ಜಾನಪದ ಗಾಯಕಿಯ ಪುತ್ರ ಆತ್ಮಹತ್ಯೆ: ಡೆತ್‌ ನೋಟ್‌ನಲ್ಲಿವೆ ಮನಕಲಕುವ ಮಾತುಗಳು

ಘಟನೆ ನಡೆದಾಗ ಗಾಂಧಾರ್ ತಂದೆಯೊಂದಿಗೆ ಮನೆಯಲ್ಲಿದ್ದನು. ಆತನ ತಾಯಿ ಸವಿತಾ ಅವರು ಕಾರ್ಯಕ್ರಮದ ನಿಮಿತ್ತ ಆಸ್ಟ್ರೇಲಿಯಾಗೆ ತೆರಳಿದ್ದರು.;

Update: 2025-08-04 07:21 GMT

 ಸಾಂದರ್ಭಿಕ ಚಿತ್ರ 

ಜಾನಪದ ಗಾಯಕಿ ಸವಿತಾ ಅವರ ಪುತ್ರ, 7ನೇ ತರಗತಿಯ ವಿದ್ಯಾರ್ಥಿ ಗಾಂಧಾರ್ (14) ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪ್ರದೇಶದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್ ನೋಟ್‌ನಲ್ಲಿ ಆತ ಮನಕಲಕುವ ಮಾತುಗಳನ್ನು ಬರೆದಿದ್ದಾನೆ.

ಘಟನೆ ನಡೆದಾಗ ಗಾಂಧಾರ್ ತಂದೆಯೊಂದಿಗೆ ಮನೆಯಲ್ಲಿದ್ದನು. ಆತನ ತಾಯಿ ಸವಿತಾ ಅವರು ಕಾರ್ಯಕ್ರಮದ ನಿಮಿತ್ತ ಆಸ್ಟ್ರೇಲಿಯಾಗೆ ತೆರಳಿದ್ದರು. ತಂದೆ ಬೆಳಗ್ಗೆ ಮಗನ ಕೋಣೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಡೆತ್ ನೋಟ್‌ನಲ್ಲಿ ಗಾಂಧಾರ್ ಬರೆದಿದ್ದೇನು?

ಗಾಂಧಾರ್ ತನ್ನ ಪತ್ರದಲ್ಲಿ, "ನನ್ನನ್ನು ದಯವಿಟ್ಟು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಮ್ಮ ಮನೆ ಚೆನ್ನಾಗಿರಬೇಕೆಂದು ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನಿಂದ ನಿಮಗೆ ನೋವಾಗಿದೆ, ಅದಕ್ಕಾಗಿ ಕ್ಷಮಿಸಿ. 14 ವರ್ಷಗಳ ಬದುಕು ನನಗೆ ತೃಪ್ತಿ ತಂದಿದೆ. ನಾನು ಸ್ವರ್ಗದಲ್ಲಿ ಖುಷಿಯಾಗಿದ್ದೇನೆ. ನನ್ನ ಸ್ನೇಹಿತರನ್ನು ನಾನು ಪ್ರೀತಿಸುತ್ತೇನೆ ಎಂದು ಅವರಿಗೆ ತಿಳಿಸಿ" ಎಂದು ಬರೆದಿದ್ದಾನೆ.

 ತಾಯಿ ವಾಪಸ್ ಬರುವವರೆಗೆ ಮರಣೋತ್ತರ ಪರೀಕ್ಷೆ ನಡೆಸದಂತೆ ಕುಟುಂಬಸ್ಥರು ಪೊಲೀಸರಿಗೆ ಮನವಿ ಮಾಡಿದ್ದು, ಅದರಂತೆ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Tags:    

Similar News