ಇನ್ನು ಮುಂದೆ ರೆಡ್​ಬಸ್​, ರಾಪಿಡೊದಲ್ಲೂ ಮೆಟ್ರೊ ಟಿಕೆಟ್ ಬುಕಿಂಗ್ ಸಾಧ್ಯ

2021ರಲ್ಲಿ ಕೇಂದ್ರ ಸರ್ಕಾರದ ಪ್ರೋತ್ಸಾಹದಿಂದ ಒಎನ್​ಡಿಸಿ ಜಾಲವನ್ನು ಭಾರತದ ಸಾರಿಗೆ ವಲಯಕ್ಕೆ ವಿಸ್ತರಿಸಿ ಡಿಜಿಟಲೀಕರಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು. ಅದೀಗ ಮೆಟ್ರೊಗೆ ಲಭ್ಯವಾಗಿದೆ.;

Update: 2025-07-08 12:11 GMT

ನಮ್ಮ ಮೆಟ್ರೋ ಶೌಚಾಲಯ ಉಪಯೋಗಿಸಲು ಹಣ ಪಾವತಿ ಮಾಡಬೇಕು. 

ಬೆಂಗಳೂರು ಮೆಟ್ರೋ ರೈಲ್​ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್‌ಸಿಎಲ್) 'ನಮ್ಮ ಮೆಟ್ರೋ' ಸೇವೆಗಳಲ್ಲಿ ಮಹತ್ವಾಕಾಂಕ್ಷಿ ಆವಿಷ್ಕಾರವನ್ನು ಪರಿಚಯಿಸಿದೆ. ಇನ್ನು ಮುಂದೆ ಪ್ರಯಾಣಿಕರು ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಜಾಲದ ಮೂಲಕ 9 ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಮೆಟ್ರೋ ಟಿಕೆಟ್‌ಗಳನ್ನು ಸುಲಭವಾಗಿ ಬುಕ್ ಮಾಡಿ ಪ್ರಯಾಣಿಸಬಹುದು. ಇದುವರೆಗೆ ಪೇಟಿಎಂನಲ್ಲಿ ಮಾತ್ರ ಟಿಕೆಟ್ ಪಡೆಯಬಹುದಾಗಿತ್ತು.

ಹೊಸ ವ್ಯವಸ್ಥೆಯಿಂದಾಗಿ, ಪ್ರಯಾಣಿಕರು ತಮ್ಮ ಇಡೀ ಪ್ರಯಾಣವನ್ನು ಒಂದೇ ಆ್ಯಪ್‌ನಲ್ಲಿ ಯೋಜಿಸಿ, ಟಿಕೆಟ್ ಖರೀದಿಸಿ ಮತ್ತು ಡಿಜಿಟಲ್ ಪಾವತಿಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಈಸ್ ಮೈ ಟ್ರಿಪ್, ಹೈವೇ ಡಿಲೈಟ್, ಮೈಲ್ಸ್ & ಕಿಲೋಮೀಟರ್ಸ್ (ಟೆಲಿಗ್ರಾಂ ಮೂಲಕ), ನಮ್ಮ ಯಾತ್ರಿ, ವನ್ ಟಿಕೆಟ್, ರಾಪಿಡೋ, ರೆಡ್‌ಬಸ್, ಟಮ್ಮೊಕ್ ಮತ್ತು ಯಾತ್ರಿ ಸಿಟಿ ಟ್ರಾವೆಲ್ ಗೈಡ್ ಆ್ಯಪ್‌ಗಳನ್ನು ಬಳಸಿ ಮೆಟ್ರೋ ಟಿಕೆಟ್‌ಗಳನ್ನು ಸುಲಭವಾಗಿ ಕಾಯ್ದಿರಿಸಬಹುದು.

ಕೇಂದ್ರ ಸರ್ಕಾರದ ಯೋಜನೆ

2021ರಲ್ಲಿ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹದಿಂದ ಒಎನ್​ಡಿಸಿ ಜಾಲವನ್ನು ಭಾರತದ ಸಾರಿಗೆ ವಲಯಕ್ಕೆ ವಿಸ್ತರಿಸಿ ಡಿಜಿಟಲೀಕರಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು. ಆ ಯೋಜನೆ ಇದೀಗ ನಮ್ಮ ಮೆಟ್ರೊಗೂ ಲಭ್ಯವಾಗಿದೆ. ಹೀಗಾಗಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಉಂಟಾಗಲಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಅಹಮದಾಬಾದ್‌ನ 2023ರ ಅಧ್ಯಯನದ ಪ್ರಕಾರ, ಒಎನ್​ಡಿಸಿ ಪ್ರಯೋಜನ ಜಾರಿಗೆ ತಂದ ನಗರಗಳಲ್ಲಿ ಡಿಜಿಟಲ್ ಸಾರಿಗೆ ಸೇವೆಯ ದಕ್ಷತೆ ಶೇ. 25ರಷ್ಟು ಹೆಚ್ಚಾಗಿದೆ. ಅಂತೆಯೇ ನಮ್ಮ ಮೆಟ್ರೊದಲ್ಲಿ ಪೀಕ್ ಅವರ್‌ಗಳಲ್ಲಿ ಪ್ರಯಾಣಿಕರ ಕಾಯುವ ಸಮಯ ಕಡಿಮೆ ಆಗಲಿದೆ. .

ಈ ಹೊಸ ಸೌಲಭ್ಯದಿಂದಾಗಿ ಪ್ರಯಾಣಿಕರು ವಿವಿಧ ಮೊಬೈಲಿಟಿ ಅಪ್ಲಿಕೇಶನ್‌ಗಳ ಮೂಲಕ ತಮ್ಮ ಇಡೀ ಪ್ರಯಾಣವನ್ನು ಯೋಜಿಸಬಹುದು. ಹೀಗಾಗಿ, ವಪೇಟಿಎಂನಂತಹ ಖಾಸಗಿ ಅಪ್ಲಿಕೇಶನ್‌ಗಳ ಪ್ರಾಬಲ್ಯಕ್ಕೆ ಸವಾಲು ಒಡ್ಡಲಿದೆ.

ಬಿಎಂಆರ್‌ಸಿಎಲ್ ತನ್ನ 'ಗೋ ಗ್ರೀನ್' ನೀತಿಯಡಿ ಪರಿಸರ ಸ್ನೇಹಿ ಕ್ರಮಗಳನ್ನು ಮುಂದುವರಿಸುತ್ತಿದೆ. 2024ರ ಸುಸ್ಥಿರತಾ ವರದಿಯ ಪ್ರಕಾರ, ಮೆಟ್ರೋ ಕಾರ್ಯಾಚರಣೆಗೆ ಬೇಕಾದ ಶಕ್ತಿಯ ಶೇ. 20ರಷ್ಟನ್ನು ನವೀಕರಿಸಬಹುದಾದ ಮೂಲಗಳಿಂದ ಪೂರೈಸಲಾಗುತ್ತಿದೆ. ಈ ಹೊಸ ಡಿಜಿಟಲ್ ಸೇವೆಯು ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಲಭವಾದ ಪ್ರಯಾಣ ಅನುಭವ ನೀಡುವ ಗುರಿ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tags:    

Similar News