ಬೆಂಗಳೂರಿನಲ್ಲಿ ಕೊರೊನಾ ಮಧ್ಯೆ ಡೆಂಗ್ಯೂ, ಚಿಕುನ್ಗುನ್ಯಾ ಜ್ವರ ತಂದ ಆತಂಕ
ಬಿಬಿಎಂಪಿ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗಿದೆ. 4509 ಡೆಂಗ್ಯೂ ಶಂಕಿತರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅವರಲ್ಲಿ 705 ಮಂದಿಯಲ್ಲಿ ಡೆಂಗ್ಯೂ ದೃಢಪಟ್ಟಿದೆ.;
ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಆತಂಕದ ನಡುವೆ ಡೆಂಗ್ಯೂ ಹಾಗೂ ಚಿಕುನ್ ಗುನ್ಯಾದ ಪ್ರಕರಣಗಳು ಉಲ್ಬಣವಾಗುತ್ತಿವೆ. ಬೆಂಗಳೂರು ಸೇರಿ ಹಲವೆಡೆ ಡೆಂಗ್ಯೂ ಪ್ರಕರಣಗಳು ನೂರರ ಗಡಿ ದಾಟಿದ್ದು, ಆರೋಗ್ಯ ಇಲಾಖೆಗೆ ತಲೆ ನೋವಾಗಿದೆ.
ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ 25 ಸಾವಿರಕ್ಕೂ ಅಧಿಕ ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸಿದ್ದು, 1 ಸಾವಿರಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ಜ್ವರ ಹಾಗೂ 366 ಜನರಲ್ಲಿ ಚಿಕನ್ ಗುನ್ಯಾ ದೃಢಪಟ್ಟಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗಿವೆ. 4509 ಡೆಂಗ್ಯೂ ಶಂಕಿತರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅವರಲ್ಲಿ 705 ಮಂದಿಯಲ್ಲಿ ಡೆಂಗ್ಯೂ ದೃಢಪಟ್ಟಿದೆ.
ಕಳೆದ ವರ್ಷ ಡೆಂಗ್ಯೂ ಪ್ರಕರಣಗಳು 32 ಸಾವಿರದ ಗಡಿ ದಾಟಿದ್ದವು. ಈ ವರ್ಷ ಮೇ ತಿಂಗಳಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಡೆಂಗ್ಯೂ ಹಾಗೂ ಚಿಕನ್ ಗೂನ್ಯಾ ಪ್ರಕರಣಗಳು ಹೆಚ್ಚಾಗಿದೆ.
ಚಿಕುನ್ ಗುನ್ಯಾದ ಲಕ್ಷಣಗಳು
ಈಡಿಸ್ ಸೊಳ್ಳೆಗಳಿಂದ ಹರಡುವ ಚಿಕುನ್ ಗುನ್ಯಾದ ಲಕ್ಷಣಗಳೆಂದರೆ ದೇಹದಲ್ಲಿ ಅತಿಯಾದ ನೋವು, ಕೀಲು ನೋವು ಮತ್ತು ದೇಹದ ಹಲವಾರು ಭಾಗಗಳಲ್ಲಿ ದದ್ದುಗಳು ಕಾಣಿಸುತ್ತವೆ.
ಪಾದ ಹಾಗೂ ಕೈಗಳಲ್ಲಿ ಊತವೂ ಕಂಡುಬಂದು, ಕಣ್ಣುಗಳು ಕೆಂಪಾಗುವುದು ಚಿಕುನ್ ಗುನ್ಯಾದ ಲಕ್ಷಣಗಳು ಕಂಡು ಬರುತ್ತವೆ.
ಡೆಂಗ್ಯೂ ಲಕ್ಷಣಗಳೇನು?
ಡೆಂಗ್ಯೂ ಜ್ವರ ಬಂದಾಗ ಮೈ ಬಿಸಿ ಹೆಚ್ಚಾಗುವುದು, ತೀವ್ರ ತಲೆನೋವು, ಕೀಲು ಮತ್ತು ಸ್ನಾಯು ನೋವು, ದದ್ದು ಮತ್ತು ಸೌಮ್ಯ ರಕ್ತಸ್ರಾವ ಕಾಣಿಸಿಕೊಳ್ಳಲಿದೆ. ಕೆಲ ಸಂದರ್ಭಗಳಲ್ಲಿ ಇದು ಡೆಂಗ್ಯೂ ಹೆಮರಾಜಿಕ್ ಜ್ವರ ಎಂಬ ತೀವ್ರ ರೂಪಕ್ಕೆ ತಿರುಗಿ ಪ್ರಾಣಕ್ಕೂ ಎರವಾಗಲಿದೆ.
ನಿಯಂತ್ರಿಸುವುದು ಹೇಗೆ ?
ಸೊಳ್ಳೆ ಕಡಿತದಿಂದ ಪಾರಾಗಲು ಸಡಿಲ ಬಟ್ಟೆಗಳನ್ನು ಧರಿಸಿ, ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.
ನೀಮ್ ಆಯಿಲ್, ಲವಂಗ ಎಣ್ಣೆಯಂತಹ ತೈಲ ಬಳಸಬೇಕು. ಮನೆಯ ಸುತ್ತಮುತ್ತಲು ಸ್ವಚ್ಛತೆ ಕಾಪಾಡಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು.