ಮಹೇಶ್ ಬಾಬು-ರಾಜಮೌಳಿ 'ಗ್ಲೋಬೆಟ್ರೋಟರ್' ಚಿತ್ರದ ಹಾಡಿಗೆ ಶ್ರುತಿ ಹಾಸನ್ ಧ್ವನಿ
ಈ ಹಾಡನ್ನು ಟಿ ಸೀರೀಸ್ ತಮ್ಮ ಯೂಟ್ಯೂಬ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಶ್ರುತಿ ಹಾಸನ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡನ್ನು ರೆಕಾರ್ಡ್ ಮಾಡುತ್ತಿದ್ದರು.
ಶ್ರುತಿ ಹಾಸನ್
ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಹುನಿರೀಕ್ಷಿತ ಚಿತ್ರ 'ಗ್ಲೋಬ್‌ಟ್ರಾಟರ್'ಗೆ ಖ್ಯಾತ ನಟಿ ಮತ್ತು ಗಾಯಕಿ ಶ್ರುತಿ ಹಾಸನ್ ಅವರು ಧ್ವನಿಯಾಗಿದ್ದಾರೆ. ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ಗ್ಲೋಬಲ್ ಐಕಾನ್ ಪ್ರಿಯಾಂಕ ಚೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದ ತೆಲುಗು ಹಾಡೊಂದನ್ನು ಶ್ರುತಿ ಹಾಸನ್ ಹಾಡಿದ್ದಾರೆ.
ಕೀರವಾಣಿ ಸಂಗೀತಕ್ಕೆ ಮನಸೋತ ಶ್ರುತಿ
ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಅವರ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ. ಹಾಡಿನ ರೆಕಾರ್ಡಿಂಗ್ ನಂತರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿರುವ ಶ್ರುತಿ, ಈ ಅನುಭವವನ್ನು ತಮ್ಮ ಜೀವನದ 'ಅತ್ಯಂತ ವಿಶೇಷ ಕ್ಷಣ' ಎಂದು ಬಣ್ಣಿಸಿದ್ದಾರೆ. "ಕೀರವಾಣಿ ಸರ್ ಅವರ ಸಂಗೀತಕ್ಕೆ ಹಾಡಿರುವುದು
ಈ ಹಾಡನ್ನು ಟಿ ಸೀರೀಸ್ ತಮ್ಮ ಯೂಟ್ಯೂಬ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಶ್ರುತಿ ಹಾಸನ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡನ್ನು ರೆಕಾರ್ಡ್ ಮಾಡುತ್ತಿದ್ದರು.
ರೆಕಾರ್ಡಿಂಗ್ ವೇಳೆ ನಡೆದ ಒಂದು ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡ ಅವರು, "ಕೀರವಾಣಿ ಅವರು ಸಾಮಾನ್ಯವಾಗಿ ವಿಘ್ನೇಶ್ವರ ಮಂತ್ರದೊಂದಿಗೆ ರೆಕಾರ್ಡಿಂಗ್ ಆರಂಭಿಸುತ್ತಾರೆ. ಆದರೆ ಅಂದು ಅವರು ಪಿಯಾನೋದಲ್ಲಿ ನನ್ನ ತಂದೆಯ (ಕಮಲ್ ಹಾಸನ್) ಹಾಡನ್ನು ನುಡಿಸಲು ಆರಂಭಿಸಿದರು. ಆ ಕ್ಷಣ ನನಗೆ ಅತ್ಯಂತ ವಿಶೇಷವಾಗಿತ್ತು. ಅವರ ದಯೆ ಮತ್ತು ಪ್ರೀತಿಗೆ ನಾನು ಆಭಾರಿ," ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ನವೆಂಬರ್ 15ಕ್ಕೆ ಫಸ್ಟ್ ಲುಕ್ ಬಿಡುಗಡೆ
ಟಿ-ಸೀರೀಸ್ ಸಂಸ್ಥೆಯು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಶ್ರುತಿ ಹಾಸನ್ ಹಾಡಿರುವ ಈ ರೆಕಾರ್ಡಿಂಗ್ ಸೆಷನ್‌ನ ವಿಡಿಯೋವನ್ನು ಹಂಚಿಕೊಂಡಿದೆ. ಚಿತ್ರತಂಡವು ಇದೇ ನವೆಂಬರ್ 15 ರಂದು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅಂದು ಚಿತ್ರದ ಮೊದಲ ನೋಟವನ್ನು (ಫಸ್ಟ್ ಲುಕ್) ಅನಾವರಣಗೊಳಿಸಲು ಸಜ್ಜಾಗಿದೆ.