Chikungunya: ಎಚ್ಚರಿಕೆಯಿಂದಿರಿ,,,ಬೆಂಗಳೂರಿನಲ್ಲಿ ಚಿಕೂನ್ ಗುನ್ಯಾ, ಡೆಂಗ್ಯೂ ಹೆಚ್ಚಳ

ಜನವರಿಯಿಂದ ಇಲ್ಲಿಯವರೆಗೆ 260 ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಯೋಜನಾ ವಿಭಾಗದ ನಿರ್ದೇಶಕ ಅನ್ಸರ್ ಅಹಮ್ಮದ್ ತಿಳಿಸಿದ್ದಾರೆ.;

Update: 2025-04-07 04:22 GMT

ನಗರದಲ್ಲಿ ಡೆಂಗ್ಯೂ, ಚಿಕುನ್‌ ಗುನ್ಯಾ ಪ್ರಕರಣಗಳು ಹೆಚ್ಚಾಗುತ್ತಿವೆ. 

ರಾಜ್ಯದಲ್ಲಿ ಈಗ ಮತ್ತೆ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಸೋಂಕಿನ ಭೀತಿ ಹೆಚ್ಚಾಗಿದೆ. ಬೇಸಿಗೆಯ ಮಳೆಯಿಂದಾಗಿ ಈ ಸೋಂಕುಗಳು ಮತ್ತಷ್ಟು ವ್ಯಾಪಿಸುವ ಸಾಧ್ಯತೆ ಇದೆ. ಅದೇ ರೀತಿ ಕಳೆದ ಮೂರು ತಿಂಗಳಲ್ಲಿ 910ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಇತ್ತೀಚೆಗೆ ಎರಡು ದಿನಗಳ ಹಿಂದಷ್ಟೆ ಸುರಿದ ಭಾರಿ ಮಳೆಯ ಬಳಿಕ 75ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. 

ಡೆಂಗ್ಯೂ ಜೊತೆ ಚಿಕೂನ್ ಗುನ್ಯಾ ಕೂಡಾ ಪತ್ತೆಯಾಗುತ್ತಿದ್ದು, ಕಳೆದ ಒಂದೇ ವಾರದಲ್ಲಿ 24 ಪ್ರಕರಣಗಳು ಪತ್ತೆಯಾಗಿವೆ. ಜನವರಿಯಿಂದ ಇಲ್ಲಿಯವರೆಗೆ 260 ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಯೋಜನಾ ವಿಭಾಗದ ನಿರ್ದೇಶಕ ಅನ್ಸರ್ ಅಹಮ್ಮದ್ ತಿಳಿಸಿದ್ದಾರೆ.

ಜ್ವರ ಮತ್ತು ವೈರಲ್ ಫಿವರ್‌ನಿಂದ ಬಳಲುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ತಪಾಸಣೆ ಸಂದರ್ಭದಲ್ಲಿ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.  ವೈದ್ಯರು, ಚಿಕೂನ್ ಗುನ್ಯಾ ಮತ್ತು ವೈರಲ್ ಜ್ವರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಈಡಿಸ್ ಈಜಿಪ್ಟಿ (Aedes aegypti) ಜಾತಿಯ ಸೊಳ್ಳೆಗಳಿಂದ ಹರಡುತ್ತವೆ. ಈ ಸೊಳ್ಳೆ ಕಡಿತದ  7 ದಿನಗಳೊಳಗೆ ಲಕ್ಷಣಗಳು ಕಾಣಬಹುದು. ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿ ಈ ಸೊಳ್ಳೆಗಳು ಹೆಚ್ಚಾಗಿ ಕಚ್ಚುತ್ತವೆ. ಆದ್ದರಿಂದ ಜನರು ಹಗಲಿನಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ಡೆಂಗ್ಯೂ ಲಕ್ಷಣಗಳು

ತೀವ್ರ ಜ್ವರ

ತಲೆನೋವು

ಸ್ನಾಯು ಹಾಗೂ ಕೀಲು ನೋವು

ವಾಕರಿಕೆ ಮತ್ತು ವಾಂತಿ

ಲಸಿಕೆ ಗ್ರಂಥಿಗಳ ಉರಿಯೂತ

ದದ್ದು

ಆಯಾಸ ಮತ್ತು ಆಲಸ್ಯ

ಚಿಕುನ್ ಗುನ್ಯಾ ಲಕ್ಷಣಗಳು

ತೀವ್ರ ಜ್ವರ

ತೀವ್ರ ಕೀಲು ನೋವು

ಕೀಲು ಊತ

ಸ್ನಾಯು ನೋವು

ತಲೆನೋವು

ದದ್ದು

ಆಯಾಸ

ವಾಕರಿಕೆ


Tags:    

Similar News