ಸದ್ದಿಲ್ಲದೆ ನಡೆಯಿತು ಸಿದ್ಧಾರ್ಥ್, ಅದಿತಿ ರಾವ್ ಹೈದರಿ ಮದುವೆ
ಜನಪ್ರಿಯ ನಟ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಗುಟ್ಟಾಗಿ ವಿವಾಹವಾಗಿದ್ದಾರೆ.;
ಜನಪ್ರಿಯ ನಟ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಗುಟ್ಟಾಗಿ ದೇವಾಲಯದಲ್ಲಿ ವಿವಾಹವಾಗಿದ್ದಾರೆ.
ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಕಳೆದ ಕೆಲವು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಜೋಡಿ ಲಿವ್ ಇನ್ ರಿಲೇಷನ್ಶೀಪ್ನಲ್ಲಿದೆ. ಆದಷ್ಟು ಬೇಗ ವಿವಾಹವಾಗಲಿದೆ ಎನ್ನಲಾಗಿತ್ತು. ಅದರಂತೆ ಇದೀಗ ತೆಲಂಗಾಣದ ಶ್ರೀರಂಗಪುರ್‌ನ ರಂಗನಾಥ ಸ್ವಾಮಿ ದೇಗುಲದ ಮಂಟಪದಲ್ಲಿ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಅವರುಗಳು ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನಲಾಗಿದೆ.
ಆದರೆ, ತಮ್ಮ ವಿವಾಹದ ಕುರಿತು ಸಿದ್ಧಾರ್ಥ್ ಮತ್ತು ಅದಿತಿ ಇನ್ನೂ ಅಧಿಕೃತವಾಗಿ ವಿವರ ನೀಡಿಲ್ಲ.
ಈ ಮದುವೆ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಮತ್ತು ದಂಪತಿಯ ಆಪ್ತರು ಮಾತ್ರ ಭಾಗವಹಿಸಿದ್ದರು ಎನ್ನಲಾಗಿದೆ. ಇವರ ವಿವಾಹ ಕಾರ್ಯಕ್ರಮ ಕೊನೆಯವರೆಗೂ ಗುಟ್ಟಾಗಿಯೇ ಇತ್ತು. ಇವರಿಬ್ಬರು ತಮ್ಮ ವೈಯಕ್ತಿಕ ಬದುಕಿನ ಕುರಿತು ಎಲ್ಲೂ ಪ್ರಚಾರವಾಗದಂತೆ ಎಚ್ಚರವಹಿಸಿದ್ದರು.
ನಟ ಸಿದ್ಧಾರ್ಥ್ ಮತ್ತು ಅದಿತಿ; ಇಬ್ಬರಿಗೂ ಇದು ಎರಡನೇ ವಿವಾಹ. ಸಿದ್ಧಾರ್ಥ್ 2003ರಲ್ಲಿ ಮೇಘನಾ ಜತೆ ವಿವಾಹವಾಗಿದ್ದರು. ಆದರೆ ಮೂರು ವರ್ಷದಲ್ಲಿ ಅಂದರೆ 2006ರಲ್ಲಿ ದೂರಾಗಿದ್ದರು. 2007ರಲ್ಲಿ ಡಿವೋರ್ಸ್ ನೀಡಿದ್ದರು. ನಟಿ ಅದಿತಿ ರಾವ್ ಹೈದರಿಗೂ ಇದು ಎರಡನೇ ವಿವಾಹ. ಅದಿತಿಗೆ 23ನೇ ವಯಸ್ಸಿನಲ್ಲಿ ವಕೀಲ, ನಟ ಸತ್ಯದೀಪ್ ಮಿಶ್ರಾ ಜತೆ ಮದುವೆಯಾಗಿತ್ತು. 2013ರಲ್ಲಿ ಇವರಿಬ್ಬರು ದೂರವಾಗಿದ್ದರು.
ಅದಿತಿ ಮತ್ತು ಸಿದ್ಧಾರ್ಥ್ ಮೊದಲ ಬಾರಿ ʼಮಹಾ ಸಮುದ್ರಂʼ ಸಿನಿಮಾದ ಶೂಟಿಂಗ್ ವೇಳೆ ಭೇಟಿಯಾಗಿದ್ದರು. ಈ ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಕಳೆದ ಒಂದು ವರ್ಷ ಇವರಿಬ್ಬರು ಲಿವ್ ಇನ್ ರಿಲೇಷನ್ಶೀಪ್ನಲ್ಲಿದ್ದರು. ಇದೀಗ ತಮ್ಮ ಸಂಬಂಧಕ್ಕೆ ಮದುವೆಯ ಮುದ್ರೆ ಒತ್ತಿದ್ದಾರೆ.
ನಟ ಸಿದ್ಧಾರ್ಥ್ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.