ಬಹುನಿರೀಕ್ಷೆಯ ಯುವ ಸಿನಿಮಾದ ಟ್ರೇಲರ್ ರಿಲೀಸ್
ಯುವ ರಾಜ್‌ಕುಮಾರ್, ಯುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ.;
ರಾಜ್‌ಕುಮಾರ್ ಕುಟುಂಬದ ಕುಡಿ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್, ಯುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಟ್ರೇಲರ್ ಅನಾವರಣಗೊಂಡಿದೆ.
ಟ್ರೈಲರ್ ನೋಡಿದರೆ ಯುವ ರಾಜ್ ಕುಮಾರ್ ಅವರನ್ನು ಕಾಲೇಜ್ ಯಂಗ್ ಬಾಯ್, ಮಾಸ್ ಹೀರೋ, ರೊಮ್ಯಾಂಟಿಕ್ ಲವರ್ ಬಾಯ್ ಆಗಿ ನೋಡುವ ಎಲ್ಲಾ ಆ್ಯಂಗಲ್ ಸಿಗಲಿದೆ ಎನ್ನುವುದಂತೂ ಖಚಿತವಾಗಿದೆ.
ಯುವ ಕಾಲೇಜು ವಿದ್ಯಾರ್ಥಿಯಾಗಿದ್ದು, ಮತ್ತೊಂದು ಬಣದೊಂದಿಗೆ ಜಗಳವಾಡುತ್ತಾನೆ. ತನ್ನ ತಂದೆ ಪದೇ ಪದೇ ಮನವಿ ಮಾಡಿದರೂ, ಆತನನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ. ಆದರೂ ಕಾಲೇಜು ಜೀವನವು ಕೊನೆಗೊಳ್ಳುತ್ತಿದ್ದಂತೆ ಪದವಿ ಮುಗಿದ ಬಳಿಕ ಯುವ ಸೇರೋದು ಒಂದು ಡಿಲಿವರಿ ಪಾರ್ಟ್ನರ್ ಆಗಿ. ಅಲ್ಲಿಂದ ಬದುಕು ಏನು ಎಂಬುದು ಗೊತ್ತಾಗುತ್ತದೆ. ದುಡಿಯೋಕೆ ಆರಂಭಿಸಿದ ಮೇಲೆ ತಂದೆಯ ನೋವು ಕಥಾ ನಾಯಕನಿಗೆ ತಿಳಿಯೋಕೆ ಆರಂಭ ಆಗುತ್ತದೆ.
ಯುವ ಚಿತ್ರದ ಟ್ರೇಲರ್
ಚಿತ್ರದಲ್ಲಿ ಯುವ, ಅಚ್ಯುತ್ ಕುಮಾರ್, ಸಪ್ತಮಿ ಗೌಡ, ಸುಧಾರಾಣಿ, ಕಿಶೋರ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದಲ್ಲಿ ತಂದೆ-ಮಗನ ಬಾಂಧವ್ಯದ ಬಗ್ಗೆಯೂ ಇದೆ.
ಈ ಚಿತ್ರವನ್ನು ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಮಾರ್ಚ್ 29ರಂದು ಈ ಚಿತ್ರ ರಿಲೀಸ್ ಆಗಲಿದೆ.