ಬರ್ತ್ಡೇ ದಿನವೇ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಅವರು ಏಕಂ ವೆಬ್ ಸಿರೀಸ್ ಬಗ್ಗೆ ಒಂದು ಅಪ್ಡೇಟ್ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ನಟ ಸಣ್ಣದೊಂದು ವಿಡಿಯೋ ಕ್ಲಿಪ್ ಶೇರ್ ಮಾಡಿದ್ದಾರೆ.;
ಸ್ಯಾಂಡಲ್‌ವುಡ್ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಜೂ.6 ರಂದು ತಮ್ಮ 41ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಅಭಿಮಾನಿಗಳೊಂದಿಗೆ ತಮ್ಮ ಮುಂದಿನ ವೆಬ್ ಸಿರೀಸ್ ಬಗ್ಗೆ ಅಪ್‌ಡೇಟ್‌ವೊಂದನ್ನು ನೀಡಿದ್ದಾರೆ.
ರಕ್ಷಿತ್ ಶೆಟ್ಟಿ ಅವರು ಏಕಂ ವೆಬ್ ಸಿರೀಸ್ ಬಗ್ಗೆ ಒಂದು ಅಪ್ಡೇಟ್ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ನಟ ಸಣ್ಣದೊಂದು ವಿಡಿಯೋ ಕ್ಲಿಪ್ ಶೇರ್ ಮಾಡಿದ್ದಾರೆ. ಇದರಲ್ಲಿ ಕೆಸರು ನೀರು ತುಂಬಿಕೊಂಡಿರುವ ದಾರಿ ಮಧ್ಯೆಯ ಸಣ್ಣ ಒಂದು ಭಾಗದಲ್ಲಿ ಜನರು ಅದನ್ನು ಮೆಟ್ಟಿಕೊಂಡೇ ಹೋಗುವುದನ್ನು ಕಾಣಬಹುದು.
ವಿಡಿಯೋ ಪೋಸ್ಟ್ ಮಾಡಿದ ನಟ ʻʻಬಹುನಿರೀಕ್ಷಿತ ವೆಬ್ ಸಿರೀಸ್ ಏಕಂ ಬಗ್ಗೆ ಒಂದು ಅಪ್ಡೇಟ್ ತರುತ್ತಿದ್ದೇವೆ. ಈ ಸ್ಥಳವನ್ನು ತುಂಬಾ ಹತ್ತಿರದಿಂದ ನೋಡಿ. ಮಚ್ ಲವ್ ಎಂದು ರಕ್ಷಿತ್ ಶೆಟ್ಟಿʼʼ ಎಂದು ಈ ಪೋಸ್ಟ್ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
ಏಕಂ ವೆಬ್ ಸಿರೀಸ್‌ನ ಟೀಸರ್
ತಮ್ಮ ಪರಮ್ ಸ್ಟುಡಿಯೋ ನಿರ್ಮಾಣದಲ್ಲಿ ಏಕಂ ಎಂಬ ವೆಬ್ ಸೀರಿಸ್ ಅನ್ನು ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್ ಅವರ ಮೊಟ್ಟ ಮೊದಲ ವೆಬ್ ಸೀರಿಸ್ ಇದಾಗಿದ್ದು, ಒಟ್ಟು 8 ಎಪಿಸೋಡ್ ಇರಲಿದೆ ಎನ್ನಲಾಗಿದೆ. ಸರಣಿಯ ಬಿಡುಗಡೆಯ ದಿನಾಂಕವನ್ನು ಜೂ.17 ರಂದು ಘೋಷಿಸಲು ನಿರ್ಧರಿಸಲಾಗಿದೆ.