Caste Census | ಚರ್ಚೆಗೆ ನಿಗದಿಯಾದ ಜಾತಿ ಜನಗಣತಿ ವರದಿ; ಎರಡು ಪೆಟ್ಟಿಗೆಗಳಲ್ಲಿ ಏನೇನಿದೆ?
ಜಾತಿವಾರು ಜನಗಣತಿ ವರದಿಯ ವಿಸ್ತೃತ ಚರ್ಚೆ ಅಗತ್ಯವಿರುವ ಹಿನ್ನೆಲೆಯಲ್ಲಿ ಸಮೀಕ್ಷಾ ವರದಿ ತೀವ್ರ ಕುತೂಹಲ ಮೂಡಿಸಿದೆ. ಎರಡು ಪೆಟ್ಟಿಗೆಗಳಲ್ಲಿ ಸ್ವೀಕರಿಸಿರುವ ವರದಿಯಲ್ಲಿ ಏನೆಲ್ಲಾ ಇರಲಿದೆ ಎಂಬ ಮಾಹಿತಿ ಇಲ್ಲಿದೆ.;
ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿ ಅನುಷ್ಠಾನ ಕುರಿತ ಚರ್ಚೆಗೆ ಏ.17 ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಜಾತಿವಾರು ಜನಗಣತಿ ವರದಿ ಹೊರತುಪಡಿಸಿ ಯಾವುದೇ ವಿಚಾರ ಚರ್ಚೆಗೆ ತೆಗೆದುಕೊಳ್ಳದಿರಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಹಾಗಾದರೆ, ಜಾತಿವಾರು ಜನಗಣತಿ ವರದಿಯ ವಿಸ್ತೃತ ಚರ್ಚೆ ಅಗತ್ಯವಿರುವ ಹಿನ್ನೆಲೆಯಲ್ಲಿ ಸಮೀಕ್ಷಾ ವರದಿ ತೀವ್ರ ಕುತೂಹಲ ಮೂಡಿಸಿದೆ. ಎರಡು ಪೆಟ್ಟಿಗೆಗಳಲ್ಲಿ ಸ್ವೀಕರಿಸಿರುವ ಜಾತಿವಾರು ಜನಗಣತಿ ವರದಿಯಲ್ಲಿ ಏನೆಲ್ಲಾ ಇರಲಿದೆ ಎಂಬ ಮಾಹಿತಿ ಇಲ್ಲಿದೆ.
ಸಮೀಕ್ಷಾ ವರದಿಯಲ್ಲಿ ಏನಿದೆ?
ಎರಡು ಪೆಟ್ಟಿಗೆಗಳಲ್ಲಿ ಸಲ್ಲಿಸಿರುವ ದಾಖಲೆಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ವಿವರಗಳಿವೆ. ಮೊದಲ ಪೆಟ್ಟಿಗೆಯಲ್ಲಿ 2015 ರ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯ ಸಮಗ್ರ ವರದಿ, ಜಾತಿವಾರು ಜನಸಂಖ್ಯೆ ವಿವರ ಸಂಪುಟ-1, ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಜಾತಿ) ಸಂಪುಟ 1, ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಪಂಗಡಗಳು) ಸಂಪುಟ 1, ಜಾತಿ ಹಾಗೂ ವರ್ಗಗಳ ಪ್ರಮುಖ ಲಕ್ಷಣಗಳು (ಎಸ್ಸಿ/ಎಸ್ಟಿ ಹೊರತುಪಡಿಸಿ) –ಏಳು ಸಂಪುಟಗಳು, ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ ಅಂಶಗಳು (2 ಸಿ.ಡಿ), 2015 ರ ಸಮೀಕ್ಷೆಯ ‘ದತ್ತಾಂಶಗಳ ಅಧ್ಯಯನ ವರದಿ–2024 ಒಳಗೊಂಡಿದೆ.
ಎರಡನೇ ಪೆಟ್ಟಿಗೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಮಾಹಿತಿಯ ಜಾತಿ, ವರ್ಗವಾರು (ಎಸ್ಸಿಎಸ್ಟಿ ಬಿಟ್ಟು) 4 ಸಂಪುಟಗಳು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಮಾಹಿತಿಯ ಜಾತಿ, ವರ್ಗವಾರು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು) ಒಂದು ಸಂಪುಟ, ತಾಲ್ಲೂಕುವಾರು, ಜಾತಿವಾರು ಕುಟುಂಬಗಳು ಹಾಗೂ ಜನಸಂಖ್ಯೆಯ ವರದಿಯು ಒಟ್ಟು 30 ಸಂಪುಟಗಳು ಇವೆ.
ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದ ಕುರಿತ ದ್ವಿತೀಯ ಮೂಲಗಳಿಂದ ಪಡೆದ ವಿವರಗಳ ಕುರಿತಾದ ಮಾಹಿತಿ ಒಂದು ಸಂಪುಟದಲ್ಲಿದೆ.