ಹಿಂದುಳಿದ, ದಲಿತ ಮಠಗಳಿಗೆ ರಾಜಧಾನಿಯಲ್ಲಿ ನಿವೇಶನ; ಹಿಂದುಳಿದ, ದಲಿತ ಅರ್ಚಕರ ತಯಾರಿಗೆ ಗುರುಕುಲ

ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡುವೆಯೇ ಹಿಂದುಳಿದ ಮತ್ತು ದಲಿತ ವರ್ಗಗಳ ಸ್ವಾಮೀಜಿಗಳನ್ನು ಸಿದ್ದರಾಮಯ್ಯ ಭೇಟಿ ಮಾಡಿರುವುದು ರಾಜಕೀಯ ಮಹತ್ವ ಪಡೆದುಕೊಂಡಿದೆ.;

Update: 2025-05-03 12:18 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳ ಜತೆ ಮಹತ್ವದ ಚರ್ಚೆ ನಡೆಸಿದ್ದು, ಹಿಂದುಳಿದ ವರ್ಗಗಳ, ದಲಿತ ಅರ್ಚಕರನ್ನು ರೂಪಿಸಲು ಗುರುಕುಲ ಸೇರಿದಂತೆ ಹಲವು ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಜಾತಿ ಜನಗಣತಿ ಅಥವಾ ಸಾಮಾಜಿ, ಆರ್ಥಿಕ , ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಜಾರಿಗೆ ತರುವ ಸಂಬಂಧ ಚರ್ಚೆಗೆ ವಿಶೇಷ ಸಚಿವ ಸಂಪುಟ ಸಭೆಗಳನ್ನು ನಡೆಸುತ್ತಿರುವ ಬೆನ್ನಿಗೇ ಈ ಭೇಟಿ ನಡೆದಿರುವುದು ವಿಶೇಷವಾಗಿದೆ. ಜತೆಗೆ, ಮುಖ್ಯಮಂತ್ರಿ  ಬದಲಾವಣೆ ಚರ್ಚೆ ನಡುವೆಯೇ ಹಿಂದುಳಿದ ಮತ್ತು ದಲಿತ ವರ್ಗಗಳ ಸ್ವಾಮೀಜಿಗಳನ್ನು ಸಿದ್ದರಾಮಯ್ಯ ಭೇಟಿ ಮಾಡಿರುವುದು ರಾಜಕೀಯ ಮಹತ್ವ ಪಡೆದುಕೊಂಡಿದೆ. 

ಜತೆಗೆ,   ಎಲ್ಲಾ ದಲಿತ ಮತ್ತು ಹಿಂದುಳಿದ ಮಠಗಳಿಗೆ ಆನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.  ಇದು ಜಾತಿ ಗಣತಿ ಸಂಬಂಧ ಅಹಿಂದ ವರ್ಗಗಳ  ಮತ್ತು ಇತರ ಸಮುದಾಯಗಳ ಒಳಗೆ ನಡೆಯುತ್ತಿರುವ ಚರ್ಚೆಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ   ನಿಯೋಗ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಚರ್ಚೆ ನಡೆದಿದೆ. 

ಈ ಭೇಟಿ ಸಂದರ್ಭದಲ್ಲಿ ಹಿಂದುಳಿದ ಮತ್ತು ದಲಿತ ಅರ್ಚಕರನ್ನು ರೂಪಿಸಲು ಅನುಕೂಲ ಆಗುವ ರೀತಿ ಗುರುಕುಲ ಆರಂಭಿಸಲು ಚಿತ್ರದುರ್ಗ ಜಿಲ್ಲೆಯಲ್ಲಿ ಜಾಗ ನೀಡುವಂತೆ ನಿಯೋಗ ಮನವಿ ಮಾಡಿತು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಗ ಗುರುತಿಸಿ ವರದಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಿಂದುಳಿದ ಮತ್ತು ದಲಿತ ಅರ್ಚಕರನ್ನು ರೂಪಿಸಲು ಅನುಕೂಲ ಆಗುವ ರೀತಿ ಗುರುಕುಲ ಆರಂಭಿಸಲು ಚಿತ್ರದುರ್ಗ ಜಿಲ್ಲೆಯಲ್ಲಿ ಜಾಗ ನೀಡುವಂತೆ ನಿಯೋಗ  ಮಾಡಿದ ಮನವಿಗೆ  ಸ್ಪಂದಿಸಿದ ಸಿದ್ದರಾಮಯ್ಯ, ಜಾಗ ಗುರುತಿಸಿ ವರದಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲಾ ಹಿಂದುಳಿದ ಮತ್ತು ದಲಿತ ಮಠಗಳಿಗೆ ಬೆಂಗಳೂರಿನಲ್ಲಿ ನಿವೇಶನ ಒದಗಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಪರಿಶೀಲನೆ ಮಾಡುವ ಭರವಸೆಯನ್ನೂ ಸಿಎಂ ನೀಡಿದರು.

ಹಿಂದುಳಿದ ದಲಿತ ಮಠಾಧೀಶರ ಮಠಗಳಿಗೆ 10 ಕೋಟಿ ಅನುದಾನ ನೀಡುವುದು ಸೇರಿದಂತೆ ಹಲವು ಮನವಿಗಳಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಫಂದಿಸಿದ್ದಾರೆ.

ಗುರುಕುಲ, ಐಎಎಸ್‌ ತರಬೇತಿ ಕೇಂದ್ರ

ಗುರುಕುಲ ಮಾದರಿಯಲ್ಲಿ ತಳಸಮುದಾಯಗಳ ವಿದ್ಯಾರ್ಥಿಗಳಿಗೆ ಧಾರ್ಮಿಕ ಸಂಸ್ಕಾರ ನೀಡಲು ಎಲ್ಲಾ ತಳ ವರ್ಗಗಳ ಸಮುದಾಯಗಳ ದೇವಸ್ಥಾನಗಳ ಪೂಜಾರಿಗಳಿಗೆ ಪ್ರಗತಿಪರ ಅರಿವನ್ನು, ಜಾಗೃತಿ ಮೂಡಿಸಲು;  ಬುದ್ಧ ಬಸವ, ಅಂಬೇಡ್ಕರ್‌, ಕನಕ, ವಾಲ್ಮೀಕಿ, ನಾರಾಯಣಗುರು, ಜ್ಯೋತಿ ಬಾಪುಲೆ ಇನ್ನಿತರ ಮಹನೀಯರ ತತ್ವಾದರ್ಶಗಳನ್ನು ಈ ಸಮುದಾಯಗಳ ಜನಗಳಲ್ಲಿ ಅರಿವು ಮೂಡಿಸಲು   ಹಾಗೂ  ಕೆಎಎಸ್‌, ಐಎಎಸ್‌, ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಹಿಂದುಳಿದ ದಲಿತ ಸಮುದಾಯಗಳ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಐಎಎಸ್‌, ಕೆಎಎಸ್‌ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಒಕ್ಕೂಟದ ಮಠಾಧೀಶರು ಯೋಚಿಸಿದ್ದು,  25  ಕೋಟಿ ರೂ. ಮಂಜೂರು ಮಾಡಲು ಮುಖ್ಯಮಂತ್ರಿಗಳನ್ನು ವಿನಂತಿಸಲಾಗಿದೆ. 

ಇತರ ಬೇಡಿಕೆ

ಇದೇ ವೇಳೆ ಸ್ವಾಮೀಜಿಗಳ ನಿಯೋಗ ಶ್ರೀ ಕಾಗಿನೆಲೆ ಮಹಾಸಂಸ್ಥಾನ, ಕನಕಗುರುಪೀಠ ವತಿಯಿಂದ ಶಿಗ್ಗಾಂವಿಯಲ್ಲಿ ಸಮುದಾಯ ಭವನ ನಿರ್ಮಾಣ, ಬಾಗಲಕೋಟೆಯಲ್ಲಿ ಭೋವಿ ಗುರುಪೀಠ, ಚಿತ್ರದುರ್ಗದಲ್ಲಿ ಮಾದಾರ ಚೆನ್ನಯ್ಯ ಗುರುಪೀಠ, ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಮಹರ್ಷಿ ವಾಲ್ಮೀಕಿ ಗುರುಪೀಠ, ಹೊಸದುರ್ಗದಲ್ಲಿ ಭಗೀರಥ ಉಪ್ಪಾರ ಗುರುಪೀಠ, ಚಿತ್ರದುರ್ಗದಲ್ಲಿ ಮಾಚಿದೇಚ ಮಹಾಸಂಸ್ಥಾನ ಮಡಿವಾಳ ಗುರುಪೀಠ, ಚಿತ್ರದುರ್ಗದಲ್ಲಿ ಶ್ರೀ ಕೃಷ್ನ ಯಾದವ ಮಹಾಸಂಸ್ಥಾನ ಯಾದವ ಗುರುಫಠ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನು ನೀಡಿದೆ.

 

 

 

 

Tags:    

Similar News