ಮೂರು ದಶಕದ ಬಳಿಕ ಶಿವಣ್ಣ-ಪ್ರೇಮಾ ‘ಓಂ’ ರೀ ಕ್ರಿಯೇಷನ್
ʼಮಧುʼ ಬಳಿ ಬರುವ ʼಸತ್ಯʼ ಪ್ರೀತಿಸು ಎಂದು ಪೀಡಿಸುತ್ತಾನೆ. ಈ ದೃಶ್ಯವನ್ನು ರೀ ಕ್ರಿಯೇಟ್ ಮಾಡಲಾಗಿದೆ.;
ನಟ ಶಿವರಾಜ್ಕುಮಾರ್ ಹಾಗೂ ಪ್ರೇಮಾ ನಟನೆಯ ‘ಓಂ’ ಸಿನಿಮಾ ಬಿಡುಗಡೆಗೊಂಡು 30 ವರ್ಷ ಪೂರ್ಣಗೊಳ್ಳುತ್ತಿದೆ. 1995ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು.
ಈಗ ಜೀ ಕನ್ನಡ ವೇದಿಕೆ ಮೇಲೆ ಶಿವರಾಜ್ಕುಮಾರ್ ಮತ್ತು ನಟಿ ಪ್ರೇಮಾ ಅವರು ‘ಓಂ’ ಚಿತ್ರವನ್ನು ರೀ ಕ್ರಿಯೇಟ್ ಮಾಡುತ್ತಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿದೆ.
‘ಒಂ’ ಚಿತ್ರವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿದ್ದರು. 1995ರ ಮೇ 19ರಂದು ಈ ಚಿತ್ರ ರೀಲೀಸ್ ಆಯಿತು. ಈ ಸಿನಿಮಾ ಈವರೆಗೆ 550ಕ್ಕೂ ಅಧಿಕ ಬಾರಿ ರೀ-ರಿಲೀಸ್ ಆಗಿದೆ. ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರು ಸತ್ಯ ಹೆಸರಿನ ಪಾತ್ರ ಮಾಡಿದರೆ, ಪ್ರೇಮಾ ಅವರು ಮಧು ಹೆಸರಿನ ಪಾತ್ರ ಮಾಡಿದ್ದರು.
ʼಮಧುʼ ಬಳಿ ಬರುವ ʼಸತ್ಯʼ ಪ್ರೀತಿಸು ಎಂದು ಪೀಡಿಸುತ್ತಾನೆ. ಈ ದೃಶ್ಯವನ್ನು ರೀ ಕ್ರಿಯೇಟ್ ಮಾಡಲಾಗಿದೆ. ‘ದಂತದ ಗೊಂಬೆ ತರ ಕಾಣ್ತಾ ಇದೀಯಾ, ಐ ಲವ್ ಯೂ ಮಧು’ ಎಂದು ಶಿವಣ್ಣ ಹೇಳಿದ್ದಾರೆ. ‘ನನಗೆ ನೀನು ಇಷ್ಟ ಇಲ್ಲ ಅಂದ್ರೂ ಯಾಕೆ ನನ್ನ ಪೀಡಿಸ್ತೀಯಾ’ ಎಂದು ಪ್ರೇಮಾ ಕೇಳಿದ್ದಾರೆ. ಇಬ್ಬರ ಎನರ್ಜಿ ಅದೇ ರೀತಿ ಇದೆ. ಡೈಲಾಗ್ ಡೆಲಿವರಿ ಆಗ ಹೇಗಿತ್ತೋ ಹಾಗೆಯೇ ಇತ್ತು.