ಜಾತಿ ಗಣತಿ ವರದಿ | ಸಿದ್ದರಾಮಯ್ಯ ಒಪ್ಪಿದ ಬಳಿಕವೇ ಸಂಪುಟದಲ್ಲಿ ಮಂಡನೆ; ಮುಂದಿನ ವಾರ ಅನುಮಾನ

ಜಾತಿ ಜನಗಣತಿ ಎಂಬುದು ಸರಿಯಿಲ್ಲ. ಅದು ಆರ್ಥಿಕ - ಸಾಮಾಜಿಕ ಸಮೀಕ್ಷೆ ಹೊರತು ಜಾತಿ ಜನಗಣತಿ ಅಲ್ಲ," ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ.;

Update: 2025-01-24 08:56 GMT

"ಜಾತಿ ಜನಗಣತಿ ಎಂಬುದು ಸರಿಯಿಲ್ಲ. ಅದು ಆರ್ಥಿಕ - ಸಾಮಾಜಿಕ ಸಮೀಕ್ಷೆ ಹೊರತು ಜಾತಿ  ಜನಗಣತಿ ಅಲ್ಲ," ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಆ ವರದಿಯನ್ನು ಯಾವಾಗ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ನಿರ್ಧರಿಸಿದ ಬಳಿಕವೇ  ರಾಜ್ಯ ಖಜಾನೆಯಲ್ಲಿ ಮುಚ್ಚಿದ ಪೆಟ್ಟಿಗೆಯಲ್ಲಿರುವ ವರದಿಯನ್ನು ತೆರಯಲಾಗುವುದು ಎಂದು ಅವರು ಸ್ಪಷ್ಟಪಡಿದರು.

ಮುಂದಿನ ಕ್ಯಾಬಿನೆಟ್ ನಲ್ಲಿ ಜಾತಿಜನಗಣತಿ ಚರ್ಚೆ ವಿಚಾರ ಬಗ್ಗೆ ಮಾತನಾಡಿದ ಅವರು, ಆ ಬಗ್ಗೆ ಯಾವುದೇ ಖಚಿತ ಹೇಳಿಕೆ ನೀಡಿಲ್ಲ. ಬದಲಾಗಿ ಮುಖ್ಯಮಂತ್ರಿ ನಿರ್ಧರಿಸಿದ ಬಳಿಕವೇ ಆ ವರದಿಯನ್ನು ಸಂಪುಟಸಭೆಯಲ್ಲಿ ಮಂಡಿಸಲಾಗುವುದು ಎಂದು ಹೇಳಿದ್ದಾರೆ.  ಇದರಿಂದಾಗಿ ಜಾತಿ ಗಣತಿ ವರದಿ ಮಂಡನೆ ಮುಂದಿನ ಸಂಪುಟ ಸಭೆಯಲ್ಲೇ ಮಂಡಿಸುವುದು ಇನ್ನೂ ಅನುಮಾನ ಎನ್ನಲಾಗಿದೆ.

ಕಳೆದ ವಾರ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ವಿಷಯ ಮಂಡನೆ ಮಾಡುವುದಾಗಿ ಸಭೆಯ ನಡಾವಳಿಯಲ್ಲಿ ದಾಖಲಾಗಿದ್ದರೂ, ಕೊನೆ ಘಳಿಗೆಯಲ್ಲಿ  ಮಂಡನೆ ವಿಷಯವನ್ನು ಹಿಂದಕ್ಕೆ ಪಡೆಯಲಾಗಿತ್ತು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಮಾಹಿತಿ ನೀಡಿದ್ದರು. ಆದರೆ, ಸಚಿವ ತಂಗಡಗಿ ಹೇಳಿಕೆಯನ್ನು ಗಮನಿಸಿದರೆ ಅದು ಇನ್ನೂ ಅನುಮಾನ ಎಂಬ ಚರ್ಚೆ ಆರಂಭವಾಗಿದೆ. 

ಜಾತಿ ಗಣತಿ ವರದಿಯನ್ನು ಸರ್ಕಾರ ಸ್ವೀಕಾರ ಮಾಡಿದೆಯಷ್ಟೇ ಹೊರತು ಅದನ್ನು ತೆರೆಯಲಾಗಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಅಂಕಿ ಅಂಶಗಳು ಸುಳ್ಳು ಮಾಹಿತಿಯಿಂದ ಕೂಡಿವೆ.  ಹಾಗಾಗಿ ಅದರ ಬಿಡುಗಡೆಗೂ ಮುನ್ನವೇ ವಿರೋಧ ಬೇಡ ಎಂದು ಸಚಿವರು ಹೇಳಿದ್ದಾರೆ. " ಹಿಂದುಳಿದ ವರ್ಗಗಳ ಇಲಾಖೆಯಿಂದ ಈ ವರದಿ ಸಿದ್ಧಪಡಿಸಲು 166 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ. ಅದರ ಬಿಡುಗಡೆಗೆ ಯಾವ ಮತ್ತು ಯಾರ ಭಯ, ಆತಂಕವೂ ಇಲ್ಲ," ಎಂದು ಸಚಿವರು ಹೇಳಿದ್ದಾರೆ.

Tags:    

Similar News