ದಕ್ಷಿಣ ಕೊರಿಯಾ, ಯುಎಸ್ ಮತ್ತು ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಅಗ್ನಿ ಪರೀಕ್ಷೆ

ಪ್ರಜಾಪ್ರಭುತ್ವವು ದುರ್ಬಲವಾಗಿದ್ದರೂ, ಸರಿಪಡಿಸಲಾಗದಷ್ಟು ಕೆಟ್ಟಿಲ್ಲ ಎಂದು ಈ ದೇಶಗಳ ಬೆಳವಣಿಗೆಗಳೇ ಹೇಳುತ್ತವೆ. ಸಾಂವಿಧಾನಿಕ ನೀತಿ ನಿಯಮಗಳು ಅದಕ್ಕೆಲ್ಲ ಅವಕಾಶ ಕೊಡುವುದಿಲ್ಲ.

Update: 2024-12-08 05:46 GMT

ವೈಯಕ್ತಿಕ ಮತ್ತು ರಾಜಕೀಯ ಸ್ವಾತಂತ್ರ್ಯಗಳನ್ನು ನೀಡುವ ಗಟ್ಟಿ ವ್ಯವಸ್ಥೆ ಎಂದೇ ಗ್ರಹಿಸಲಾದ ಪ್ರಜಾಪ್ರಭುತ್ವವನ್ನು ಜಾಗತಿಕವಾಗಿ ಅಗ್ನಿ ಪರೀಕ್ಷೆಗೆ ಒಳಪಡುತ್ತಿವೆ. ದಕ್ಷಿಣ ಕೊರಿಯಾ, ಯುನೈಟೆಡ್ ಸ್ಟೇಟ್ಸ್ ಆಫ್​ ಅಮೆರಿಕ ಮತ್ತು ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಸಂವಿಧಾನದ ಖಾತರಿಗಳನ್ನು ಹೊರತುಪಡಿಸಿಯೂ ಈ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗಳ ದೌರ್ಬಲ್ಯಗಳು ಜಗಜ್ಜಾಹೀರಾಗಿದೆ. .


Full View

ದಕ್ಷಿಣ ಕೊರಿಯಾದಲ್ಲಿ ಮಿಲಿಟರಿ ಕಾನೂನಿನ ಅಡಚಣೆ

1987ರಿಂದ ಪ್ರಜಾಪ್ರಭುತ್ವದ ಗಟ್ಟಿ ನೆಲೆಯಾಗಿದ್ದ ದಕ್ಷಿಣ ಕೊರಿಯಾದಲ್ಲೂ ಬಿರುಗಾಳಿ ಎದ್ದಿತು. ದಕ್ಷಿಣ ಕೊರಿಯಾ, ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅಧಿಕಾರಕ್ಕೆ ಅಂಟಿಕೊಳ್ಳಲು ಪ್ರಯತ್ನಿಸಿ ತುರ್ತು ಪರಿಸ್ಥಿತಿ ಹೇರಿದ್ದರು. ಅವರ ಪಕ್ಷವಾದ ಪೀಪಲ್ಸ್ ಪವರ್ ಪಾರ್ಟಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ತನ್ನ ಬಹುಮತ ಕಳೆದುಕೊಂಡಿದ್ದು, ಮುಂಬರುವ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಜನಪ್ರಿಯತೆ ಕುಸಿದಿದೆ. ಹೀಗಾಗಿ ಮಿಲಿಟರಿ ಕಾನೂನನ್ನು ಘೋಷಿಸಿ ಅದನ್ನು ಸಮರ್ಥಿಸಲು ''ಬಾಹ್ಯ ಬೆದರಿಕೆ" ಎಂಬ ನೆಪ ಹೇಳಿತು.

ಅಧ್ಯಕ್ಷರ ಕ್ರಮಕ್ಕೆ ಅಲ್ಲಿನ ಸಂವಿಧಾನದ ಮಾನ್ಯತೆ ಸಿಗಲಿಲ್ಲ. ಯಾಕೆಂದರೆ ಇಂಥದ್ದೊಂದು ಮಿಲಿಟರಿ ಆಡಳಿತ ಹೇರಬೇಕಾದರೆ ರಾಷ್ಟ್ರೀಯ ಸಂಸತ್​​ನ ಒಪ್ಪಿಗೆ ಬೇಕು. ಹೀಗಾಗಿ ಅಧ್ಯಕ್ಷರ ಕ್ರಮ ಪ್ರತಿರೋಧಕ್ಕೆ ಕಾರಣವಾಯಿತು. ಯೂನ್ ಅವರ ಯೋಜನೆಯನ್ನು ಬಹುಪಾಲು ಶಾಸಕರು ತಿರಸ್ಕರಿಸಿದರು, ಕೆಲವೇ ಗಂಟೆಗಳ ನಂತರ ಮಿಲಿಟರಿ ಕಾನೂನನ್ನು ತೆಗೆದುಹಾಕಲಾಯಿತು. ಇಲ್ಲಿ ಗೆದ್ದಿರುವುದು ಪ್ರಜಾಪ್ರಭುತ್ವ. ಆದಾಗ್ಯೂ ಈ ಘಟನೆ ರಾಜಕಾರಣಿಗಳ ಸರ್ವಾಧಿಕಾರಿ ಧೋರಣೆಯ ಮತ್ತೊಂದು ಉದಾಹರಣೆ ಎನಿಸಿತು.

ಸಾಂವಿಧಾನಿಕ ಬಿಕ್ಕಟ್ಟು ಎದುರಿಸಿದ್ದ ಅಮೆರಿಕ

ಪ್ರಜಾಪ್ರಭುತ್ವಕ್ಕೆ ಮೂಲ ಮಾದರಿ ಅಮೆರಿಕ. ಆದರೆ, 2021 ಜನವರಿ 6ರಂದು ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಕ್ಯಾಪಿಟಲ್ ಹಿಲ್ಸ್​ಗೆ ನುಗ್ಗಿ ದಾಂದಲೆ ಮಾಡಿದ್ದರು. ಅಲ್ಲಿನ ಆ ದೇಶದಲ್ಲೂ ಪ್ರಜಾಪ್ರಭುತ್ವ ಬಿಕ್ಕಟ್ಟಿಗೆ ಒಳಗಾಯಿತು. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧದ ಸೋಲನ್ನು ಒಪ್ಪಿಕೊಳ್ಳಲು ಇಷ್ಟಪಡದ ಟ್ರಂಪ್, ಚುನಾವಣಾ ಫಲಿತಾಂಶಗಳನ್ನು ನಿರ್ಬಂಧಿಸುವಂತೆ ಉಪಾಧ್ಯಕ್ಷ ಮೈಕ್ ಪೆನ್ಸ್ ಮೇಲೆ ಒತ್ತಡ ಹೇರಿದ್ದರು. ಆದಾಗ್ಯೂ, ಪೆನ್ಸ್ ಚುನಾವಣಾ ಪ್ರಕ್ರಿಯೆಯನ್ನು ಎತ್ತಿಹಿಡಿದಿದ್ದರು. ಶಾಂತಿಯುತ ಅಧಿಕಾರ ವರ್ಗಾವಣೆಗೆ ಅವಕಾಶ ಮಾಡಿಕೊಟ್ಟಿದ್ದರು.

ಕ್ಯಾಪಿಟಲ್ ಹಿಲ್ಸ್ ದಾಳಿ ತಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳ ಸದೃಢವಾಗಿದೆ ಎಂದು ನಂಬಿದ್ದ ಅಮೆರಿಕನ್ನರ ನಿರಾಸೆಗೆ ಕಾರಣವಾಯಿತು. ದೇಶದ ಆಡಳಿತ ವ್ಯವಸ್ಥೆಯಲ್ಲಿ ಮಾಸದ ಗಾಯಗಳನ್ನು ಉಂಟುಮಾಡಿತು. ಪರಿಣಾಮವಾಗಿ ಅಲ್ಲಿನ ಸಮಾಜದಲ್ಲಿ ಧ್ರುವೀಕರಣ ಸೃಷ್ಟಿಯಾಯಿತು. ವಿಪರ್ಯಾಸವೆಂದರೆ, ಟ್ರಂಪ್ ಅವರ ಇತ್ತೀಚಿನ ರಾಜಕೀಯ ಏಳ್ಗೆಯು ಪ್ರಜಾಪ್ರಭುತ್ವದ ಸಂಕೀರ್ಣತೆಗಳನ್ನೂ ಎತ್ತಿ ತೋರಿಸಿತು. ವಿಭಜಕ ಶಕ್ತಿಯನ್ನು ಪ್ರದರ್ಶಿಸಿದ ವ್ಯಕ್ತಿಯೇ ಪ್ರಜಾಪ್ರಭುತ್ವದ ಮೂಲಕ ಪುನರಾಗಮನ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಯಿತು.

ಬಾಂಗ್ಲಾದೇಶ: ಪ್ರಜಾಪ್ರಭುತ್ವದ ಪುನಃಸ್ಥಾಪನೆಗಾಗಿ ಹೋರಾಟ

ಬಾಂಗ್ಲಾದೇಶದಲ್ಲಿ, ಅವಾಮಿ ಲೀಗ್ ನಾಯಕಿ ಮತ್ತು ಶೇಖ್ ಮುಜಿಬುರ್ ರಹಮಾನ್ ಅವರ ಪುತ್ರಿ ಶೇಖ್ ಹಸೀನಾ ಅವರು ತಮ್ಮ ಅಧಿಕಾರಾವಧಿಯಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದರು. ಅವರ ನೀತಿಗಳು ಆರ್ಥಿಕ ಸ್ಥಿರತೆ ಮತ್ತು ಜಾತ್ಯತೀತತೆಯ ಮುಖವನ್ನು ಹೊಂದಿದ್ದರೂ ಅವರ ಸರ್ವಾಧಿಕಾರಿ ಪ್ರವೃತ್ತಿಗಳು ವ್ಯಾಪಕ ಅಸಮಾಧಾನಕ್ಕೆ ಕಾರಣವಾದವು. ಪ್ರಮುಖ ವಿರೋಧ ಪಕ್ಷಗಳು ಚುನಾವಣೆಗಳನ್ನು ಬಹಿಷ್ಕರಿಸಿದ್ದವು. ಇದು ಅವರ ನ್ಯಾಯಸಮ್ಮತತೆಯ ಬಗ್ಗೆ ಪ್ರಶ್ನೆಗಳು ಮೂಡುವಂತೆ ಮಾಡಿದವು.

ಆಗಸ್ಟ್ 2024ರಲ್ಲಿ ದಂಗೆ ಎದ್ದ ಬಳಿಕ ಹಸೀನಾ ಅವರನ್ನು ಪದಚ್ಯುತಗೊಳಿಸಲಾಯಿತು. ಜಮಾತ್​ನಂಥ ಧಾರ್ಮಿಕ ಮೂಲಭೂತವಾದಿ ಗುಂಪುಗಳು ಮತ್ತೆ ಬಲಗೊಂಡವು. ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ಅಧಿಕಾರ ಪಡೆಯಲು ಹೆಣಗಾಡುತ್ತಿದೆ. ಚುನಾವಣೆಗಳನ್ನು ನಿರೀಕ್ಷಿಸಲಾಗಿದ್ದರೂ, ನಿಜವಾದ ಪ್ರಜಾಪ್ರಭುತ್ವ ಬಾಂಗ್ಲಾದೇಶದ ಹಾದಿ ಅನಿಶ್ಚಿತ .

ಪ್ರಜಾಪ್ರಭುತ್ವದ ದೃಢತೆ

ಹಿನ್ನಡೆಗಳ ಹೊರತಾಗಿಯೂ ಪ್ರಜಾಪ್ರಭುತ್ವದಲ್ಲಿ ಆಶಾವಾದಕ್ಕೆ ಕಾರಣಗಳಿವೆ. ದಕ್ಷಿಣ ಕೊರಿಯಾದ ಸಾಂವಿಧಾನಿಕ ರಕ್ಷಣೆಗಳು ಮತ್ತು ಶಾಸನಾತ್ಮಕ ಪ್ರತಿರೋಧವು ಸರ್ವಾಧಿಕಾರಿ ತಿರುವು ತಡೆಯಿತು. ಅಮೆರಿಕದಲ್ಲಿ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಿಂತ ಸಾಂಸ್ಥಿಕ ಸಮಗ್ರತೆ ಮೇಲುಗೈ ಸಾಧಿಸಿತು. ಬಾಂಗ್ಲಾದೇಶದಲ್ಲಿ, ಮುಂಬರುವ ಚುನಾವಣೆಗಳು ಭರವಸೆ ನೀಡಿದೆ. , ಏಕೆಂದರೆ ಮೌನವಾಗಿರುವ ಪ್ರಜೆಗಳು ನಿಜವಾದ ಪ್ರಜಾಪ್ರಭುತ್ವ ಆಡಳಿತವನ್ನು ಬಯಸುತ್ತಾರೆ.

ಪ್ರಜಾಪ್ರಭುತ್ವವು ದುರ್ಬಲವಾಗಿದ್ದರೂ, ಸರಿಪಡಿಸಲಾಗದಷ್ಟು ಕೆಟ್ಟಿಲ್ಲ ಎಂದು ಈ ದೇಶಗಳ ಬೆಳವಣಿಗೆಗಳೇ ಹೇಳುತ್ತವೆ. ಸಾಂವಿಧಾನಿಕ ನೀತಿ ನಿಯಮಗಳು ಅದಕ್ಕೆಲ್ಲ ಅವಕಾಶ ಕೊಡುವುದಿಲ್ಲ. ವ್ಯಕ್ತಿಗಳ ವೈಯಕ್ತಿಕ ಹಿತಾಸಕ್ತಿಯ ಹೊರತಾಗಿಯೂ ಹೋರಾಟ ಮುಂದುವರಿಯುತ್ತವೆ.

Tags:    

Similar News