ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ; ನಿರ್ವಾಹಕ ಸೇರಿ ಇಬ್ಬರು ಸಾವು

ದುರ್ಗಾಂಬ ಬಸ್ ಮಂಗಳೂರಿನಿಂದ ಚಳ್ಳಕೆರೆಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.;

Update: 2025-07-30 04:55 GMT

ಶಿವಮೊಗ್ಗದಲ್ಲಿ ನಡೆದ ಭೀಕರ ಬಸ್‌ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 

ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಇಂದು(ಬುಧವಾರ) ಶಿವಮೊಗ್ಗದ  ತೀರ್ಥಹಳ್ಳಿ ರಸ್ತೆಯಲ್ಲಿ ನಡೆದಿದೆ.

ಶಿವಮೊಗ್ಗ ತಾಲೂಕಿನ ಗಾಜನೂರು ಅಗ್ರಹಾರದ ಬಳಿ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಕಂಡಕ್ಟರ್ ಅಣ್ಣಪ್ಪ (40), ಪ್ರಯಾಣಿಕರಾದ ಹರ್ಷಿತ (35) ಮೃತಪಟ್ಟಿದ್ದಾರೆ.

ಉಮೇಶ್ (50), ಪ್ರಸಾದ್ (40), ವಿಷ್ಣು (21), ಮಂಜುನಾಥ್ (45), ಸುಜಾತ (40), ಆನಂದ್ ನಾಯ್ಕ್ (50), ನೀಲಾಂಬಿಕಾ (45), ಪ್ರಸಾದ್ (43), ಬಿಂದು (20), ಶಂಶಾಂಕ್ (20), ಲಕ್ಷ್ಮೀ (35), ಶ್ರೀರಾಮುಲು (42) ಹಾಗೂ ಕಾರ್ತಿಕ್ (32) ಎಂಬುವರು ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದುರ್ಗಾಂಬ ಬಸ್ ಮಂಗಳೂರಿನಿಂದ ಚಳ್ಳಕೆರೆಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Tags:    

Similar News