ಹುಬ್ಬಳ್ಳಿ ಬಾಲಕಿ ಹತ್ಯೆ, ಆರೋಪಿ ಎನ್ಕೌಂಟರ್:​ ಸಿಐಡಿ ತನಿಖೆಗೆ ನಿರ್ಧರಿಸಿದ ಸರ್ಕಾರ

ಎನ್ಕೌಂಟರ್​ನಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ದೂರವಾಣಿ ಕರೆ ವಿವರ (ಸಿಡಿಆರ್) ಪರಿಶೀಲಿಸಬೇಕು. ವೈರ್​ಲೆಸ್ ಲಾಗ್ ಬುಕ್ ಪರಿಶೀಲನೆಗೆ ನಿರ್ದೇಶಿಸಲು ಮನವಿ ಮಾಡಿದೆ. ಮೃತನ ದೇಹದ ಅಂತ್ಯಕ್ರಿಯೆ ಮಾಡದಂತೆ ತಡೆಗೆ ಮತ್ತು ಸಾಕ್ಷ್ಯನಾಶ ಆಗದಂತೆ ಕ್ರಮಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿಕೊಂಡಿದೆ.;

Update: 2025-04-15 11:25 GMT

ಬಾಲಕಿಯನ್ನು ಹೊತ್ತೊಯ್ದ ಆರೋಪಿ

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಂದಿದ್ದ ಆರೋಪಿಯು ಪೊಲೀಸ್​ ಗುಂಡೇಟಿಗೆ ಬಲಿಯಾಗಿರುವ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ.

ಬಿಹಾರ ಮೂಲದ ಆರೋಪಿ ರಿತೇಶ್​ ಕುಮಾರ್​ ಎನ್​ಕೌಂಟರ್ ಬಲಿಯಾಗಿರುವ ಪ್ರಕರಣದ ಪ್ರಕರಣದ ತನಿಖೆಗಾಗಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್​ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿತ್ತು. ಎನ್​ಕೌಂಟರ್​ನಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ದೂರವಾಣಿ ಕರೆ ವಿವರ (ಸಿಡಿಆರ್) ಪರಿಶೀಲಿಸಬೇಕು. ವೈರ್​ಲೆಸ್ ಲಾಗ್ ಬುಕ್ ಪರಿಶೀಲನೆಗೆ ನಿರ್ದೇಶಿಸಲು ಹೈಕೋರ್ಟ್‌ಗೆ ಮನವಿ ಮಾಡಲಾಗಿತ್ತು. ಮೃತನ ದೇಹದ ಅಂತ್ಯಕ್ರಿಯೆ ಮಾಡದಂತೆ ತಡೆಗೆ ಮತ್ತು ಸಾಕ್ಷ್ಯನಾಶ ಆಗದಂತೆ ಕ್ರಮಕ್ಕೆ ನಿರ್ದೇಶನ ನೀಡುವಂತೆಯೂ ಮನವಿ ಮಾಡಿಕೊಂಡಿದೆ. ಈ ನಡುವೆ  ಸರ್ಕಾರ ಸಿಐಡಿ ತನಿಖೆಗೆ ನಿರ್ದೇಶಿಸಿದೆ. ಇನ್ನೆರಡು ದಿನಗಳಲ್ಲಿ ಸಿಐಡಿ ತನಿಖೆ ಆರಂಭಗೊಳ್ಳುವ ಸಾಧ್ಯತೆ ಇದೆ.

ಏನಿದು ಘಟನೆ 

ಹುಬ್ಬಳ್ಳಿಯ ಅಧ್ಯಾಪಕ್ ನಗರದಲ್ಲಿ ಏಪ್ರಿಲ್ 13 ( ಭಾನುವಾರ) ರಂದು ಐದು ವರ್ಷದ ಬಾಲಕಿಯನ್ನು ರಿತೇಶ್ ಕುಮಾರ್ ಪುಸಲಾಯಿಸಿ ಕರೆದುಕೊಂಡು ಹೋಗಿದ್ದನು. ನಂತರ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದನು. ಅತ್ಯಾಚಾರ ನಡೆದ ಬಳಿಕ ಪ್ರತಿಭಟನೆಗಳು ನಡೆದು ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಆರೋಪಿಯನ್ನು ಎನ್ಕೌಂಟರ್​ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಸಾರ್ವಜನಿಕರು ಟೈರ್​ಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ ಆತ ಸ್ಥಳ ಮಹಜರಿಗೆ ಕರೆದುಕೊಂಡು ಹೋಗುವಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕಾರಣ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದು, ಅದರಲ್ಲಿ ಎರಡು ಗುಂಡುಗಳು ರಿತೇಶ್​​ನ ದೇಹಕ್ಕೆ ಹೊಕ್ಕು ಆತ ಮೃತಪಟ್ಟಿದ್ದ.

ಪೊಲೀಸರು ಆತನ ಗುರುತನ್ನು ಖಚಿತಪಡಿಸಲು ಆತನ ವಾಸಸ್ಥಳಕ್ಕೆ ಕರೆದೊಯ್ಯುತ್ತಿರುವಾಗ, ರಿತೇಶ್ ಕುಮಾರ್ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಅಲ್ಲದೆ, ಪೊಲೀಸರ ಮೇಲೆ ಕಲ್ಲು ಎಸೆದು, ವಾಹನಗಳಿಗೆ ಹಾನಿಮಾಡಿ, ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಸಂದರ್ಭದಲ್ಲಿ, ಸಬ್-ಇನ್‌ಸ್ಪೆಕ್ಟರ್ ಅನ್ನಪೂರ್ಣಾ ಅವರು ಆತನ ಕಾಲು ಮತ್ತು ಎದೆಗೆ ಗುಂಡು ಹಾರಿಸಿದ್ದಾರೆ. ಆರೋಪಿ ರಿತೇಶ್​ ಕುಮಾರ್​ನನ್ನು ಕಿಮ್ಸ್​ಗೆ ಸಾಗಿಸುವ ಮುನ್ನವೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. 

Tags:    

Similar News