ರಷ್ಯಾ ವಿರುದ್ಧ ದೂರಗಾಮಿ ಕ್ಷಿಪಣಿ ದಾಳಿಗೆ ಬೈಡನ್ ಸಮ್ಮತಿಸಿರುವುದು ತಮ್ಮ ಸೋಲಿನ ಹತಾಶೆಯೇ?
ರಷ್ಯಾ ವಿರುದ್ಧ ದೂರಗಾಮಿ ಮಿಸೈಲ್‌ಗಳನ್ನು ಬಳಸಲು ಉಕ್ರೇನ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅನುಮತಿ ಕೊಟ್ಟಿರುವುದು, ಆ ಎರಡು ದೇಶಗಳ ಯುದ್ಧ ಕೊನೆಗಾಣಿಸುವ ಭಾವಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆ ಹಾಳು ಮಾಡುವ ಉದ್ದೇಶದ್ದು ಅಥವಾ ಪ್ರಕ್ರಿಯೆಯನ್ನು ಇನ್ನಷ್ಟು ಕ್ಲಿಷ್ಟಕರ ಮಾಡುವಂಥದ್ದಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಮೇಲೆ ದೂರಗಾಮಿ ಕ್ಷಿಪಣಿಗಳನ್ನು ಬಳಸುವುದಕ್ಕೆ ಒಪ್ಪಿಗೆ ಕೊಟ್ಟಿರುವುದು ತಮಗೆ ಎದುರಾಗಿರುವ ಸೋಲಿನ ಹತಾಶೆಯಿಂದ ಎಂದು ಹೇಳಬಹುದು. ಅದೇ ರೀತಿ ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯೋಜಿಸಿರುವ ಶಾಂತಿ ಸ್ಥಾಪನೆ ಯೋಜನೆಯನ್ನು ಕಷ್ಟಕರ ಮಾಡುವ ಪ್ರಯತ್ನದ ಭಾಗ.
ಪಾಶ್ಚಿಮಾತ್ಯ ಮಿಲಿಟರಿ ಒಕ್ಕೂಟವಾಗಿರುವ ನ್ಯಾಟೊಗೆ ಸೇರುವುದಕ್ಕೆ ಉಕ್ರೇನ್ ಮಾಡಿರುವ ಪ್ರಚೋದನಕಾರಿ ನಡೆಗಳು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ವೈಯಕ್ತಿಕ ಯೋಜನೆಯಂತೆಯೂ ಈಗ ತೋರುತ್ತದೆ. ಜಾಗತಿಕವಾಗಿ ದೊಡ್ಡ ಶಕ್ತಿಯಾಗಿ ಬೆಳೆಯಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯೋಜನೆ ಹಾಕಿದ್ದರು ಎಂಬ ಅಂದಾಜು ಮತ್ತು ಅದನ್ನು ವಿಫಲಗೊಳಿಸಲು ರಷ್ಯಾದ ಗಡಿಯ ತನಕ ನ್ಯಾಟೊ ಪಡೆಯನ್ನು ಕಳುಹಿಸುವುದು ಕೂಡ ಬೈಡೆನ್ ಯೋಜನೆಯಾಗಿತ್ತು.
ಬೈಡನ್ ಅವರ ಪ್ರಚೋದನೆಗೆ ಪಶ್ಚಿಮ ಯುರೋಪಿನ ಯುಎಸ್ ಮಿತ್ರರಾಷ್ಟ್ರಗಳು ಒಕ್ಕೊರಲಿನಿಂದ ಧನಿಗೂಡಿಸಿದ್ದವು. ಹಾಸ್ಯನಟನಾಗಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಪಾತ್ರಧಾರಿಯಾದರು. ಇದು 1980ರ ದಶಕದ ಉತ್ತರಾರ್ಧ ಮತ್ತು 1990 ರ ದಶಕದ ಆರಂಭದಲ್ಲಿ, ಸೋವಿಯತ್ ಒಕ್ಕೂಟದ ಕುಸಿತವನ್ನು ಅಮೆರಿಕ ಪ್ರಚೋದಿಸಿದಂತಿದೆ. ಪಾಶ್ಚಿಮಾತ್ಯ ದೇಶಗಳೆಲ್ಲವೂ ರಷ್ಯಾವನ್ನು ಬಲಿ ತೆಗೆಯಲು ʼಕೈಕೊಡಲಿʼ ಜೆಲೆನ್‌ಸ್ಕಿಯನ್ನು ಬಳಸಿಕೊಂಡರು.
ಎರಡನೇ ಸೋಲು ಪುಟಿನ್‌ಗೆ ಇಷ್ಟವಿರಲಿಲ್ಲ
ಫೆಬ್ರವರಿ 24, 2022ರಂದು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಪುಟಿನ್ ಅವರ ಪ್ರತಿಕ್ರಿಯೆ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ಪುಟಿನ್ ಅವರದ್ದು ʼಕೊಠಡಿಯಲ್ಲಿ ಕೂಡಿ ಹಾಕಿ ಹಿಂಸಿಸಿದ ಬೆಕ್ಕಿನʼ ಪ್ರತಿಕ್ರಿಯೆಯಂತಿತ್ತು ಕೆಜಿಬಿ ಏಜೆಂಟ್ ಆಗಿದ್ದ ಪುಟಿನ್. ಸೋವಿಯತ್ ಒಕ್ಕೂಟದ ಪತನವನ್ನು ಕಣ್ಣಾರೆ ಕಂಡವರು. ಮುಗ್ಧ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೆವ್ ಪಶ್ಚಿಮದ ಶಕ್ತಿಗಳನ್ನು ನಂಬಿದ್ದರು. ಹೀಗಾಗಿ ಸೂಪರ್ ಪವರ್ ಆಗಿದ್ದ ತಮ್ಮ ದೇಶವನ್ನು ನಾಶಪಡಿಸುವ ಪ್ರಕ್ರಿಯೆಗೆ ಪರೋಕ್ಷವಾಗಿ ನೆರವು ನೀಡಿದಂತಾಯಿತು ಹಾಗೂ ಅಧಿಕಾರವೇ ತ್ಯಜಿಸಬೇಕಾಯಿತು.
ಪುಟಿನ್‌ಗೆ ಇತಿಹಾಸದ ಯಶಸ್ಸಿನ ಅನುಭವ ಇತ್ತು. 2008ರಲ್ಲಿ ಪಾಶ್ಚಿಮಾತ್ಯ ಶಕ್ತಿಗಳು ಜಾರ್ಜಿಯಾವನ್ನು ರಷ್ಯಾ ವಿರುದ್ಧ ಎತ್ತಿಕಟ್ಟಿದ್ದವು. ಕ್ಷಣವೂ ಕಾಯದ ಪುಟಿನ್ ಜಾರ್ಜಿಯಾದ ಮೇಲೆ ದಾಳಿ ಮಾಡಿದರು. ಕೆಲವೇ ದಿನಗಳಲ್ಲಿ ಜಾರ್ಜಿಯಾ ಶಕ್ತಿಗುಂದಿ ತಟಸ್ಥಗೊಂಡಿತು. ಉಕ್ರೇನ್ ಮೇಲಿನ ಆಕ್ರಮಣವನ್ನು ಪುಟಿನ್ ಅದೇ ರೀತಿ ಅಂದಾಜಿಸಿದರು. ಕೆಲವೇ ದಿನಗಳಲ್ಲಿ ಬದುಕು ಸಹಜ ಸ್ಥಿತಿಗೆ ಬರಲಿದೆ ಅಂದುಕೊಂಡಿದ್ದರು .
ಪಾಶ್ಚಿಮಾತ್ಯ ಪ್ರಚೋದಿತ ಯುದ್ಧ ಭುಗಿಲೆದ್ದಿದೆ
ಜಾರ್ಜಿಯಾದ ಪರಾಜಯದ ಬಳಿಕ ಬುದ್ಧಿ ಕಲಿತಿದ್ದ ಅಮೆರಿಕ ಉಕ್ರೇನ್‌ಗೆ ಭೇಷರತ್ ಬೆಂಬಲ ಕೊಟ್ಟಿತು. ಯುದ್ಧ ಕೊನೆಗೊಳಿಸಲು ಶಾಂತಿಗ ಮಾತುಕತೆಗೆ ಅವಕಾಶವಿತ್ತು. ಆರಂಭಿಕ ದಿನಗಳಲ್ಲಿ ಭರವಸೆದಾಯಕವಾಗಿದ್ದವು. ಜೆಲೆನ್‌ಸ್ಕಿ ಕೂಡ ಒಪ್ಪಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಆದೆರೆ, ಆಗಿನ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಪ್ರತಿನಿಧಿಸುವ ಪಶ್ಚಿಮದ ಶಕ್ತಿಯು ಉಕ್ರೇನ್‌ಗೆ ಆಗಮಿಸಿ ಹೋರಾಟ ಮುಂದುವರಿಸುವಂತೆ ಮನವೊಲಿಸಿತು ಎಂದು ವರದಿಯಾಗಿತ್ತು.
ಅಂತರರಾಷ್ಟ್ರೀಯ ವೈವಿಧ್ಯತೆ ಸೇರಿದಂತೆ ಅಂತಾರಾಷ್ಟ್ರೀಯ ರಾಜಕೀಯದ ಗಂಧಗಾಳಿ ಗೊತ್ತಿಲ್ಲದ ಜೆಲೆನ್‌ಸ್ಕಿ ಪಾಶ್ಚಿಮಾತ್ಯರ ಭರವಸೆಗಳಿಗೆ ಬಲಿಬಿದ್ದರು. ಆ ನಿರ್ಧಾರಕ್ಕೆ ಉಕ್ರೇನಿಯನ್ನರು ಭಾರಿ ಬೆಲೆ ತೆತ್ತಿದ್ದಾರೆ.
ಈ ಸಮರದ ಕುರಿತು ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಭೀಕರ ಅಂಕಿಅಂಶಗಳ ಪ್ರಕಾರ, 622 ಮಕ್ಕಳು ಸೇರಿದಂತೆ ಒಟ್ಟಾರೆ 11,973 ನಾಗರಿಕರು ಸಾವನ್ನಪ್ಪಿದ್ದಾರೆ. ಸುಮಾರು 26,000 ಜನರು ಗಾಯಗೊಂಡಿದ್ದಾರೆ. ರಷ್ಯಾ ಸತತವಾಗಿ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದೇ ಅದಕ್ಕೆ ಕಾರಣ. ಅದು ವಿನಾಶಕಾರಿಯಾಯಿತು. ಇತ್ತೀಚಿನ ದಿನಗಳಲ್ಲಿ, ಪುಟಿನ್ ಉಕ್ರೇನ್ ನಾದ್ಯಂತ ದಾಳಿಯ ತೀವ್ರತೆ ಹೆಚ್ಚಿಸಿದ್ದಾರೆ . ಅಕ್ಟೋಬರ್ 16ರಂದು ಸುಮಾರು 130 ಡ್ರೋನ್‌ಗಳು ರಾಜಧಾನಿ ಕಿಯೇವ್ ಮೇಲೆ ಅನಿಯಂತ್ರಿತ ದಾಳಿ ಮಾಡಿದ್ದವು.
ಜಾಗತಿಕ ಶಕ್ತಿ ಆಟದ ಬಲಿಪಶುಗಳು
ಯುದ್ಧ ಪ್ರಾರಂಭವಾಗಿ ಸುಮಾರು 1000 ದಿನಗಳ ನಂತರವೂ ರಷ್ಯಾ ಅಥವಾ ಉಕ್ರೇನ್ ಪರವಾಗಿ ಯಾವುದೇ ಯಶಸ್ಸು ದೊರಕಿಲ್ಲ. ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಕಷ್ಟಗಳನ್ನು ಅನುಭವಿಸಿದ್ದಾರೆ. ಜಾಗತಿಕ ಶಕ್ತಿ ಕೇಂದ್ರಗಳ ಆಟದಲ್ಲಿ ಎರಡೂ ದೇಶಗಳ ಉರಿಯುತ್ತಿವೆ.
ಯುಎಸ್ ಮತ್ತು ಅದರ ನ್ಯಾಟೋ ಮಿತ್ರರಾಷ್ಟ್ರಗಳು ಜೆಲೆನ್‌ಸ್ಕಿಗೆ ಚಂದ್ರನಂಥ ಭರವಸೆ ನೀಡಿದವು, ಆದರೆ ರಷ್ಯಾದ ವ್ಯಾಪಕ ಪ್ರತೀಕಾರದ ಭಯದಿಂದಾಗಿ ವಿಶ್ವ ಯುದ್ಧಕ್ಕೆ ಮುಂದಾಗಲಿಲ್ಲ. ಜೆಲೆನ್ಸ್ಕಿ ಒತ್ತಡ ಹೇರುತ್ತಲೇ ಇದ್ದರು. ಇದೀಗ ಜೋ ಬೈಡನ್ ರಷ್ಯಾದ ವಿರುದ್ಧ ದೂರಗಾಮಿ ಯುಎಸ್ ನಿರ್ಮಿತ ಕ್ಷಿಪಣಿಗಳನ್ನು ಬಳಸುವುದಕ್ಕೆ ಒಪ್ಪಿದ್ದಾರೆ. ಉಕ್ರೇನ್ ಅಧ್ಯಕ್ಷನ ಒತ್ತಡಕ್ಕೆ ಮಣಿದಿದ್ದಾರೆ.ʼ
ದೂರಗಾಮಿ ಕ್ಷಿಪಣಿಗಳ ಪೂರೈಕೆಯ ಹಿಂದೆ ರಾಜಕೀಯ
ದೂರಗಾಮಿ ಕ್ಷಿಪಣಿಗಳನ್ನು ಅನುಮತಿಸುವ ಬೈಡನ್ ಅವರ ತಕ್ಷಣದ ನಿರ್ಧಾರವನ್ನು ಟ್ರಂಪ್ ಯುದ್ಧವನ್ನು ಕೊನೆಗೊಳಿಸುವ ಯಾವುದೇ ಸಾಧ್ಯತೆಯನ್ನು ಹಾಳುಮಾಡುವ ಕ್ರಮವೆಂದು ವ್ಯಾಖ್ಯಾನಿಸಬಹುದು. ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟ್‌ಗಳು ಸೋತಿರುವುದರಿಂದ, ಬೈಡನ್ ತಮ್ಮ ಅಧಿಕಾರದ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ. ಈ ನಡುವೆ ಉಕ್ರೇನ್ ಬಗ್ಗೆ ಇಂಥ ಹೊಸ ನಡೆಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಬೈಡನ್ ಊಹಿಸಲಾಗದದ್ದನ್ನು ಮಾಡಿದ್ದಾರೆ.
ಅಮೆರಿಕ ಚುನಾವಣಾ ಪ್ರಚಾರವನ್ನು ಹಿಂತಿರುಗಿ ನೋಡಿದಾಗ, ಉಕ್ರೇನ್ ಸಂಘರ್ಷದಲ್ಲಿ ಆ ದೇಶದ ಪಾಲ್ಗೊಳ್ಳುವಿಕೆ ಮತದಾರರು ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟ. ಈ ಯುದ್ಧಕ್ಕಾಗಿ ಅಮೆರಿಕ 175 ಬಿಲಿಯನ್ ಡಾಲರ್ ಖರ್ಚು ಮಾಡುತ್ತಿದ್ದುದು ಮತ್ತು ಅದರಿಂದ ಅವರಿಗೆ ಏನು ಲಾಭ ಎಂಬ ವಾದವು ಮತದಾರರನ್ನು ಟ್ರಂಪ್ ಕಡೆಗೆ ವಾಲುವಂತೆ ಮಾಡಿತು.
ಟ್ರಂಪ್ ಅವರು ಶಾಂತಿ ಒಪ್ಪಂದವನ್ನು ರೂಪಿಸುವ ಭರವಸೆ ಜತೆಗೆ ಒಂದೇ ದಿನದಲ್ಲಿ ಮಾಡುವುದಾಗಿ ಹೇಳಿದ್ದರು. ಹೇಗೆ ಸಾಧಿಸಬಹುದು ಎಂದು ಬಹಿರಂಗ ಮಾಡಿಲ್ಲವಾದರೂ ಟ್ರಂಪ್ ಅವರ ಸಂಬಂಧವು ಅವರ ವಿಶ್ವಾಸಕ್ಕೆ ಕಾರಣ ಎಂದು ಊಹಿಸಲಾಗಿದೆ. ಉಕ್ರೇನ್‌ಗೆ ನೆರವು ನಿಲ್ಲಿಸಿದರೆ ಯುದ್ಧ ಮುಗಿದಂತೆಯೇ.
ಟ್ರಂಪ್ 2.0 ಮತ್ತು ಬದಲಾವಣೆ
ಟ್ರಂಪ್ ಚುನಾವಣೆಯಲ್ಲಿ ಗೆದ್ದಾಗ ಬೈಡನ್ ಆಡಳಿತವು ಭಯಭೀತವಾಗಿತ್ತು. ಜೆಲೆನ್‌ಸ್ಕಿಗೆ ನೀಡಿರುವ ಬೆಂಬಲ ಸಂಪೂರ್ಣವಾಗಿ ಕೊನೆಗೊಳ್ಳುವ ಜತೆಗೆ ಯಥಾ ಸ್ಥಿತಿ ಕಾಪಾಡುವಂತೆ ಟ್ರಂಪ್ ಹೇಳಬಹುದು. ಉಕ್ರೇನ್ ತನ್ನ ಪೂರ್ವದಲ್ಲಿ ವಶಪಡಿಸಿಕೊಂಡ ಪ್ರದೇಶವನ್ನು ಪುಟಿನ್‌ಗೆ ನೀಡುವಂತೆ ಟ್ರಂಪ್ ಹೇಳುವ ಸಾಧ್ಯತೆಯೂ ಇದೆ.
ಅಮೆರಿಕದ ಯುರೋಪಿಯನ್ ಮಿತ್ರರಾಷ್ಟ್ರಗಳಿಗೆ ಬೈಡನ್ ಜಗೆ ಆಡಿದಂತೆ ಟ್ರಂಪ್ ಜತೆ ವ್ಯವಹರಿಸಲು ಸಾಧ್ಯವಿಲ್ಲ. ಪಶ್ಚಿಮ ಯುರೋಪ್ ಯುಎಸ್‌ನ ಯಾವುದೇ ಅಂತರರಾಷ್ಟ್ರೀಯ ಸಾಹಸಗಳಿಗೆ ಖರ್ಚು ಮಾಡುವುದಿಲ್ಲ. ಯುಎಸ್ ನ ವೆಚ್ಚಕ್ಕೆ ಹೋಲಿಸಿದರೆ ಅವರು ಸಾಮೂಹಿಕವಾಗಿ ವಿನಿಯೋಗ ಕನಿಷ್ಠ. ಯುರೋಪ್‌ನ ಅಮೆರಿಕದ ಮಿತ್ರರಾಷ್ಟ್ರಗಳು ಉಕ್ರೇನ್‌ಗಾಗಿ 175 ಡಾಲರ್ ಬಿಲಿಯನ್ ಖರ್ಚು ಮಾಡಿವೆ. ಯುರೋಪಿನ ಜಿಪುಣತನದಿಂದ ಹತಾಶರಾದ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ನ್ಯಾಟೋಗೆ ಧನಸಹಾಯ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದರು.
ಏಳು ದಶಕಗಳ ಹಿಂದೆ ಎರಡನೇ ಮಹಾಯುದ್ಧದ ಅಂತ್ಯದ ನಂತರ, ನ್ಯಾಟೋ ಮಿತ್ರರಾಷ್ಟ್ರಗಳು ಯುಎಸ್ ಅನ್ನು ಧಿಕ್ಕರಿಸಿದ್ದೇ ವಿರಳ. 1956 ರಲ್ಲಿ ಸೂಯೆಜ್ ಕಾಲುವೆ ವಿಷಯದಲ್ಲಿ ಅಂತಹ ಒಂದು ಧಿಕ್ಕಾರವು ಯುನೈಟೆಡ್ ಕಿಂಗ್‌ಡಮ್ ಮತ್ತು ಫ್ರಾನ್ಸ್‌ನ ರಕ್ತಸಿಕ್ತ ಅಧ್ಯಾಯಕ್ಕೆ ಕಾರಣವಾಯಿತು. 2003ರಲ್ಲಿ ಇರಾಕ್ ಮೇಲಿನ ಆಕ್ರಮಣಕ್ಕೆ ಫ್ರಾನ್ಸ್ ನ ವಿರೋಧ ಆ ದೇಶಕ್ಕೆ "ದ್ರೋಹಿಗಳ" ಪಟ್ಟ ಸಿಗುವಂತೆ ಮಾಡಿತು.
ವ್ಯಾಪಾರ ವಿಷಯದಲ್ಲಿ, ಪಶ್ಚಿಮ ಯುರೋಪ್ ಮತ್ತು ಯುಎಸ್ ನಡುವೆ ಕೆಲವು ವ್ಯತ್ಯಾಸಗಳಿವೆ. ಉಳಿದೆಲ್ಲವೂ ಏಕ ರೂಪದ ನಿರ್ಧಾರಗಳು.
ಮಿತ್ರರಾಷ್ಟ್ರಗಳು ಏಕೆ ಸುಲಭ ತುತ್ತು
2018 ರಲ್ಲಿ ಹಿಂದಿನ ಬರಾಕ್ ಒಬಾಮಾ ಆಡಳಿತದ ಅಡಿಯಲ್ಲಿ ಸಹಿ ಹಾಕಲಾದ ಇರಾನ್ ಪರಮಾಣು ಒಪ್ಪಂದದಿಂದ ನಂತರದ ಅಧ್ಯಕ್ಷ ಟ್ರಂಪ್ ರಾತ್ರೋರಾತ್ರಿ ಹೊರನಡೆದಿದ್ದರು. ಪಶ್ಚಿಮ ಯುರೋಪ್ ಮತ್ತು ವಿಶ್ವಸಂಸ್ಥೆ ಕೂಡ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಯುಎಸ್ ಮಿತ್ರರಾಷ್ಟ್ರಗಳು ಟ್ರಂಪ್ ನಡೆಗೆ ಟೀಕೆಯ ಹೊರತೂ ಇನ್ನೇನೂ ಮಾಡಲಿಲ್ಲ.
ಇರಾನ್ ಆಘಾತಕ್ಕೊಳಗಾಯಿತು ಮತ್ತು ಒಪ್ಪಂದವನ್ನು ಹೇಗಾದರೂ ಉಳಿಸುವಂತೆ ಪಶ್ಚಿಮ ಯುರೋಪ್ ಅನ್ನು ವಿನಂತಿಸಿತು. ಆದರೆ ಏನೂ ಆಗಲಿಲ್ಲ. ಯುಎಸ್ ಮಿತ್ರರಾಷ್ಟ್ರಗಳು ಅನೇಕ ವರ್ಷಗಳ ಹಿಂದೆ ವಾಷಿಂಗ್ಟನ್‌ಗೆ ನಡು ಬಾಗಿಬಿಟ್ಟಿವೆ. ಇರಾನ್ ಒಪ್ಪಂದಕ್ಕೆ ಮರುಜೀವ ನೀಡಲು ಬೈಡೆನ್ ಯತ್ನಿಸಿದರೂ ಜೀವ ಕೊಡಲು ಆಗಲಿಲ್ಲ.
ಗಾಝಾ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಪ್ರಕರಣವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ., ಪ್ರಬಲ ಇಸ್ರೇಲ್ ಪರ ಲಾಬಿಯ ಬೆಂಬಲದೊಂದಿಗೆ ಅಮೆರಿಕ ಸರ್ಕಾರವು ಹೃದಯ ವಿದ್ರಾವಕ ಬಾಂಬ್ ದಾಳಿ ಮತ್ತು ಗಾಝಾದ ನಾಶವನ್ನು ಬೆಂಬಲಿಸಿದೆ. ಪಾಶ್ಚಿಮಾತ್ಯ ರಾಷ್ಟ್ರವು ಪ್ರತಿಭಟನೆ ಕೂಡ ವ್ಯಕ್ತಪಡಿಸಲಿಲ್ಲ.ಎಂದಿನಂತೆ ಯುಎಸ್ ಹಿಂದೆ ನಿಂತರು. ಪುಟಿನ್ ಸಂಯಮವನ್ನು ಪಾಲಿಸಬೇಕು, ಟ್ರಂಪ್ ಅವರನ್ನು ಗಂಭೀರವಾಗಿ ಪರಿಗಣಿಸಬೇಕು
ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದರೆ, ಈ ಹಂತದಲ್ಲಿ ಬೈಡನ್ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿರುವ ಉತ್ತಮ ಅವಕಾಶವಿತ್ತು. ಕಮಲಾ ಅಧಿಕಾರ ವಹಿಸಿಕೊಂಡ ನಂತರ ಮಿತ್ರ ರಾಷ್ಟ್ರಗಳು ಜತೆಗಿರುತ್ತಿದ್ದವು .
ಟ್ರಂಪ್ ಕನಿಷ್ಠ ಉಕ್ರೇನ್ ಯುದ್ಧದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಕನಿಷ್ಠ ಅದನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಾರೆ. ಸಹಜವಾಗಿ ಟ್ರಂಪ್ ಅನಿರೀಕ್ಷಿತ. ಆದರೆ, ಕಳೆದುಹೋದ ಭರವಸೆಗಳ ಜಗತ್ತಿನಲ್ಲಿ, ಶಾಂತಿ ಭಂಗಗೊಳಿಸುವ ಯಾವುದೇ ಭರವಸೆಯನ್ನು ಸ್ವಾಗತಿಸಬೇಕು.
ಪುಟಿನ್ ಟ್ರಂಪ್ ಅವರನ್ನು ಗಂಭೀರವಾಗಿ ಪರಿಗಣಿಸಬೇಕು. ಬೈಡನ್ ಮತ್ತು ಜೆಲೆನ್‌ಸ್ಕಿ ನಿಜವಾಗಿಯೂ ರಷ್ಯಾದ ಕಡೆಗೆ ದೂರಗಾಮಿ ಕ್ಷಿಪಣಿಗಳನ್ನು ಹಾರಿಸಿದರೆ ಅವರ ಯಾವುದೇ ಪ್ರಚೋದನೆಗೆ ಪ್ರತಿಕ್ರಿಯಿಸದಿರುವ ಸಾಧ್ಯತೆಗಳಿವೆ . ಪುಟಿನ್ ಏನು ಮಾಡುತ್ತಾರೆಂದು ತಿಳಿಯುವುದು ಅಸಾಧ್ಯ. ಅವರು ಇನ್ನೂ ಪ್ರತಿಕ್ರಿಯಿಸಿಲ್ಲ.