'ದಿ ಗರ್ಲ್‌ಫ್ರೆಂಡ್' ಸಿನಿಮಾದ ರಶ್ಮಿಕಾ ಮಂದಣ್ಣ, ದೀಕ್ಷಿತ್ ಶೆಟ್ಟಿಯ ಮೊದಲ ಹಾಡು ಬಿಡುಗಡೆ

ನಟ ದೀಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಇದೇ ಮೊದಲ ಬಾರಿ ಕೈಜೋಡಿಸಿದ್ದು, ಸಾಂಗ್​​ ರೊಮ್ಯಾಂಟಿಕ್​ ಆಗಿ ಮೂಡಿಬಂದಿದೆ.;

Update: 2025-07-18 12:32 GMT

ರಶ್ಮಿಕಾ ಮಂದಣ್ಣ ಮತ್ತು  ನಟ ದೀಕ್ಷಿತ್ ಶೆಟ್ಟಿ ಜೋಡಿಯ 'ದಿ ಗರ್ಲ್‌ಫ್ರೆಂಡ್' ಚಿತ್ರದ ಮೊದಲ ಹಾಡು 'ಸ್ವರವೇ' ಅನಾವರಣಗೊಂಡಿದೆ.

ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ದಿ ಗರ್ಲ್‌ಫ್ರೆಂಡ್'ನಲ್ಲಿ ಕನ್ನಡ ಚಿತ್ರರಂಗದ ಭರವಸೆಯ ನಟ ದೀಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದು. ಇದೀಗ ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದೆ.

ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಗುರುತಿಸಿಕೊಂಡಿದ್ದು, ಈ ಸಿನಿಮಾ ಕೂಡಾ ಬಹುಭಾಷೆಗಳಲ್ಲಿ ಮೂಡಿಬರುತ್ತಿದೆ. ಅದರಂತೆ ಹಾಡು ಕೂಡಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದೆ.  ನಟ ದೀಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಇದೇ ಮೊದಲ ಬಾರಿ ಕೈಜೋಡಿಸಿದ್ದು, ಸಾಂಗ್​​ ರೊಮ್ಯಾಂಟಿಕ್​ ಆಗಿ ಮೂಡಿಬಂದಿದೆ.

Full View

ಈ ಬಗ್ಗೆ ನಟ ರಶ್ಮಿಕಾ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ ಹಾಡು​ ಶೇರ್ ಮಾಡಿದ್ದು, ''ನಾನು ಹಾಡನ್ನು ಕೇಳಿದ ಮೊದಲ ಕ್ಷಣದಿಂದ.... ಬಹಳ ಹತ್ತಿರವಾಯಿತು. ಮೃದು, ಭಾವನಾತ್ಮಕ, ಅರಿವಿಲ್ಲದೆಯೇ ಗುನುಗುವಂತಹ ಮಧುರ... ಈಗದು ನಿಮ್ಮದಾಗಿದೆ. ಶೂಟಿಂಗ್​ ಸಂದರ್ಭ ನಾನು ಆ ಚಿತ್ರದೊಳಗಿನ ಒಂದು ಪುಟ್ಟ ಚಿತ್ರದಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ಪ್ರತೀ ಫ್ರೇಮ್ ಕೂಡಾ ಆ ಸಮಯಕ್ಕೆ ಪ್ರೋಝನ್​​ ಕ್ಷಣದಂತೆ ಭಾಸವಾಗುತ್ತಿತ್ತು. ಹಾಡು ನಿಮ್ಮ ಹೃದಯ ತಲುಪಿದರೆ ನನಗೆ ತಿಳಿಸಿ'' ಎಂದು ಬರೆದುಕೊಂಡಿದ್ದಾರೆ.

ʼದಿ ಗರ್ಲ್‌ ಫ್ರೆಂಡ್‌ʼ ರಾಹುಲ್ ರವೀಂದ್ರನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ರೇಮಕಥೆಯಾಗಿದೆ. ಗೀತಾ ಆರ್ಟ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಪ್ರಸ್ತುತ ಪಡಿಸುತ್ತಿದ್ದಾರೆ. ಸಿನಿಮಾಗೆ ಧೀರಜ್ ಮೊಗಿಲಿನೇನಿ ಮತ್ತು ವಿದ್ಯಾ ಕೊಪ್ಪಿನೀಡಿ ಬಂಡವಾಳ ಹೂಡಿದ್ದಾರೆ.

ಹೇಶಮ್ ಅಬ್ದುಲ್ ವಹಾಬ್ ಹಾಡಿಗೆ ಅದ್ಭುತ ಮ್ಯೂಸಿಕ್‌ ನೀಡುವುದರ ಜೊತೆ ಧ್ವನಿಯಾಗಿದ್ದಾರೆ. ನಾಗಾರ್ಜುನ್‌ ಶರ್ಮಾ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ನಡುವಿನ ಆನ್ ಸ್ಕ್ರೀನ್ ಕೆಮಿಸ್ಟ್ರಿ ಹಾಡಿನ ಮೋಡಿಗೆ ಮತ್ತಷ್ಟು ಮೆರುಗು ನೀಡಿದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ದಿ ಗರ್ಲ್‌ಫ್ರೆಂಡ್' ಶೀಘ್ರದಲ್ಲೇ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. 

Tags:    

Similar News