ಸಿಎಂಗೆ ಸಿಕ್ಕಿಹಾಕಿಕೊಳ್ಳುವ ಭಯ ಕಾಡುತ್ತಿದೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಸಿಎಂ ಸಿದ್ದರಾಮಯ್ಯ ಅವರಿಗೆ ಸಿಕ್ಕಿಹಾಕಿಕೊಳ್ಳುವ ಭಯ ಕಾಡುತ್ತಿದೆ. ಆಫ್ ದೀ ಫ್ಯಾಮಿಲಿ, ಭೈದೀ ಫ್ಯಾಮಿಲಿ, ಫಾರ್ ದಿ ಫ್ಯಾಮಿಲಿ. ಇದು ಕಾಂಗ್ರೆಸ್ ತತ್ವವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.;
ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವ ಭಯ ಕಾಡುತ್ತಿದೆ. ಆಫ್ ದೀ ಫ್ಯಾಮಿಲಿ, ಭೈದೀ ಫ್ಯಾಮಿಲಿ, ಫಾರ್ ದಿ ಫ್ಯಾಮಿಲಿ ಎನ್ನುವುದು ಕಾಂಗ್ರೆಸ್ ತತ್ವವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.
ಶನಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಸುದೀರ್ಘ ವಿಚಾರಣೆ ಬಳಿಕವೂ ಷಡ್ಯಂತ್ರ ಅನ್ನೋದು ಮೂರ್ಖತನ. ರಾಜ್ಯಪಾಲರು ಬಗ್ಗೆ ಆರೋಪದಲ್ಲಿ ಹುರುಳಿಲ್ಲ. ಹೈಕೋರ್ಟ್ ಮೂಡ ಹಗರಣದ ಬಗ್ಗೆ ಸುದೀರ್ಘವಾಗಿ ವಿಶ್ಲೇಷಣೆ ಮಾಡಿದೆ. ಅದರೂ ಕಾಂಗ್ರೆಸ್ ಇನ್ನೂ ರಾಜ್ಯಪಾಲರ ಮೇಲೆ ಆರೋಪ ಮಾಡುತ್ತಿದ್ದಾರೆ. ದಿನ ಬೆಳಗಾದ್ರೆ ರಾಜ್ಯಪಾಲರ ಬಗ್ಗೆ ಮಾತನಾಡ್ತಾರೆ. ಮುಖ್ಯಮಂತ್ರಿ ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ ಸಿಬಿಐಗೆ ಕೊಡಿ ಎಂದು ಸವಾಲು ಹಾಕಿದ್ದಾರೆ.
ಇಲ್ಲಿನ ಲೋಕಾಯುಕ್ತ ಅಧಿಕಾರಿಗಳಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಮಾಡ್ತಾರೆ. ನೈತಿಕವಾಗಿ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಕಾಂಗ್ರೆಸ್ ಪರವಾಗಿ ಬಂದ್ರೆ ರಾಜ್ಯಪಾಲರ ಸಂವಿಧಾನದ ಬದ್ಧವಾಗಿ ಕೆಲಸ ಮಾಡ್ತಾರೆ. ಇವರು ವಿರುದ್ಧವಾಗಿ ಬಂದ್ರೆ ಸಂವಿಧಾನ ಉಲ್ಲಂಘನೆ ಮಾತು ಬರುತ್ತೆ ಎಂದು ಕಿಡಿ ಕಾರಿದ್ದಾರೆ.