ಯೌವನದಲ್ಲಿ ಬೆಳ್ಳಗಾಗಲು ಅನೇಕ ಕೆಟ್ಟ ಪ್ರಯತ್ನ ಮಾಡಿದ್ದೆ: ನಟ ಜಗ್ಗೇಶ್‌

ʻʻನನ್ನನ್ನು ಕಪ್ಪು ಎಂದು ಅಣಕ ಮಾಡುತ್ತಿದ್ದರು ಬಾಲ್ಯದಲ್ಲಿ ಎಲ್ಲರು..!! ಆಗ ನನಗೆ ಬಹಳ ಸಿಟ್ಟು ಬರುತ್ತಿತ್ತು. ನಾನು ಯೌವನದಲ್ಲಿ ಬೆಳ್ಳಗಾಗಲು ಅನೇಕ ಕೆಟ್ಟ ಪ್ರಯತ್ನ ಮಾಡಿದ್ದುಂಟು!;

Update: 2024-06-01 14:20 GMT
ನಟ ಜಗ್ಗೇಶ್‌ ಕಪ್ಪು ಬಣ್ಣದ ಬಗ್ಗೆ ಮಾತನಾಡಿದ್ದಾರೆ.

ನವರಸ ನಾಯಕ ನಟ ಜಗ್ಗೇಶ್‌ ಕಪ್ಪು ಮೈಬಣ್ಣದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಇಂಟ್ರೆಸ್ಟಿಂಗ್ ಮಾಹಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ʻʻನನ್ನನ್ನು ಕಪ್ಪು ಎಂದು ಅಣಕ ಮಾಡುತ್ತಿದ್ದರು ಬಾಲ್ಯದಲ್ಲಿ ಎಲ್ಲರು..!!

ಆಗ ನನಗೆ ಬಹಳ ಸಿಟ್ಟು ಬರುತ್ತಿತ್ತು. ನಾನು ಯೌವನದಲ್ಲಿ ಬೆಳ್ಳಗಾಗಲು ಅನೇಕ ಕೆಟ್ಟ ಪ್ರಯತ್ನ ಮಾಡಿದ್ದುಂಟು!

ನಟನಾದ ಮೇಲೆ ನನ್ನ ಮ್ಯಾಕ್ಸ್‌ ಫ್ಯಾಕ್ಟರ್‌ (max factor) ಮೇಕಪ್‌, ಅಂಬರೀಶ್‌ ಅವರ, ರಜನಿಯವರ, ವಿಜಯಕಾಂತ್, ಶಿವಣ್ಣ ಕೂಡ ಬಳಸುತ್ತಿದ್ದರು. ನಾನು ಬಳಸುತ್ತಿದ್ದ ಪ್ಯಾನ್‌ ಕೇಕ್‌ ಇಂದು ವಿಶ್ವದಲ್ಲಿ ಮರೆಯಾದ ಪ್ಯಾನ್‌ ಕೇಕ್‌ . ಆದರೆ ನನ್ನ ಅದೃಷ್ಟ ಅದು ನನ್ನ ಬಳಿ ಇನ್ನೂ 50 ಸಿನಿಮಾಗೆ ಸಾಕಾಗುತ್ತದೆ ಅಪ್ಟಿದೆ. ಅನೇಕರು ಕೇಳಿದರು ಈ ಪ್ಯಾನ್‌ ಕೇಕ್‌ ಕೊಡಿ ಎಂದು (pancake). ನಾನು ನೀಡುವುದಿಲ್ಲಾ ಎಂದೆ. ಕಾರಣ ಅದರ ಮೇಲಿನ ವಿಪರೀತ ಪ್ರೀತಿ ಹಾಗೂ ಭಕ್ತಿ. ಅದು ಹಚ್ಚಿದರೆ ನನ್ನ ಕಪ್ಪು ಅಂದವರು ಮೌನವಾಗುತ್ತಾರೆ. ಇದನ್ನು ಬಳಸುವಾಗ ಅಯ್ಯೋ ನಾನು ನಿಜವಾಗಲು ಈ ಬಣ್ಣ ಹೊಂದಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸುತ್ತದೆ. ಆದರೆ ನನ್ನ ಮೊಮ್ಮಗ ಅರ್ಜುನ ಯಾವ pancake ಬಳಸದಂತೆ ಬಣ್ಣ ಹಚ್ಚಿಕೊಂಡೇ ಬಂದಿದ್ದಾನೆ. ಭೂಮಿಗೆ ಇಷ್ಟು ಹೇಳಲು ಕಾರಣ ಇಂದು ಇವನು 9ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಅಂದರೆ ಅವನ ಹುಟ್ಟುಹಬ್ಬ. ಹುಟ್ಟು ಹಬ್ಬದ ಶುಭಾಶಯಗಳು ಕಂದ. ದೇವರು ಒಳ್ಳೆಯದು ಮಾಡಲಿʼʼ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಜಗ್ಗೇಶ್‌ ಅವರ ಹಿರಿಯ ಪುತ್ರ ಗುರುರಾಜ್ ಅವರ ಮಗ ಅರ್ಜುನ್. ಮೊಮ್ಮಗ ಎಂದರೆ ಜಗ್ಗೇಶ್ ಅವರಿಗೆ ಬಹಳ ಪ್ರೀತಿ. ಈ ಹಿನ್ನಲೆಯಲ್ಲಿ ಮೊಮ್ಮಗನಿಗೆ ಶುಭಕೋರುವ ಪೋಸ್ಟ್‌ನಲ್ಲಿ ಜಗ್ಗೇಶ್‌ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ತಮ್ಮ ಅನಿಸಿಕೆಯನ್ನು ಶೇರ್‌ ಮಾಡಿಕೊಂಡಿದ್ದಾರೆ.

ಇನ್ನು ಜಗ್ಗೇಶ್‌ ಅವರ ಸಿನಿಮಾ ವಿಚಾರಕ್ಕೆ ಬಂದರೆ ಅವರು ಕೊನೆಯದಾಗಿ ನಟಿಸಿದ ‘ರಂಗನಾಯಕ’ ಸಿನಿಮಾ ತೆರೆಗೆ ಬಂದಿತ್ತು. ಆದರೆ ಚಿತ್ರ ಗೆಲ್ಲಲಿಲ್ಲ.

Tags:    

Similar News