Lalbagh Flower Show | ಫ್ಲವರ್‌ ಶೋಗೆ 4.75 ಲಕ್ಷ ಮಂದಿ ಭೇಟಿ, 2.26 ಕೋಟಿ ಆದಾಯ

100ಕ್ಕೂ ಹೆಚ್ಚು ಮಾರಾಟ ಮಳಿಗೆಗಳ ಬಾಡಿಗೆ, ಪ್ರಾಯೋಜಕರಿಂದ ಸಂಗ್ರಹವಾದ ಹಣ, ವಾಹನ ನಿಲುಗಡೆ ಶುಲ್ಕದಿಂದಲೂ ಹಣ ಸಂಗ್ರಹವಾಗಿದ್ದು, ಖರ್ಚು ಮಾಡಿದ್ದಕ್ಕಿಂತ ಹೆಚ್ಚು ಹಣ ಸಂಗ್ರಹವಾಗಿದೆ.;

Update: 2025-01-28 12:49 GMT
ಫಲಪುಷ್ಪ ಪ್ರದರ್ಶನ

ಗಣರಾಜ್ಯೋತ್ಸವದ ಪ್ರಯಕ್ತ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿದ್ದ 217ನೇ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ( ಜ.27) ತೆರೆಬಿದ್ದಿದ್ದು, ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು 4.75 ಲಕ್ಷ ಜನರು ಭೇಟಿ ನೀಡಿದ್ದಾರೆ. 2.26 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ.

ತೋಟಗಾರಿಕೆ ಇಲಾಖೆ ಈ ಹಿಂದೆ 10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಈ ಪ್ರದರ್ಶನಕ್ಕೆ ಹಾಜರಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಿದ್ದರೂ, ಈ ಬಾರಿ ಪ್ರದರ್ಶನಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ವೀಕ್ಷಕರು ಆಗಮಿಸಲಿಲ್ಲ. ಕೊನೆಯ ದಿನವಾದ ಸೋಮವಾರ 37,890 ಮಂದಿ ಆಗಮಿಸಿದ್ದು, 7.08 ಲಕ್ಷ ರೂ. ಸಂಗ್ರಹವಾಗಿದೆ. 

12 ದಿನಗಳಲ್ಲಿ ಪ್ರವೇಶ ಶುಲ್ಕ, ಸ್ಟಾಲ್ ಬಾಡಿಗೆ ಮತ್ತು ಪ್ರದರ್ಶನ ಶುಲ್ಕದ ಮೂಲಕ 2,26,52,630 ರೂ. ಆದಾಯವನ್ನು ಗಳಿಸಿದೆ. 217 ನೇ ಪ್ರದರ್ಶನವು ಮಹರ್ಷಿ ವಾಲ್ಮೀಕಿ ಜೀವನ ಆಧಾರಿತವಾಗಿದ್ದು, ಕೊನೆಯ ದಿನದಂದು 14,830 ವಯಸ್ಕರು ಮತ್ತು 23,060 ಮಕ್ಕಳು ಸೇರಿದಂತೆ 37,890 ಸಂದರ್ಶಕರು ಭೇಟಿ ನೀಡಿದ್ದರು. 

ಇದಲ್ಲದೆ, 100ಕ್ಕೂ ಹೆಚ್ಚು ಮಾರಾಟ ಮಳಿಗೆಗಳ ಬಾಡಿಗೆ, ಪ್ರಾಯೋಜಕರಿಂದ ಸಂಗ್ರಹವಾದ ಹಣ, ವಾಹನ ನಿಲುಗಡೆ ಶುಲ್ಕದಿಂದಲೂ ಹಣ ಸಂಗ್ರಹವಾಗಿದ್ದು, ಖರ್ಚು ಮಾಡಿದ್ದಕ್ಕಿಂತ ಹೆಚ್ಚು ಹಣ ಸಂಗ್ರಹವಾಗಿದೆ.

Tags:    

Similar News