74 ಆದರ್ಶ ವಿದ್ಯಾಲಯಗಳಿಗೆ ಪಿಯು ಕಾಲೇಜು ಭಾಗ್ಯ; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

74 ಆದರ್ಶ ವಿದ್ಯಾಲಯಗಳಲ್ಲಿ ಬಹುತೇಕ ಗ್ರಾಮಿಣ ಪ್ರದೇಶದ, ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಸಾಮಾಜಿಕ ಹಿಂದುಳಿದ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವಿದ್ಯಾಲಯವನ್ನು ರೂ.೫೫.೧೩ ಲಕ್ಷ ವೆಚ್ಚದಲ್ಲಿ ಉನ್ನತೀಕರಿಸಲು ಅನುಮೋದಿಸಲಾಗಿದೆ

Update: 2024-09-26 16:16 GMT

ರಾಜ್ಯದ 74 ಆದರ್ಶ ವಿದ್ಯಾಲಯಗಳನ್ನು ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಒಟ್ಟು ರೂ. 40.79 ಕೋಟಿ ವೆಚ್ಚದಲ್ಲಿಉನ್ನತೀಕರಣಕ್ಕೆ ಅನುಮೋದನೆ ಪ್ರಸ್ತಾಪಿಸಲಾಗಿದೆ.

74 ಆದರ್ಶ ವಿದ್ಯಾಲಯಗಳಲ್ಲಿ ಬಹುತೇಕ ಗ್ರಾಮಿಣ ಪ್ರದೇಶದ, ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಸಾಮಾಜಿಕ ಹಿಂದುಳಿದ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವಿದ್ಯಾಲಯವನ್ನು ರೂ.55.13 ಲಕ್ಷ ವೆಚ್ಚದಲ್ಲಿ ಉನ್ನತೀಕರಿಸಲು ಅನುಮೋದಿಸಲಾಗಿದ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ತಿಳಿಸಿದರು.

ಅದೇ ರೀತಿ ರಾಜ್ಯದ ೧೮೯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಮಾದರಿ ಕಂಪ್ಯೂಟರ್ ಲ್ಯಾಬ್ ಮತ್ತು ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ರೂ.14.97 ಕೋಟಿಗಳ ಮೊತ್ತದಲ್ಲಿ ಟೆಂಡರ್ ಮೂಲಕ ಖರೀದಿಸಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಒಟ್ಟು ೪,೮೪೮ ಸರ್ಕಾರಿ ಪ್ರೌಢ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 25,21 ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್, ಉಳಿದ ೨,೩೨೭ ಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್ ಮತ್ತು ಯು.ಪಿ.ಎಸ್ ಇಂಟರ್ನೆಟ್ ಸೌಲಭ್ಯ ನೀಡಬೇಕಿದೆ.

ಸಂಪುಟ ಸಭೆಯ ಇತರೆ ಮುಖ್ಯಾಂಶಗಳು

ದಕ್ಷಿಣ ಕನ್ನಡ ಜಿಲ್ಲೆಯ ಹ್ಯಾಟ್-ಹಿಲ್ನಲ್ಲಿ ನಿರ್ಮಿಸಿರುವ ನ್ಯಾಯಾಂಗ ಅಧಿಕಾರಿಗಳ ವಸತಿನಿಲಯ ಕಟ್ಟಡಗಳ ನಿರ್ಮಾಣದ ರೂ.11.70 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿದೆ.

ಡಿಯೋಸಿಸ್ ಎಜುಕೇಶನ್ ಸೊಸೈಟಿ, ಕಾರವಾರ ಇವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಿರುವ ಉತ್ತರಕನ್ನಡ ಜಿಲ್ಲೆ, ಶಿರಸಿ ತಾಲ್ಲೂಕಿನ ಚಿಪಗಿ ಗ್ರಾಮದ ಸ.ನಂ.೫೩ರಲ್ಲಿ ಫ್ಲಾಟ್ ನಂಬರ್ ೨೧೦, ೨೧೧, ೨೧೨ ರಲ್ಲಿನ ೫ ಎಕರೆ ೧೨ ಗುಂಟೆ ೦೯ ಆಣೆ ಜಮೀನನ್ನು ಖಾಯಂ ಆಗಿ ಮಂಜೂರು ಮಾಡುವ ಅಥವಾ ಗುತ್ತಿಗೆ ಆಧಾರದ ಮೇಲೆ ಮುಂದುವರೆಸಲು ನಿರ್ಣಯಿಸಲಾಗಿದೆ. ಜಮೀನಿನ ಪ್ರಚಲಿತ ಮೌಲ್ಯದ ಶೇ.೧೦ ರಷ್ಟು ಇನ್ನಿತರೆ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ, ಮಂಜೂರು ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಹೊಸಕೆರೆಹಳ್ಳಿ ಗ್ರಾಮದ ಸ.ನಂ. ೭೫/೨ರಲ್ಲಿ ೦-೨೦ ಗುಂಟೆ ಜಮೀನನ್ನು ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘ, ಬೆಂಗಳೂರು ಇವರಿಗೆ ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡಲು ಸಚಿವ ಸಂಪುಟ ಅನುಮೋದಿಸಿದೆ.

ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು, ಜಿಗೇನಹಳ್ಳಿ ಗ್ರಾಮದ ಸ.ನಂ.೯೨ ರಲ್ಲಿನ ೦-೦೫ ಗುಂಟೆ “ಗೋಮಾಳ” ಜಮೀನನ್ನು ರಾಮನಗರ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತಕ್ಕೆ ಮಂಜೂರು ಮಾಡಲು ಸಚಿವ ಸಂಪುಟ ಅನುಮೋದಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ೧೫ನೇ ಹಣಕಾಸು ಆಯೋಗದ ರೂ.೩೦ ಕೋಟಿಗಳ ಅನುದಾನದಿಂದ ೭೬ ಹವಾನಿಯಂತ್ರಣ ರಹಿತ ಎಲೆಕ್ಟಿçಕ್ ಬಸ್ಸುಗಳನ್ನು (ಪ್ರತಿ ಬಸ್ಗೆ ರೂ.೩೯.೦೮ ಲಕ್ಷಗಳ ಸಬ್ಸಿಡಿ ನೀಡಿ) ಪ್ರತಿ ಕಿ.ಮೀ.ಗೆ ರೂ.೪೧.೦೧ ದರದಲ್ಲಿ ಜಿ.ಸಿ.ಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ೧೫ನೇ ಹ೭೪ಣಕಾಸು ಆಯೋಗದ ರೂ.೨೫.೦೦ ಕೋಟಿಗಳ ಅನುದಾನದಿಂದ ೫೧ ಹವಾನಿಯಂತ್ರಣರಹಿತ ಎಲೆಕ್ಟಿçಕ್ ಬಸ್ಸುಗಳನ್ನು (ಪ್ರತಿ ಬಸ್ಗೆ ರೂ.೩೯.೦೮ ಲಕ್ಷಗಳ ಸಬ್ಸಿಡಿ ನೀಡಿ) ಪ್ರತಿ ಕಿ.ಮೀ.ಗೆ ರೂ.೪೧.೦೧ ದರದಲ್ಲಿ ಜಿ.ಸಿ.ಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲುಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ನಗರ ಭೂ ಸಾರಿಗೆ ನಿರ್ದೇಶನಾಲಯದ ರಾಜ್ಯ ನಗರ ಸಾರಿಗೆ ನಿಧಿ ಅಡಿಯಲ್ಲಿ ಮಂಜೂರಾಗಿರುವ ರೂ.೨೯.೧೩ ಕೋಟಿಗಳ ಅನುದಾನದಿಂದ ೨೧ ಹವಾನಿಯಂತ್ರಣರಹಿತ ಎಲೆಕ್ಟ್ರಿಕ್ ಬಸ್ಗಳನ್ನು (ಪ್ರತಿ ಬಸ್ಗೆ ರೂ.೩೯.೦೮ ಲಕ್ಷಗಳ ಸಬ್ಸಿಡಿ ನೀಡಿ) ಪ್ರತಿ ಕಿ.ಮೀ ಗೆ ರೂ.೪೧.೦೧ ದರದಲ್ಲಿ ಜಿ.ಸಿ.ಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ

ಯಾದಗಿರಿ ಜಿಲ್ಲೆಯ ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಐ.ಡಿ.ಎಸ್.ಎಂ.ಟಿ ಬಡಾವಣೆಯ ನಿವೇಶನ ಸಂಖ್ಯೆ: ೮೨೩/೩ ರಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ೩೦೦೦ ಚ.ಮೀ ಅಳತೆಯ ನಿವೇಶನವನ್ನು ವೀರಶೈವ ಸಮಾಜದ ವಸತಿ ನಿಲಯ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಮಂಜೂರು ಮಾಡಲು ಸಚಿವವ ಸಂಪುಟ ಅನುಮೋದನೆ ನೀಡಿದೆ.

ರಾಜ್ಯ ವಿಪತ್ತು ಉಪಶಮನ ನಿಧಿಯಡಿಯಲ್ಲಿ ಕೈಗೆತ್ತಿಕೊಳ್ಳುವ ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣ/ ಶಾಶ್ವತ ಪರಿಹಾರ ಹಾಗೂ ಪೋಲಾಗಿ ಹರಿದು ಹೋಗುವ ನೀರಿನ ಯೋಜನೆಗೆ ಕಾಯಕಲ್ಪ. ರೂ.೨೦೦ ಕೋಟಿ ಅಂದಾಜು ಮೊತ್ತದ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

Tags:    

Similar News