : The Federal
Update: 2024-06-14 13:53 GMT
ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆಯನ್ನು ತಾವೇ ಮಾಡಿರುವುದಾಗಿ ಒಪ್ಪಿಕೊಂಡು ಪೊಲೀಸರ ಮುಂದೆ ಶರಣಾಗಲು ಆರೋಪಿಗಳಿಗೆ ಡೀಲ್ ಮಾಡಿದ್ದ ಮೂವತ್ತು ಲಕ್ಷ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿನಯ್ ಮಾಲೀಕತ್ವದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಬಳಿಕ ಆರ್.ಆರ್.ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಆರೋಪಿಗಳ ತಂಡ ಪಾರ್ಟಿ ಮಾಡಿತ್ತು. ವಿನಯ್ ಮಾಲೀಕತ್ವದ ರೆಸ್ಟೋರೆಂಟ್‌ನಲ್ಲಿ ಪೊಲೀಸರು ಶೋಧ ನಡೆಸಿದ್ದು, ಈ ವೇಳೆ 30 ಲಕ್ಷ ಹಣ ಸೀಜ್ ಮಾಡಲಾಗಿದೆ. ಇದು ಕೊಲೆ ಆರೋಪ ಹೊರುವ ಯುವಕರಿಗೆ ನೀಡಲು ಇಟ್ಟಿದ್ದ ಹಣ ಎನ್ನಲಾಗಿದೆ. ಕೊಲೆ ನಾವೇ ಮಾಡಿದ್ದು ಎಂದು ಒಪ್ಪಿಕೊಂಡು ಬಂದಿದ್ದ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿಗೆ ನೀಡಲು ಹಣ ಇಡಲಾಗಿತ್ತು.