ಶರಣ್ ಅಭಿನಯದ "ಅವತಾರ ಪುರುಷ 2" ಏಪ್ರಿಲ್ 5ಕ್ಕೆ ಬಿಡುಗಡೆ

ʼಅವತಾರ ಪುರುಷ 2ʼ ಚಿತ್ರದಿಂದ ʼಇವನೇ ಅವತಾರ ಪುರುಷʼ ಎಂಬ ಭರ್ಜರಿ ರಾಪ್ ಸಾಂಗ್ ಬಿಡುಗಡೆಯಾಗಿದೆ.;

Update: 2024-03-23 05:19 GMT
ಶರಣ್ ಅಭಿನಯದ ʼಅವತಾರ ಪುರುಷ 2ʼ ಏಪ್ರಿಲ್ 5ಕ್ಕೆ ಬಿಡುಗಡೆಯಾಗಲಿದೆ.
Click the Play button to listen to article

ಸಿಂಪಲ್ ಸುನಿ ನಿರ್ದೇಶನದ ಹಾಗೂ ಶರಣ್ ನಾಯಕರಾಗಿ ನಟಿಸಿರುವ ʼಅವತಾರ ಪುರುಷ 2ʼ ಚಿತ್ರದಿಂದ ʼಇವನೇ ಅವತಾರ ಪುರುಷʼ ಎಂಬ ಭರ್ಜರಿ ರಾಪ್ ಸಾಂಗ್ ಬಿಡುಗಡೆಯಾಗಿದೆ.

ರಾಪ್ ಸಾಂಗ್ ನಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಎಂ.ಸಿ.ಬಿಜ್ಜು ಈ ಹಾಡನ್ನು ಹಾಡಿದ್ದಾರೆ. ಔರಾ ಹಾಗೂ ಅಭಿನಂದನ್ ಕಶ್ಯಪ್ ಕೂಡ ಗಾಯನಕ್ಕೆ ಬಿಜ್ಜು ಅವರ ಜೊತೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ನಿರ್ಮಾಪಕರು ಈ ಹಾಡನ್ನು ಮಾಡೋಣ ಎಂದಾಗ, ಮೊದಲು ಬೇಡ ಅಂದಿದ್ದೆ. ನಿರ್ಮಾಪಕರು ಪಟ್ಟು ಹಿಡಿದು ಮಾಡೋಣ ಎಂದರು. ಕೆಲವೆ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣವಾಯಿತು. ಶಿಶುನಾಳ ಶರೀಫರ "ತರವಲ್ಲ ತಂಗಿ ನಿನ್ನ ತಂಬೂರಿ" ಹಾಡಿನ ಮೊದಲ ಸಾಲಿನಿಂದ ಈ ಹಾಡು ಆರಂಭವಾಗುತ್ತದೆ. ರಾಪ್ ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿರುವ ಎಂ.ಸಿ.ಬಿಜ್ಜು ಈ ಹಾಡನ್ನು ಬರೆದಿದ್ದಾರೆ. ಎಂ.ಸಿ.ಬಿಜ್ಜು, ಔರಾ ಹಾಗೂ ಸಂಗೀತ ನಿರ್ದೇಶಕ ಅಭಿನಂದನ್ ಕಶ್ಯಪ್ ಹಾಡಿದ್ದಾರೆ. ನಟಿ ಸಾತ್ವಿಕ ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಏಪ್ರಿಲ್ 5 ರಂದು ಚಿತ್ರ ತೆರೆಗೆ ಬರಲಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು.

ಮೊದಲು ಮಾರ್ಚ್ 22 ರಂದು ನಮ್ಮ ಚಿತ್ರ ಬಿಡುಗಡೆ ಎಂದು ತಿಳಿಸಲಾಗಿತ್ತು. ಈಗ ನಮ್ಮ ಚಿತ್ರ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ. ಆ ದಿನಗಳಲ್ಲಿ ಸಾಲುಸಾಲು ರಜೆ ಇರುವುದರಿಂದ ಈ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.

ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Tags:    

Similar News