ಜಿಬಿಎ ಚುನಾವಣೆ: ಸಂಯೋಜಕರ ತಂಡ ರಚಿಸಿದ ಬಿಜೆಪಿ; ವಿಜಯೇಂದ್ರ; ಅಶೋಕ್‌ಗೆ ಜವಾಬ್ದಾರಿ

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸೇರಿದಂತೆ ಹಲವು ಪ್ರಮುಖ ನಾಯಕರು, ಕೇಂದ್ರ ಸಚಿವರು, ಸಂಸದರು ಮತ್ತು ಶಾಸಕರಿಗೆ ಈ ತಂಡದಲ್ಲಿ ಜವಾಬ್ದಾರಿ ನೀಡಲಾಗಿದ್ದು, ಬೆಂಗಳೂರಿನಲ್ಲಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ರಣತಂತ್ರ ರೂಪಿಸಿದೆ.

Update: 2025-10-24 05:18 GMT
Click the Play button to listen to article

ಶೀಘ್ರದಲ್ಲಿ ನಡೆಯಲಿರುವ ಗ್ರೇಟರ್​ ಬೆಂಗಳೂರು ಪ್ರಾಧಿಕಾರ  (ಹಿಂದಿನ ಬಿಬಿಎಂಪಿ) ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ಆರಂಭಿಸಿದೆ. ಚುನಾವಣಾ ಉಸ್ತುವಾರಿ ಮತ್ತು ಪಕ್ಷದ ಸಂಘಟನೆಗಾಗಿ ರಾಜ್ಯ ಮತ್ತು ವಿಭಾಗೀಯ ಮಟ್ಟದ ಸಂಯೋಜಕರ ಬೃಹತ್ ತಂಡವನ್ನು ರಚಿಸಿರುವುದಾಗಿ ಪ್ರಕಟಿಸಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸೇರಿದಂತೆ ಹಲವು ಪ್ರಮುಖ ನಾಯಕರು, ಕೇಂದ್ರ ಸಚಿವರು, ಸಂಸದರು ಮತ್ತು ಶಾಸಕರಿಗೆ ಈ ತಂಡದಲ್ಲಿ ಜವಾಬ್ದಾರಿ ನೀಡಲಾಗಿದ್ದು, ಬೆಂಗಳೂರಿನಲ್ಲಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ರಣತಂತ್ರ ರೂಪಿಸಿದೆ.

ರಾಜ್ಯಮಟ್ಟದ ಸಂಯೋಜಕರ ತಂಡ

ಬಿಬಿಎಂಪಿ ಚುನಾವಣೆಯ ಒಟ್ಟಾರೆ ಉಸ್ತುವಾರಿಗಾಗಿ ರಚಿಸಲಾದ ರಾಜ್ಯಮಟ್ಟದ ಪ್ರಮುಖರ ತಂಡದಲ್ಲಿ ಈ ಕೆಳಗಿನ ನಾಯಕರಿದ್ದಾರೆ:

* ಬಿ.ವೈ. ವಿಜಯೇಂದ್ರ

* ಆರ್. ಅಶೋಕ

* ಛಲವಾದಿ ನಾರಾಯಣಸ್ವಾಮಿ

* ಡಿ.ವಿ. ಸದಾನಂದಗೌಡ

* ಎಸ್. ಸುರೇಶ್‌ಕುಮಾರ್

* ಶೋಭಾ ಕರಂದ್ಲಾಜೆ

* ಪಿ.ಸಿ. ಮೋಹನ್

* ಡಾ.ಸಿ.ಎನ್. ಮಂಜುನಾಥ್

* ತೇಜಸ್ವಿ ಸೂರ್ಯ

* ಡಾ.ಕೆ. ಸುಧಾಕರ್

* ಎನ್.ಎಸ್. ನಂದೀಶ್‌ ರೆಡ್ಡಿ

ವಿಭಾಗವಾರು ಮತ್ತು ಜಿಲ್ಲಾವಾರು ಜವಾಬ್ದಾರಿ

ಪಾಲಿಕೆ ವ್ಯಾಪ್ತಿಯನ್ನು ಐದು ವಿಭಾಗಗಳಾಗಿ ಮತ್ತು ಮೂರು ಸಂಘಟನಾತ್ಮಕ ಜಿಲ್ಲೆಗಳಾಗಿ ವಿಂಗಡಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

ಸಂಘಟನಾತ್ಮಕ ಜಿಲ್ಲಾ ಪ್ರಮುಖರು

* ಬೆಂಗಳೂರು ದಕ್ಷಿಣ: ಸಿ.ಕೆ. ರಾಮಮೂರ್ತಿ

* ಬೆಂಗಳೂರು ಉತ್ತರ: ಎಸ್. ಹರೀಶ್

* ಬೆಂಗಳೂರು ಕೇಂದ್ರ: ಎ.ಆರ್. ಸಪ್ತಗಿರಿಗೌಡ

ಪಾಲಿಕೆ ವಿಭಾಗವಾರು ಪ್ರಮುಖರು:

* ಬೆಂಗಳೂರು ಪೂರ್ವ: ಎಂ.ಟಿ.ಬಿ. ನಾಗರಾಜ್, ಕೆ.ಎಸ್. ನವೀನ್

* ಬೆಂಗಳೂರು ಉತ್ತರ: ಮುನಿರತ್ನ, ಭಾರತಿ ಶೆಟ್ಟಿ

* ಬೆಂಗಳೂರು ದಕ್ಷಿಣ: ಬಿ.ಎ. ಬಸವರಾಜ್, ಎನ್. ರವಿಕುಮಾರ್

* ಬೆಂಗಳೂರು ಕೇಂದ್ರ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಡಿ.ಎಸ್. ಅರುಣ್

* ಬೆಂಗಳೂರು ಪಶ್ಚಿಮ: ಕೆ. ಗೋಪಾಲಯ್ಯ, ಎ. ನಾರಾಯಣಸ್ವಾಮಿ, ಅಶ್ವತ್ಥನಾರಾಯಣ

Tags:    

Similar News