'ಅಭಿನಯ ಸರಸ್ವತಿ ' ಬಿ. ಸರೋಜಾದೇವಿ ಇನ್ನಿಲ್ಲ

ಸರೋಜಾ ದೇವಿ ಅವರು 7 ಜನವರಿ 1938 ರಲ್ಲಿ ಜನಿಸಿದರು. ತಮ್ಮ 17 ನೇ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ನಂತರ ಅದ್ಭುತವಾಗಿ ನಟಿಸುತ್ತಾ ಸಿನಿ ಪ್ರೇಮಿಗಳ ಅಚ್ಚುಮೆಚ್ಚಿನ ನಟಿಯಾದರು.;

Update: 2025-07-14 05:02 GMT

ಬಹುಭಾಷಾ ಕಲಾವಿದೆ ಬಿ ಸರೋಜ ದೇವಿ ಅವರು ನಿಧನ ಹೊಂದಿದ್ದಾರೆ.

ಕನ್ನಡದ ಖ್ಯಾತ ಹಿರಿಯ ನಟಿ, 'ಅಭಿನಯ ಶಾರದೆ' ಬಿ. ಸರೋಜಾದೇವಿ ಅವರು ಸೋಮವಾರ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾದೇವಿ ಅವರು ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಬಿ. ಸರೋಜಾದೇವಿ ಕನ್ನಡ ಚಿತ್ರರಂಗದ ಪ್ರಮುಖ ನಟಿಯಾಗಿದ್ದು, ಆರೂವರೆ ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. 2019ರಲ್ಲಿ ತೆರೆಕಂಡ ಪುನೀತ್ ರಾಜ್‌ಕುಮಾರ್ ಅಭಿನಯದ 'ನಟಸಾರ್ವಭೌಮ' ಅವರ ಕೊನೆಯ ಚಿತ್ರವಾಗಿತ್ತು. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳ ಹಲವು ಸಿನಿಮಾಗಳಲ್ಲಿ ನಟಿಸಿ, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದರು.

ಸರೋಜಾ ದೇವಿ ಅವರು 7 ಜನವರಿ 1938 ರಲ್ಲಿ ಜನಿಸಿದರು. ತಮ್ಮ 17 ನೇ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ನಂತರ ಅದ್ಭುತವಾಗಿ ನಟಿಸುತ್ತಾ ಸಿನಿ ಪ್ರೇಮಿಗಳ ಅಚ್ಚುಮೆಚ್ಚಿನ ನಟಿಯಾದರು.

1955 ರಲ್ಲಿ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸರೋಜಾ ದೇವಿ ಅವರ ಅಭಿನಯದ ಮೊದಲ ಚಿತ್ರವೇ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು. 1955 ರಲ್ಲಿ ಸರೋಜ ದೇವಿ ಶ್ರೀ ರಾಮ ಪೂಜ ಎಂಬ ಚಿತ್ರದಲ್ಲಿ ಕಾಣಿಸಿದ್ದರು.

ಅವರು 1969 ರಲ್ಲಿ ಪದ್ಮಶ್ರೀ ಮತ್ತು 1992 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. 

Tags:    

Similar News