ಹೃತಿಕ್ ರೋಷನ್ ಜೊತೆ 'ಕ್ರಿಶ್- 4' ನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ?

'ಕ್ರಿಶ್ ʼಸರಣಿಯ ನಾಲ್ಕನೇ ಭಾಗದ ಸಿನಿಮಾದ ಚಿತ್ರೀಕರಣ ಸೆಟ್ಟೇರಲು ಸಜ್ಜಾಗಿದೆ. ಹಿಂದಿನ ಮೂರು ಭಾಗಗಳಾದ 'ಕೋಯಿ ಮಿಲ್ ಗಯಾ', 'ಕ್ರಿಶ್-2' ಮತ್ತು 'ಕ್ರಿಶ್ -3' ಅನ್ನು ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶಿಸಿದ್ದರು.

Update: 2025-09-20 06:13 GMT

ಹೃತಿಕ್ ರೋಷನ್ ಜೊತೆ 'ಕ್ರಿಶ್ 4' ನಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗುವ ಸಾಧ್ಯತೆ ಇದೆ.  

ಹೃತಿಕ್ ರೋಷನ್ ಅವರ ಬಹುನಿರೀಕ್ಷಿತ ಸಿನಿಮಾ 'ಕ್ರಿಶ್- 4' ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ. 

'ಗುಡ್‌ಬೈ' ಮತ್ತು 'ಮಿಷನ್ ಮಜ್ನು' ಸಿನಿಮಾಗಳ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರು, 'ಪುಷ್ಪ', 'ಅನಿಮಲ್' ಮತ್ತು 'ಛಾವಾ' ಚಿತ್ರಗಳ ಮೂಲಕ ಯಶಸ್ವಿಯಾದರು. ಇತ್ತೀಚೆಗೆ ಸಲ್ಮಾನ್ ಖಾನ್ ಅವರ 'ಸಿಕಂದರ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ರಶ್ಮಿಕಾ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಪ್ರಸ್ತುತ ರಶ್ಮಿಕಾ ಅವರು 'ಥಾಮ' ಮತ್ತು 'ಕಾಕ್‌ ಟೇಲ್ -2' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

'ಕ್ರಿಶ್ʼ ಸರಣಿಯ ನಾಲ್ಕನೇ ಸಿನಿಮಾದ ಚಿತ್ರೀಕರಣ ಶೀಘ್ರವೇ ಆರಂಭವಾಗಲಿದೆ. ಹಿಂದಿನ ಮೂರು ಭಾಗಗಳಾದ 'ಕೋಯಿ ಮಿಲ್ ಗಯಾ', 'ಕ್ರಿಶ್-2' ಮತ್ತು 'ಕ್ರಿಶ್ -3' ಅನ್ನು ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶಿಸಿದ್ದರು. ಆದರೆ, ಶೀಘ್ರದಲ್ಲೇ ಪ್ರಾರಂಭವಾಗಲಿರುವ ನಾಲ್ಕನೇ ಭಾಗವನ್ನು ಸ್ವತಃ ಹೃತಿಕ್ ರೋಷನ್ ಅವರೇ ನಿರ್ದೇಶಿಸಲಿದ್ದಾರೆ. ಈ ಮೂಲಕ ಹೃತಿಕ್ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ಚಿತ್ರೀಕರಣ ಈ ವರ್ಷದ ಕೊನೆಯಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

Tags:    

Similar News