‘ಕಾಂತಾರ-1’ ಅಬ್ಬರಕ್ಕೆ ಹೆದರಿ ಸೆಪ್ಟೆಂಬರ್‌ನಲ್ಲಿ ಸಿನಿಜಾತ್ರೆ: ಒಂದೇ ದಿನ ತೆರೆಗೆ ಅಪ್ಪಳಿಸಲಿವೆ 10 ಕನ್ನಡ ಚಿತ್ರಗಳು!

ಸೆಪ್ಟೆಂಬರ್ ತಿಂಗಳಿನಲ್ಲಿ ಕನ್ನಡದ ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಸೆಪ್ಟೆಂಬರ್ 12ರಂದು ಬರೋಬ್ಬರಿ 10 ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.;

Update: 2025-09-10 11:56 GMT

ಈ ವಾರ 10ಸಿನಿಮಾಗಳು ತೆರೆಗೆ ಬರಲಿವೆ. 

Click the Play button to listen to article

ಕಾಂತಾರ ಸಿನಿಮಾದ ಸೀಕ್ವೆಲ್ ಕಾಂತಾರ-1, ಅಕ್ಟೋಬರ್ 2ರಂದು ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ ಮತ್ತು ನಟಿಸಿದ ಕಾಂತಾರ ಸಿನಿಮಾ 2022 ರಲ್ಲಿ ದೊಡ್ಡ ಯಶಸ್ಸು ಗಳಿಸಿತ್ತು. ಹಾಗಾಗಿ ಇದರ ಸೀಕ್ವೇಲ್‌ ಆಗಿರುವ  ಕಾಂತಾರ-1 ಮೇಲಿರುವ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿವೆ. ಈ ಕಾರಣದಿಂದಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಕನ್ನಡದ ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಸೆಪ್ಟೆಂಬರ್ 12ರಂದು ಬರೋಬ್ಬರಿ 10 ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

ಬಿಡುಗಡೆಯಾಗುತ್ತಿರುವ ಸಿನಿಮಾಗಳು

ಜಂಬೂ ಸರ್ಕಸ್: ಎಂ.ಡಿ. ಶ್ರೀಧರ್ ನಿರ್ದೇಶನದ ಈ ಚಿತ್ರವನ್ನು ಎಚ್.ಸಿ. ಸುರೇಶ್ ನಿರ್ಮಿಸಿದ್ದಾರೆ. ಪ್ರವೀಣ್ ತೇಜ್ ಮತ್ತು ಅಂಜಲಿ ಅನೀಶ್ ನಟಿಸಿರುವ ಈ ಸಿನಿಮಾ ಇಬ್ಬರು ಆತ್ಮೀಯ ಸ್ನೇಹಿತರ ಕಥೆಯನ್ನು ಹೇಳುತ್ತದೆ. ಒಂದೇ ದಿನ ಹುಟ್ಟಿದ ಮಕ್ಕಳು, ಒಂದೇ ಶಾಲಾ-ಕಾಲೇಜು, ಒಂದೇ ಮಂಟಪದಲ್ಲಿ ಮದುವೆ ಹೀಗೆ ಅನೇಕ ಕಾಕತಾಳೀಯಗಳನ್ನು ಹೊಂದಿರುವ ಕಥೆಯಲ್ಲಿ ಹಲವು ಟ್ವಿಸ್ಟ್‌ಗಳಿವೆ ಎನ್ನಲಾಗಿದೆ. 

 ಸೆಪ್ಟೆಂಬರ್ 10: ಸಾಯಿಪ್ರಕಾಶ್ ಅವರ 105ನೇ ನಿರ್ದೇಶನದ ಈ ಚಿತ್ರವನ್ನು ರಾಜಮ್ಮ ಸಾಯಿಪ್ರಕಾಶ್ ನಿರ್ಮಿಸಿದ್ದಾರೆ. ಶಶಿಕುಮಾರ್, ಗಣೇಶ್ ರಾವ್ ಕೇಸರ್ಕರ್, ಸಂಧ್ಯಾರಾಣಿ ಮತ್ತು ಶ್ರೀರಕ್ಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಭಾವನಾತ್ಮಕ ಮತ್ತು ಹಾಸ್ಯಮಯ ಸಿನಿಮಾ ಇದಾಗಿದೆ. 

 ಸನ್ ಆಫ್ ಮುತ್ತಣ್ಣ; ಪ್ರಣಾಮ್ ದೇವರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಶ್ರೀಕಾಂತ್ ಹುಣಸೂರು ಆಕ್ಷನ್ ಕಟ್ ಹೇಳಿದ್ದಾರೆ. ಖುಷಿ ರವಿ ನಾಯಕಿಯಾಗಿದ್ದು, ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ತಂದೆ-ಮಗನ ಬಾಂಧವ್ಯದ ಸುತ್ತ ಹೆಣೆದಿರುವ ಸಿನಿಮಾ ಇದಾಗಿದೆ. 

 ನಿದ್ರಾದೇವಿ ನೆಕ್ಟ್ ಡೋರ್: ಸುರಾಗ್ ನಿರ್ದೇಶನದ ಮತ್ತು ಜಯರಾಮ ದೇವಸಮುದ್ರ ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರವೀ‌ರ್ ಮತ್ತು ರಿಷಿಕಾ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ನಿದ್ದೆ ಸಮಸ್ಯೆ ಇರುವ ಯುವಕನೊಬ್ಬನ ಕಥೆ. ತನ್ನ ಸಮಸ್ಯೆಯಿಂದ ಹೊರಬರಲು ಅವನು ನಡೆಸುವ ಹೋರಾಟದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. 

 ಮಿಡಲ್ ಕ್ಲಾಸ್ ರಾಮಾಯಣ: ಧನುಶ್ ಗೌಡ ವಿ ನಿರ್ದೇಶನದ ಮತ್ತು ಜಯರಾಮ್ ಗಂಗಪ್ಪನಹಳ್ಳಿ ನಿರ್ಮಿಸಿರುವ ಈ ಚಿತ್ರದಲ್ಲಿ ಮೋಕ್ಷಿತಾ ಪೈ ಮತ್ತು ವಿನು ಗೌಡ ಮುಖ್ಯ ಪಾತ್ರಗಳಲ್ಲಿದ್ದಾರೆ. ಒಬ್ಬ ಕಪ್ಪು ಹುಡುಗಿಯನ್ನು ಪ್ರೀತಿಸಿ ಮದುವೆಯಾಗುವ ನಾಯಕನ ಕಥೆಯು ಹಲವು ಸವಾಲುಗಳನ್ನು ಎದುರಿಸುವ ಅಂಶಗಳನ್ನು ಒಳಗೊಂಡಿದೆ. ಎಸ್. ನಾರಾಯಣ್ ಮತ್ತು ವೀಣಾ ಸುಂದರ್ ಕೂಡಾ ಸಿನಿಮಾದಲ್ಲಿ ನಟಿಸಿದ್ದಾರೆ. 

ರಕ್ಷಕ: ವಿಜಯ್‌ಕುಮಾರ್ ನಿರ್ದೇಶನ ಮತ್ತು ನಟನೆ ಮಾಡಿರುವ ಈ ಚಿತ್ರದಲ್ಲಿ ಅವರು ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. 

 ಮಾಯಾವಿ: ಶಂಕರ್ ಜಿ. ನಿರ್ದೇಶನದ ಮತ್ತು ಡಾ. ಮಹಂತೇಶ್ ಹೆಚ್. ನಿರ್ಮಿಸಿರುವ ಈ ಚಿತ್ರದಲ್ಲಿ ರಘುರಾಮ್ ನಾಯಕರಾಗಿ ಮತ್ತು ನಿಶ್ಚಿತಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಸಸ್ಪೆನ್ಸ್ ಮತ್ತು ಕ್ರೈಮ್ ಥ್ರಿಲ್ಲರ್ ಸಿನಿಮಾ ಆಗಿದೆ. 

ರೂಮ್‌ಬಾಯ್: ಲಿಖೀತ್ ಸೂರ್ಯ ನಾಯಕನಾಗಿ ಮತ್ತು ನಿರ್ಮಾಪಕರಾಗಿರುವ ಈ ಚಿತ್ರವನ್ನು ರವಿ ನಾಗಡದಿನ್ನಿ ನಿರ್ದೇಶಿಸಿದ್ದಾರೆ. ಸೈಕಾಲಜಿಕಲ್ ಸಸ್ಪೆನ್ಸ್ ಕಂ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಅನೇಕ ಹೊಸ ಕಲಾವಿದರು ಇದ್ದಾರೆ.

ಗುರಿ: ಸೆಲ್ವಂ ಮಾದಪ್ಪನ್ ನಿರ್ದೇಶನದ ಈ ಚಿತ್ರವನ್ನು ರಾಧಿಕಾ.ಎಸ್.ಆರ್ ಮತ್ತು ಚಿತ್ರಲೇಖಾ.ಎಸ್. ನಿರ್ಮಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವಿನ ಸಂಘರ್ಷ ಹಾಗೂ ಶಿಕ್ಷಕ-ವಿದ್ಯಾರ್ಥಿ ಬಾಂಧವ್ಯವನ್ನು ಈ ಸಿನಿಮಾ ಹೊರತರಲಿದೆ. 

ರಾಮನಗರ: ವಿಜಯ್ ರಾಜ್ ನಿರ್ದೇಶಿಸಿರುವ ಈ ಚಿತ್ರವನ್ನು ಸಿ.ಕೆ. ಮಂಜುನಾಥ್ ನಿರ್ಮಿಸಿದ್ದಾರೆ. ಪ್ರಭು ಸೂರ್ಯ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ರಾಜ ಯಾರ್ ಗೊತ್ತಾ ಎಂಬ ಟ್ಯಾಗ್‌ಲೈನ್ ಇದೆ.

Tags:    

Similar News