ಮೆಟ್ರೋದ ಹಳದಿ ಮಾರ್ಗ ವಿಳಂಬ: ಬಿಜೆಪಿ ಪ್ರತಿಭಟನೆ, ಆಗಸ್ಟ್ 15ಕ್ಕೆ ಗಡುವು ನೀಡಿದ ಬಿಎಂಆರ್‌ಸಿಎಲ್
x

ನಮ್ಮ ಮೆಟ್ರೋ ಹಳದಿ ಮಾರ್ಗ ವಿಳಂಬ ಖಂಡಿಸಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. 

ಮೆಟ್ರೋದ ಹಳದಿ ಮಾರ್ಗ ವಿಳಂಬ: ಬಿಜೆಪಿ ಪ್ರತಿಭಟನೆ, ಆಗಸ್ಟ್ 15ಕ್ಕೆ ಗಡುವು ನೀಡಿದ ಬಿಎಂಆರ್‌ಸಿಎಲ್

ಬಿಜೆಪಿ ನಾಯಕರು ಬೃಹತ್ ಮೆರವಣಿಗೆ ಮೂಲಕ ಲಾಲ್ ಬಾಗ್‌ನಿಂದ ಬಿಎಂಆರ್‌ಸಿಎಲ್‌ ಕಚೇರಿಗೆ ಸಾಗಲು ಯೋಜಿಸಿದ್ದರು, ಆದರೆ, ಪೊಲೀಸರ ಅನುಮತಿ ಸಿಗದ ಕಾರಣ ಲಾಲ್ ಬಾಗ್ ಹತ್ತಿರವೇ ಪ್ರತಿಭಟನೆಗಿಳಿದರು.


ನಮ್ಮ ಮೆಟ್ರೋದ ಹಳದಿ ಮಾರ್ಗವಿಳಂಬ ಖಂಡಿಸಿ ಶನಿವಾರ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಎಲೆಕ್ಟ್ರಾನಿಕ್ ಸಿಟಿಗೆ ಪ್ರಮುಖ ಸಂಪರ್ಕ ಕಲ್ಪಿಸುವ ಈ ಮಾರ್ಗವನ್ನು ಆದಷ್ಟು ಬೇಗನೆ ಆರಂಭಿಸುವಂತೆ ಒತ್ತಾಯಿಸಿ ಬಿಜೆಪಿ ನಾಯಕರು ಲಾಲ್ ಬಾಗ್ ಬಳಿ ಧರಣಿ ನಡೆಸಿದರು.

ಲಾಲ್ ಬಾಗ್‌ನಿಂದ ಬಿಎಂಆರ್‌ಸಿಎಲ್‌ (BMRCL) ಕಚೇರಿಯವರೆಗೆ ಮೆರವಣಿಗೆ ನಡೆಸಲು ಬಿಜೆಪಿ ನಾಯಕರು ಯೋಜಿಸಿದ್ದರು. ಆದರೆ, ಪೊಲೀಸರ ಅನುಮತಿ ಸಿಗದ ಕಾರಣ, ಅವರು ಲಾಲ್ ಬಾಗ್ ಸಮೀಪದಲ್ಲೇ ತಮ್ಮ ಪ್ರತಿಭಟನೆ ಮುಂದುವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಮೆಟ್ರೋ ಮತ್ತು ಬಸ್‌ಗಳು ಸಾರ್ವಜನಿಕ ಸಾರಿಗೆಯ ಎರಡು ಪ್ರಮುಖ ಆಧಾರಸ್ತಂಭಗಳಾಗಿವೆ, ಬಿಎಂಆರ್‌ಸಿಎಲ್‌ ಇತ್ತೀಚೆಗೆ ಮೆಟ್ರೋ ದರಗಳನ್ನು ಶೇ. 100ರಷ್ಟು ಹೆಚ್ಚಿಸಿದೆ ಎಂದರು.

ಒಂದು ಸಮಿತಿಯ ಅಂತರರಾಷ್ಟ್ರೀಯ ಪ್ರವಾಸದ ನಂತರ ವರದಿಯ ಆಧಾರದ ಮೇಲೆ ಮೆಟ್ರೋ ದರದಲ್ಲಿ ಶೇ. 130ರಷ್ಟು ಹೆಚ್ಚಳ ಜಾರಿಗೊಳಿಸಲಾಯಿತು. ಈ ದರ ಏರಿಕೆಯ ನಂತರ, ಮೆಟ್ರೋ ಪ್ರಯಾಣಿಕರ ಸಂಖ್ಯೆ ಪ್ರತಿದಿನ ಸುಮಾರು 1 ಲಕ್ಷದಷ್ಟು ಕಡಿಮೆಯಾಗುತ್ತಿದೆ" ಎಂದು ಸೂರ್ಯ ಮಾಹಿತಿ ನೀಡಿದರು.

ಪತ್ರಕರ್ತರು ಮತ್ತು ಸಾರ್ವಜನಿಕ ಕಾರ್ಯಕರ್ತರು ಈ ದರ ಏರಿಕೆ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ, ಮೂರು ತಿಂಗಳು ಕಳೆದರೂ ಯಾವುದೇ ಮಾಹಿತಿಯನ್ನು ಸಾರ್ವಜನಿಕಗೊಳಿಸಿಲ್ಲ ಎಂದು ಸೂರ್ಯ ಆರೋಪಿಸಿದರು. "ಅವರು ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ?" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆಗಸ್ಟ್​ 15ರ ಒಳಗೆ ಆರಂಭ

ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್, ಆಗಸ್ಟ್ 15ರೊಳಗೆ ಹಳದಿ ಮೆಟ್ರೋ ಮಾರ್ಗವನ್ನು ತೆರೆಯುವ ಭರವಸೆ ನೀಡಿದರು. "ಮೇಕ್ ಇನ್ ಇಂಡಿಯಾ ಷರತ್ತುಗಳ ಕಾರಣದಿಂದ ರೈಲು ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದೇ ಹಳದಿ ಮಾರ್ಗ ತೆರೆಯುವ ವಿಳಂಬಕ್ಕೆ ಪ್ರಮುಖ ಕಾರಣ. ನಮ್ಮಲ್ಲಿ ಪ್ರಸ್ತುತ ಕೇವಲ ಮೂರು ರೈಲುಗಳು ಲಭ್ಯವಿವೆ. ಮಾರ್ಗವನ್ನು ತೆರೆಯಲು ಸಿಆರ್‌ಎಂಎಸ್‌ (CRMS) ಅನುಮೋದನೆಯು ನಿರ್ಣಾಯಕವಾಗಿದೆ" ಎಂದು ಅವರು ಸ್ಪಷ್ಟಪಡಿಸಿದರು.

ಆಗಸ್ಟ್ 15 ರೊಳಗೆ ಹಳದಿ ಮಾರ್ಗವನ್ನು ತೆರೆಯುವ ವಿಶ್ವಾಸವಿದೆ.. "ಮೇಕ್ ಇನ್ ಇಂಡಿಯಾ ಷರತ್ತಿನಿಂದಾಗಿ ರೈಲು ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ಹಳದಿ ಮಾರ್ಗ ತೆರೆಯುವಲ್ಲಿ ವಿಳಂಬವಾಗಿದೆ. ನಮ್ಮಲ್ಲಿ ಕೇವಲ ಮೂರು ರೈಲುಗಳಿವೆ. ಮಾರ್ಗವನ್ನು ತೆರೆಯಲು ಸಿಆರ್‌ಎಂಎಸ್‌ ಅನುಮೋದನೆ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

Read More
Next Story